ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಮಂಡಲ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆಗೊಳಿಸಿ ಮಾತನಾಡಿ, ಸಮಗ್ರ ದೇಶವನ್ನು ವಿಕಸಿತ ಭಾರತನ್ನಾಗಿಸುವಲ್ಲಿ ದೇಶವಾಸಿಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಬೇಕಾಗಿದೆ. ಮೋದಿಯವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿಸಲು ಕೆಲಸ ಮಾಡುತ್ತಿದ್ದು, ಪ್ರಸ್ತುತ ಅರ್ಥಿಕ ಸುಭದ್ರತೆಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದ್ದು ನಾವುಗಳು ಬಿಜೆಪಿಯನ್ನು ಅತ್ಯಂತ ಬಲಿಷ್ಠಗೊಳಿಸುವ ಮೂಲಕ ಮೋದಿಯವರನ್ನು ಮುಂದಿನ ದಿನಗಳಲ್ಲಿ ಕೂಡ ಪ್ರಧಾನಿಯಾಗಿ ಮಾಡುವ ಮೂಲಕ ದೇಶವನ್ನು ಆರ್ಥಿಕವಾಗಿ 3 ನೇ ಸ್ಥಾನಕ್ಕೆ ತರಬೇಕಿದೆ ಎಂದು ಹೇಳಿದರು.
ಒಂದು ಪಕ್ಷದ ನಿಜವಾದ ಶಕ್ತಿ ಎಂದರೆ ಅದು ಆ ಪಕ್ಷದ ಕಾರ್ಯಕರ್ತರ ಪಡೆಯಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ನರೇಂದ್ರಮೋದಿಯವರು ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿದ್ದು, ಇದೀಗ ನಾವೆಲ್ಲರೂ ಸೇರಿ ಹೆಚ್ಚಿನ ಸದಸ್ಯತ್ವ ಮಾಡಿಸುವ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲು ಪಕ್ಷದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.2014ರ ಚುನಾವಣೆಯಲ್ಲಿ ಹೊನ್ನಾಳಿ ತಾಲೂಕು ಏಳುವರೆ ಸಾವಿರ ಲೀಡ್ ಕೊಟ್ಟಿತ್ತು, ನಂತರ 2019ರಲ್ಲಿ 13 ಸಾವಿರ ಲೀಡ್, ಆದರೆ ನಂತರದಲ್ಲಿ 2024ರ ಚುನಾವಣೆಯಲ್ಲಿ ಸುಮಾರು 7ಸಾವಿರ ಮತಗಳಷ್ಟು ಹಿಂದೆ ಉಳಿದಿದೆ ಎಂದರೆ ಈ ತಾಲೂಕಿನ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಚಿಂತನೆ ಮಾಡಬೇಕು ಹಾಗೂ ಪಕ್ಷಕ್ಕಾಗಿ ಹೆಚ್ಚು ಸದಸ್ಯತ್ವ ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಮಾತನಾಡಿ, ಎಂದು ಕಾಲದಲ್ಲಿ ದಾವಣಗೆರೆ ಬಿಜೆಪಿ ಭಧ್ರ ಕೋಟಿಯಾಗಿತ್ತು ಅದರೇ ಇದೀಗ ಕೆಲವಾರು ಕಾರಣಗಳಿಂದ ಪಕ್ಷ ಗೆಲ್ಲುವಲ್ಲಿ ವಿಫಲವಾಗಿದೆ ಇದನ್ನೇ ಪಾಠವೆಂದು ಪರಿಗಣಿಸಿ ಮುಂದಿನ ದಿನಗಳಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೆಲಹೊನ್ನೆ ದೇವರಾಜ್, ಯಕ್ಕನಹಳ್ಳಿ ಜಗದೀಶ್, ನ್ಯಾಮತಿ ನಟರಾಜ್, ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.