ಕನ್ನಡಪ್ರಭ ವಾರ್ತೆ ಮಡಿಕೇರಿ
ಮೈಸೂರಿನಲ್ಲಿ 10 ವರ್ಷ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಬಿಜೆಪಿ ಮಹಾರಾಜರಿಗೆ ಟಿಕೆಟ್ ಕೊಟ್ಟಿದೆ. ಹಾಗಾಗಿ ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಕರ್ನಾಟಕದಲ್ಲಿ ಸಾಬೀತು ಆಗಿದೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡದಿರುವ ಬಗ್ಗೆ ಬಿಜೆಪಿ ಜನರಿಗೆ ಉತ್ತರ ಕೊಡಬೇಕು. ಅವರು ನಿಷ್ಟ್ರಯೋಜಕರಾ? ಭ್ರಷ್ಟಾಚಾರಿಯಾ ಅಥವಾ ಪಕ್ಷ ವಿರೋಧಿಯಾ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಿಜೆಪಿಯಲ್ಲಿ ದೊಡ್ಡ ಸಮುದಾಯದ ನಾಯಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ಸ್ವಾಗತಿಸುತ್ತೇನೆ. ಲಕ್ಷ್ಮಣ್ ಅವರು ಇಂಜಿನಿಯರಿಂಗ್ ಪದವೀಧರ. ಪ್ರಚಾರಕ್ಕೆ ಹೋಗದೆ ಗೆಲುವು ಸಿಗುತ್ತದೆ ಎನ್ನುವುದು ಬಿಜೆಪಿ ಮೂರ್ಖತನ. ಕರ್ನಾಟಕದಲ್ಲಿ ನರೇಂದ್ರ ಮೋದಿ ಹೆಸರು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಸೂರಜ್ ಹೊಸೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನೀರ ಮೈನಾ ಪಕ್ಷದ ಪ್ರಮುಖರಾದ ಲವ ಚಿಣ್ಣಪ್ಪ ಇದ್ದರು.