ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಸಂಟನೆಯ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿ, ಜಿಲ್ಲಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಹಾವೇರಿ: ವ್ಯಕ್ತಿಯ ಮೇಲೆ ದೈಹಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಕೋಣನತಂಬಿಗಿ ಗ್ರಾಮದ ದ್ಯಾಮಪ್ಪ ಬಸಪ್ಪ ಮುಗದೂರ ಎಂಬಾತನಿಗೆ ಏಳು ವರ್ಷ ಶಿಕ್ಷೆ ಹಾಗೂ ₹74 ಸಾವಿರ ದಂಡ ವಿಧಿಸಿ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಅವರು ಇತ್ತೀಚೆಗೆ ತೀರ್ಪು ನೀಡಿದ್ದಾರೆ.ದ್ಯಾಮಪ್ಪ ಬಸಪ್ಪ ಮುಗದೂರ ಹಾಗೂ ಹಲ್ಲೆಯಾದ ವ್ಯಕ್ತಿಯ ಪರಿಚಯಸ್ಥರಾಗಿದ್ದರು. ದ್ಯಾಮಪ್ಪ ಬಸಪ್ಪ ಮುಗದೂರ ಪರಿಚಯದವನ ಮನೆಗೆ ಬಂದು ಹೋಗುತ್ತಿದ್ದನು. ಈ ಮಧ್ಯೆ ದ್ಯಾಮಪ್ಪ ಬಸಪ್ಪ ಮುಗದೂರ ಹಾಗೂ ಪರಿಚಯದವನ ಹೆಂಡತಿಗೆ ಅನೈತಿಕ ಸಂಬಂಧ ಎಂಬ ಸುದ್ದಿ ತಿಳಿದ ಅವನು, ದ್ಯಾಮಪ್ಪ ಬಸಪ್ಪ ಮುಗದೂರ ಮನೆಗೆ ಬರದಂತೆ ಸೂಚನೆ ನೀಡಿದ್ದ. ಆದಾಗ್ಯೂ ಪರಿಚಯಸ್ಥ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ದ್ಯಾಮಪ್ಪ ಬಸಪ್ಪ ಮುಗದೂರನನ್ನು ಚಪ್ಪಲಿಯಿಂದ ಹೊಡೆದ ಕಾರಣ, ಪರಿಚಯಸ್ಥನು ಹೊಳಲ ಗ್ರಾಮದಲ್ಲಿ 2019ರ ಆ. 16ರಂದು ರಾತ್ರಿ ವೇಳೆ ಮನೆಯಲ್ಲಿ ದನಕ್ಕೆ ಮೇವು ಹಾಕಲು ಬಂದಾಗ ದ್ಯಾಮಪ್ಪ ಬಸಪ್ಪ ಮುಗದೂರ ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಹಾಗೂ ಮಕ್ಕಳು ಮತ್ತು ಹೆಂಡತಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ಬಗ್ಗೆ ದೂರು ದಾಖಲಾಗಿತ್ತು.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಆಗಿನ ಪಿಎಸ್‌ಐ ರಾಜೇಂದ್ರ ನಾಯ್ಕ ಅವರು ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಿದ್ಧಾರೂಢ ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.