ಕನ್ನಡಪ್ರಭ ವಾರ್ತೆ ತಿಪಟೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಜ್ಯೋತಿಗಂಗಾಧರ್, ಈ ಶಾಲೆಗೆ ಸುತ್ತಲಿನ ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ೨೫ವರ್ಷಗಳಿಂದ ಕೇಂದ್ರ ಬಿಂದುವಾಗಿದ್ದು ಯಡವನಹಳ್ಳಿ ಹಾಗೂ ಹೆಗ್ಗಟ್ಟ ಎರಡೂ ಗ್ರಾಮ ಪಂಚಾಯಿತಿಗಳಿಗೂ ಇದೊಂದೇ ಪ್ರೌಢಶಾಲೆ ಇದೆ. ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ದಯಮಾಡಿ ಈ ಶಾಲೆಯನ್ನು ಕೆ.ಪಿ.ಎಸ್. ಶಾಲೆಯನ್ನಾಗಿ ಪರಿವರ್ತಿಸಿ ಮತ್ತಷ್ಟು ಸೌಲಭ್ಯಗಳು ದೊರೆಯುವಂತೆ ಮಾಡಬೇಕೆಂದು ಈ ಮೂಲಕ ಸುತ್ತ ಹತ್ತಾರು ಹಳ್ಳಿಗಳ ವಿಧ್ಯಾರ್ಥಿಗಳ ಭವಿಷ್ಯ ರೂಪಿಸಬೇಕೆಂದು ಆಗ್ರಹಿಸಿದರು.ಶಾಲೆಯ ಮುಖ್ಯೋಪಾದ್ಯಾಯರಾದ ಎನ್.ಜಿ.ಉಮಾದೇವಿ ಮನವಿ ಮಾಡಿಕೊಂಡು ನಮ್ಮ ಬಾಚೇನಹಳ್ಳಿ ಶಾಲೆಯು ೧೯೯೬ರಲ್ಲಿ ಪ್ರಾರಂಭವಾಗಿ ಪ್ರತಿ ವರ್ಷವು ಕೂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುತ್ತಿದೆ. ಈ ಶಾಲೆಯನ್ನು ಮೇಲ್ದರ್ಜೆಗೇರಿಸಿದರೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಖಾಸಗಿ ಶಾಲೆಯ ಕಡೆ ಹೋಗುವುದನ್ನು ತಪ್ಪಿಸಬಹುದಾಗಿದ್ದು ಇಲ್ಲಿಯೇ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ತಿಳಿಸಿದರು. ಶಶಿಕುಮಾರ್, ಮಂಜೇಗೌಡ, ಪತ್ರಕರ್ತ ಲೋಕೇಶ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಪುಟ್ಟಸ್ವಾಮಿ, ಎಸ್‌ಡಿಎಂಸಿ ಸದಸ್ಯ ಬೋರೇಗೌಡ, ಶಂಕರೇಗೌಡ, ಷಣ್ಮುಕಯ್ಯ, ರೇಣುಕಯ್ಯ, ದಿನೇಶ್, ರವೀಶ್, ಹಾಗೂ ಜಯಣ್ಣ, ಸಿದ್ದೇಶ್, ಭರತ್ ವಿಜಯ್‌ಕುಮಾರ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.