ಕಮಲ್‌ ಹಾಸನ್ ಸಿನಿಮಾ ಬಿಡುಗಡೆ ತಡೆಯಲು ಆಗ್ರಹ

KannadaprabhaNewsNetwork |  
Published : Jun 01, 2025, 02:03 AM ISTUpdated : Jun 01, 2025, 09:46 AM IST
ನಟ ಕಮಲ್ ಹಾಸನ್ ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ತಡೆಯುವಂತೆ ಕರವೇ (ಪ್ರವೀಣ ಶಟ್ಟಿ ಬಣ) ಹಿರೇಕೆರೂರು ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನಟ ಕಮಲ್ ಹಾಸನ್ ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕರವೇ (ಪ್ರವೀಣ ಶಟ್ಟಿ ಬಣ) ಹಿರೇಕೆರೂರು ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಿರೇಕೆರೂರು: ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ವಿವಾದಿತ ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್ ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕರವೇ (ಪ್ರವೀಣ ಶಟ್ಟಿ ಬಣ) ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ ಮಾತನಾಡಿ, ಕನ್ನಡಿಗರ ಭಾವನೆಗೆ ಧಕ್ಕೆ ತರುವಂತೆ ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ತಪ್ಪು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನಟ, ರಾಜಕಾರಣಿ ಕಮಲ್ ಹಾಸನ್ ನೀಡಿದ್ದಾರೆ. ಈ ಸುಳ್ಳು ಮತ್ತು ಆಧಾರರಹಿತ ಹೇಳಿಕೆಯಿಂದ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಅಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ ಕಮಲ್ ಹಾಸನ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸದೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದು ಕನ್ನಡಿಗರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಕಮಲ್ ಹಾಸನ್ ಈ ಕೂಡಲೆ ಕ್ಷಮೆ ಯಾಚಿಸಬೇಕು ಹಾಗೂ ರಾಜ್ಯ ಸರ್ಕಾರ ಅವರ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಅವಕಾಶ ಕೊಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದರು.

ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ ಬಡಿಗೇರ, ಉಪಾಧ್ಯಕ್ಷ ಚಂದ್ರು ಕೂಟಿಹಾಳ, ಸಂಘಟನಾ ಕಾರ್ಯದರ್ಶಿ ಈರಪ್ಪ ಬಣಕಾರ, ಹಂಸಬಾವಿ ಹೋಬಳಿ ಘಟಕದ ಅಧ್ಯಕ್ಷ ರಾಜಶೇಖರ್ ಬಳ್ಳಾರಿ, ಅಬಲೂರು ಗ್ರಾಮ ಘಟಕದ ಅಧ್ಯಕ್ಷ ರಾಜು ಸಣಬಿನ, ಚಿಕ್ಕೋಣತಿ ಗ್ರಾಮ ಘಟಕದ ಅಧ್ಯಕ್ಷ ರಮೇಶ್ ಒಬಳೇರ, ಹಂಸಬಾವಿ ಗ್ರಾಮ ಘಟಕದ ಅಧ್ಯಕ್ಷ ಇಲಿಯಾಸ ದ್ಯಾಮನಕೊಪ್ಪ, ದೀಪು ಚೌಟಗೇರ, ಗುರುವಪ್ಪ ವಡ್ಡರ, ನವೀನ್ ಸಜ್ಜನ ಶೆಟ್ಟರ, ರಾಜು ದೊಡ್ಡ ಎಲಿವಾಳ ಹಾಗೂ ತಾಲೂಕು ಮುಖಂಡರು ಇದ್ದರು.

ನಟ ಕಮಲ್‌ ಹಾಸನ ಮೇಲೆ ಕಾನೂನು ಕ್ರಮಕ್ಕೆ ಕರವೇ ಆಗ್ರಹ:

ತಮಿಳು ನಟ ಕಮಲ್‌ ಹಾಸನ ಕನ್ನಡದ ಬಗ್ಗೆ ಹೇಳಿರುವ ಹೇಳಿಕೆ ಖಂಡನೀಯವಾಗಿದ್ದು, ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕರವೇ ಹಾನಗಲ್ಲ ತಾಲೂಕು ಅಧ್ಯಕ್ಷ ಎನ್.ಬಿ. ಮಲ್ಲಮ್ಮನವರ ಒತ್ತಾಯಿಸಿದರು.

ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಹೋಬಳಿ ತಹಸೀಲ್ದಾರರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು, ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರು ಹಾಗೂ ತಮಿಳರ ನಡುವೆ ವೈಮನಸ್ಸು ಹುಟ್ಟಲು ಕಾರಣರಾಗಿದ್ದಾರೆ. ಅವರ ಮೇಲೆ ಮೊಕದ್ದಮೆ ಹೂಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಕರವೇ ಕಾರ್ಯಕರ್ತರಾದ ಮಂಜುನಾಥ ಪೂಜಾರ, ಗೋಪಿ ವಡ್ಡರ, ಮಹದೇವ ಹರಿಜನ, ನಾಗರಾಜ ಕ್ಯಾಲಕೊಂಡ, ಹನುಮಂತ ಮುದ್ದಿನಕೊಪ್ಪ, ಗಣೇಶ ಧಾರವಾಡ, ಸಿದ್ದು ಮಲ್ಲಮ್ಮನವರ, ಶಿವು ಹಾವಣಗಿ, ಕುಮಾರ ಕಟ್ಟೇರ, ಗೌಸ ಲಕ್ಷ್ಮೇಶ್ವರ, ರಮೇಶ ಕುಲಸಾಪುರ, ಗೌಸಮೊದ್ದೀನ ವಾಲಿಕಾರ, ಅರುಣ ಗುಡಿ, ಗಂಗಾಧರ ಹೊಂಬಳೆಪ್ಪನವರ, ಫಕ್ಕೀರೇಶ ಚಲವಾದಿ, ಇಮಾಂಖಾಶೀಮ ಮಾಸನಕಟ್ಟಿ, ಗಿರೀಶ ಧಾರವಾಡ, ಸತೀಶ ಕ್ಯಾಲಕೊಂಡ, ಈಂತ್ಯಾಜ ಮುಲ್ಲಾ, ಸುಮಾನಲಿ ಕಲಕೊಪ್ಪ, ಇಮಾಂಖಾಸೀಂ ಗುಡ್ಡದ, ಚನ್ನಬಸಪ್ಪ ಸೋಮಣ್ಣನವರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ