ಜಾಲಿ ಪಪಂ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

KannadaprabhaNewsNetwork |  
Published : May 29, 2025, 12:08 AM IST
ಪೊಟೋ ಪೈಲ್ : 28ಬಿಕೆಲ್1 | Kannada Prabha

ಸಾರಾಂಶ

ಹಲವು ಬಾರಿ ಸಂಬಂಧಪಟ್ಟ ಸಚಿವರುಗಳಿಗೆ, ಅಧಿಕಾರಿಗಳಗೆ ಹಾಗೂ ಸರ್ಕಾರಕ್ಕೆ ನಮ್ಮ ನ್ಯಾಯ ಸಮ್ಮತ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ರೀತಿಯ ನ್ಯಾಯ ದೊರಕಿರುವುದಿಲ್ಲ.

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತಿಯಲ್ಲಿ ಸೇವೆ ಸಲ್ಲಿ ಸುತ್ತಿರುವ ಸ್ಥಳೀಯ ಸಂಸ್ಥೆಗಳ ನೌಕರರು,ಪೌರಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿ ಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನೌಕರರಿಂದ ಮುಖ್ಯಾಧಿಕಾರಿ ಮಂಜಪ್ಪ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಜಾಲಿ ಪಟ್ಟಣ ಪಂಚಾಯತಿಯಲ್ಲಿ ನೌಕರರು, ಪೌರಕಾರ್ಮಿಕರು ಮತ್ತು ಗುತ್ತಿಗೆಯಡಿ ಜ್ಯೂನಿಯರ್ ಪ್ರೋಗ್ರಾಮರ್ ಹಾಗೂ ಹೊರಗುತ್ತಿಗೆ ನೌಕರರುಗಳಾದ ಡಾಟಾ ಎಂಟ್ರಿ ಆಪರೇಟರ್, ಅಕೌಂಟೆಂಟ್, ನೀರು ಸರಬರಾಜು ನೌಕರರು, ವಾಹನ ಚಾಲಕರು ಗಳು ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಯಾವುದೇ ಮುಷ್ಕರಗಳನ್ನು ಕೈಗೊಳ್ಳದೇ ಸಾರ್ವಜನಿಕರಿಗೆ ಅತ್ತೀ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಸಚಿವರುಗಳಿಗೆ, ಅಧಿಕಾರಿಗಳಗೆ ಹಾಗೂ ಸರ್ಕಾರಕ್ಕೆ ನಮ್ಮ ನ್ಯಾಯ ಸಮ್ಮತ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ರೀತಿಯ ನ್ಯಾಯ ದೊರಕಿರುವುದಿಲ್ಲ. ಶೀಘ್ರದಲ್ಲಿ ನಮ್ಮ ಬೇಡಿಕೆಗಳಾದ ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡುವುದು. ಎಲ್ಲಾ ನೌಕರರಿಗೂ ಎಸ್.ಎಫ್.ಸಿ. ಮುಕ್ತ ನಿಧಿಯಿಂದ ವೇತನ ನೀಡುವುದು .ಸ್ಥಳೀಯ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸುವುದು. ಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಯೂನಿಯರ್ ಪ್ರೋಗ್ರಾಮರ್ ಗಳನ್ನು ಸಮಾನ ಕೆಲಸ ಸಮಾನ ವೇತನ ದಡಿಯಲ್ಲಿ ಪರಿಗಣಿಸುವುದು. ಹೊರಗುತ್ತಿಗೆ ನೌಕರರುಗಳಾದ ಪೌರನೀರು ಸರಬರಾಜು ನೌಕರರು,ವಾಹನ ಚಾಲಕರು, ಸ್ಯಾನಿಟರಿ ಸೂಪರ್ ವೈಜರ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಅಕೌಂಟೆಂಟ್ ಗಳನ್ನು ನೇರಪಾವತಿಗೆ ಪರಿಗಣೆಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನೌಕರರಾದ ಸುರೇಶ ಎಸ್ಜ, ಗದೀಶಕುಮಾರ ನಾಯ್ಕ, ಭಾಗಿರತಿ ನಾಯ್ಕ, ವಿನಾಯಕ ನಾಯ್ಕ, ರಾಘವೇಂದ್ರ ಗೌಡ ಸೇರಿದಂತೆ ಸಿಬ್ಬಂದಿಗಳು, ಪೌರಕಾರ್ಮಿಕರು ಮುಂತಾದವರಿದ್ದರು. ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌