ನಾಡದ್ರೋಹಿ ಎಂಇಎಸ್‌ ಪುಂಡಾಟಿಕೆ ತಡೆಗೆ ಒತ್ತಾಯ

KannadaprabhaNewsNetwork |  
Published : Jul 17, 2025, 12:37 AM IST
ಕನ್ನಡ ಕಡ್ಡಾಯಕ್ಕೆ ವಿರೋಧಿಸುತ್ತಿರುವ ಎಂಇಎಸ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ ಕೆಲ ಅಧಿಕಾರಿಗಳು ಎಂಇಎಸ್ ಪುಂಡರಿಗೆ ಮಾಹಿತಿ ನೀಡಿ ಕನ್ನಡ ಕಡ್ಡಾಯ ತಡೆಗಟ್ಟಲು ಹುನ್ನಾರ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿನಾಡು ಬೆಳಗಾವಿಯಲ್ಲಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆಗೆ ತಡೆ ಹಾಕುವಂತೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಮೇಯರ್‌, ಉಪಮೇಯರ್‌ಗೆ ಮನವಿ ಸಲ್ಲಿಸಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗೆ 2022ರಂತೆ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲಾದ್ಯಂತ ಕನ್ನಡ ಕಡ್ಡಾಯ ಅನುಷ್ಠಾನ ಪ್ರಕ್ರಿಯೆ ಜೋರಾಗಿದ್ದು ಅಧಿಕಾರಿಗಳು ಅದನ್ನು ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಎಂಇಎಸ್‌ ಪುಂಡರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದರು.ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಅವರ ವಾಹನಗಳಿಗೆ ಕನ್ನಡ ಅಂಕಿ ಸಂಖ್ಯೆ ಮತ್ತು ಕನ್ನಡದಲ್ಲಿ ಬರೆಸಿದ್ದನ್ನು ಖಂಡಿಸಿ ಇತ್ತೀಚಿಗೆ ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯಗೊಳಿಸುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ ಕೆಲ ಅಧಿಕಾರಿಗಳು ಎಂಇಎಸ್ ಪುಂಡರಿಗೆ ಮಾಹಿತಿ ನೀಡಿ ಕನ್ನಡ ಕಡ್ಡಾಯ ತಡೆಗಟ್ಟಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕನ್ನಡ ಕಡ್ಡಾಯ ಅನುಷ್ಠಾನ ನಿಲ್ಲಿಸಬಾರದು ಎಂದು ಆಗ್ರಹಿಸಿದರು.

ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸಬೇಕು. ಎಲ್ಲ ಕಾರ್ಯ ಚಟುವಟಿಕೆಗಳು ಕನ್ನಡದಲ್ಲಿ ನಡೆಯಬೇಕು. ಕನ್ನಡ ವಿರೋಧಿ ಅನುಸರಿಸುತ್ತಿರುವ ನಾಡದ್ರೋಹಿ ಅಧಿಕಾರಿಗಳನ್ನು ಗುರುತಿಸಿ ರಾಜ್ಯದ ಬೇರೆ ಬೇರೆ ಮಹಾನಗರ ಪಾಲಿಕೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದೇವೇಂದ್ರ ತಳವಾರ, ಸಂತೋಷ ತಳ್ಳಿಮನಿ, ಮಾರುತಿ ದೊಡ್ಡ ಲಕ್ಕಪ್ಪಗೋಳ, ಭರಮಣ್ಣಾ ಕಾಂಬಳೆ ,ವಾಸು ಬಸನಾಯ್ಕರ್ ಸಿದ್ರಾಯ ನಾಯಿಕ ಇತರರು ಪಾಲ್ಗೊಂಡಿದ್ದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ