- ಸಿಂಗಟಗೆರೆಯಲ್ಲಿ ಮೆಕ್ಕೆಜೋಳದ ಸಂಕರಣ ಹೈಬ್ರಿಡ್‌ಗಳ ಪರಿಚಯ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮೆಕ್ಕೆಜೋಳ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸಲು ಮುಳ್ಳುಸಜ್ಜೆ ಕಳೆ ನಿರ್ವಹಣೆ ಮತ್ತು ವಾತಾವರಣದಲ್ಲಿ ಏರುಪೇರಾಗುವ ಪರಿಸ್ಥಿತಿಗೆ ಹಾಗೂ ಬರಗಾಲಕ್ಕೂ ಹೊಂದಿಕೊಂಡು ರೈತರಿಗೆ ಆದಾಯ ತರುವಂತ ಹೊಸ ಹೈಬ್ರಿಡ್ ಬೀಜಗಳನ್ನು ಪರಿಚಯಿಸುವ ಮತ್ತು ಅವುಗಳ ಕಾರ್ಯಕ್ಷಮತೆ ಪರೀಕ್ಷಿಸುವ ಅನಿವಾರ್ಯ ಪರಿಸ್ಥಿತಿಗೆ ಉತ್ತರವಾಗಿ ಶಿವಮೊಗ್ಗದ ವಿ.ವಿ.ಯ ನಿರಂತರ ಪ್ರಯತ್ನದ ಮೊದಲ ಹೆಜ್ಜೆಯ ಪ್ರಾತ್ಯಕ್ಷಿಕೆ- ಕ್ಷೇತ್ರೋತ್ಸವದಲ್ಲಿ ಯಶಸ್ವಿಯಾಗಿದೆ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ. ದುಷ್ಯಂತಕುಮಾರ್ ಹೇಳಿದರು.ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಶುಕ್ರವಾರ ಕತ್ತಲಗೆರೆಯ ವಿಸ್ತರಣ ಶಿಕ್ಷಣ ಘಟಕ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಪ್ರಾತ್ಯಕ್ಷಿಕೆ- ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಕ್ಷೇತ್ರೋತ್ಸವ ಮಾಡಲು ಕಾರಣ ಮೆಕ್ಕೆಜೋಳದ ಹೊಸ ಐದು ಸಂಕರಣ ಹೈಬ್ರಿಡ್‌ಗಳ ಪರಿಚಯ. ಸುಮಾರು 15 ಎಕರೆಯಲ್ಲಿ ಉಚಿತವಾಗಿ ಬೀಜಗಳ ವಿತರಣೆ ಮಾಡಿ ಅವುಗಳ ಕಾರ್ಯಕ್ಷಮತೆ ಮತ್ತು ಈ ವಾತಾವರಣದಲ್ಲಿ ಹೊಂದಿಕೊಂಡು ಎಷ್ಟು ಇಳುವರಿ ಕೊಡಬಲ್ಲವು ಎಂದು ಪರೀಕ್ಷಿಸುವ ಹಂತದಲ್ಲಿ ರೈತರನ್ನು ಸಂತೋಷಪಡಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ತಿಮ್ಲಾಪುರ ಗ್ರಾಮ ಪಂಚಾಯತಿಯ ಸದಸ್ಯ ಟಿ.ಜಿ.ರಮೇಶಗೌಡ ಅಧ್ಯಕ್ಷತೆ ವಹಿಸಿ, ವಿಜ್ಞಾನಿಗಳು ಗ್ರಾಮಕ್ಕೆ ಬಂದು ಈ ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಇದರ ಸದುಪಯೋಗ ಪಡೆಯೋದು ಮುಖ್ಯ. ಪೂರ್ವ ಮುಂಗಾರಿಗೆ ಮತ್ತೊಂದು ತರಬೇತಿ ಕಾರ್ಯಕ್ರಮಕ್ಕೆ ವಿಜ್ಞಾನಿಗಳ ಕರೆಸಿ ತರಬೇತಿ ಪಡೆಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಿ.ಎಂ. ಆನಂದಕುಮಾರ್, ಸಮಗ್ರ ಕೃಷಿ ಬಗ್ಗೆ ಡಾ ಸಣ್ಣತಿಮ್ಮಪ್ಪ, ಅಡಕೆ ಸಿಪ್ಪೆ ಕಾಂಪೋಸ್ಟ್ ಗೊಬ್ಬರ ಬಗ್ಗೆ ಡಾ. ಜಿ.ಎನ್. ತಿಪ್ಪೇಶಪ್ಪ, ಮುಳ್ಳುಸಜ್ಜೆ ನಿರ್ವಹಣೆ ಕುರಿತು ಡಾ.ಶರಣಪ್ಪ ಕೆ., ಇಲಾಖೆ ಯೋಜನೆ ಕುರಿತು ಕುಂದೂರು ರೈತ ಸಂಪರ್ಕ ಕೇಂದ್ರದ ಡಾ. ಮಾಲತೇಶ ಕೃಷಿ ಅಧಿಕಾರಿ, ಡಾ. ಅಭಿಜಿತ್ ಚವ್ಙಾಣ್, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಮೆಕ್ಕೆಜೋಳದ ಕೀಟ ಮತ್ತು ರೋಗ ನಿರ್ವಹಣೆ ಕುರಿತು ರೈತರ ಉದ್ದೇಶಿಸಿ ಮಾತನಾಡಿದರು.
-18ಎಚ್.ಎಲ್.ಐ1: