ಡೆಂಘೀ ಹಾಟ್ ಸ್ಪಾಟ್ ಪ್ರದೇಶಗಳಿಗೆ ಡಾ. ಪದ್ಮ ಭೇಟಿ

KannadaprabhaNewsNetwork | Published : Aug 1, 2024 12:15 AM

ಸಾರಾಂಶ

Denghi hot spot areas. Meet Padma

-ಸೊಳ್ಳೆ ನಾಶಪಡಿಸಿ ಅಗತ್ಯ ಮುನ್ನಚ್ಚರಿಕಾ ಕ್ರಮ ಅನುಸರಿಸಲು ಸೂಚನೆ

-----

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ವಿವಿಧೆಡೆ ಡೆಂಗೆ ಹಾಟ್‌ಸ್ಪಾಟ್ ಎಂದು ಗುರುತಿಸಲಾದ ಗ್ರಾಮ, ನಗರ ಪ್ರದೇಶಗಳಿಗೆ ರಾಜ್ಯ ಸರ್ವೇಕ್ಷಣಾ ಘಟಕ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕಿ ಹಾಗೂ ಚಿತ್ರದುರ್ಗ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಂ.ಆರ್.ಪದ್ಮಾ ಭೇಟಿ ನೀಡಿ ಪರಿಶೀಲಿಸಿದರು.

ಡೆಂಘೀ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಸೊಳ್ಳೆಗಳ ತಾಣ ನಾಶ ಪಡಿಸಲು ನಡೆಸುತ್ತಿರುವ ಲಾರ್ವಾ ಸಮೀಕ್ಷೆಗಳ ಗುಣಮಟ್ಟ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದರು. ಲಾರ್ವಾ ಸಾಂಧ್ರತೆ ಕಡಿಮೆ ಮಾಡಲು ಅಂತರ್ ಇಲಾಖೆಗಳ ಸಮನ್ವಯ ಪಡೆದು ಡೆಂಘೀ ಪ್ರಕರಣ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು.

ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಕ್ಷಯರೋಗ ನಿರ್ಮೂಲನೆಗೆ ಮರಣ ಪ್ರಮಾಣ ಶೇ.8ರಷ್ಟು ಇರುತ್ತದೆ. ಶೀಘ್ರ ರೋಗಪತ್ತೆ ಹಚ್ಚಿ ತ್ವರಿತ ಚಿಕಿತ್ಸೆಗೆ ಕ್ರಮವಹಿಸಬೇಕು. ಡೆಂಘೀ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು. ಗುಣಾತ್ಮಕ ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆ ತಾಣ ನಾಶ ಮಾಡಿ ಎಂದರು.

ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಿಕಾ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಮ್ಎಲ್ ಸಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸಬೇಕು. ಆಗಸ್ಟ್ 1 ರಿಂದ ಒಂದುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಿ ತಾಯಿ ಮಕ್ಕಳ ಬಾಂಧವ್ಯ ವೃದ್ಧಿಸಲು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಉಪಕೇಂದ್ರಗಳಲ್ಲಿ ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಗರ್ಭಿಣಿಯರ ಶೀಘ್ರ ನೋಂದಾವಣೆಗಾಗಿ ಅರ್ಹ ದಂಪತಿ ಸಂಪರ್ಕ ಸಭೆ ಮಾಡಿ ನೋಂದಾವಣಿಯ ಉಪಯೋಗ ತಿಳಿಸಿ ಎಂದರು.

ರಾಜ್ಯ ಸರ್ವೇಕ್ಷಣಾ ಘಟಕದ ರೋಗಾಣು ತಜ್ಞ ಡಾ.ಬಿ.ಚಂದ್ರಶೇಖರ್, ಸಹಾಯಕ ಕೀಟ ಶಾಸ್ತ್ರಜ್ಞೆ ಸುನಂದ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರೇಖಾ, ಡಾ.ಕಾಶಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ರಾಘವೇಂದ್ರ ಪ್ರಸಾದ್, ಡಾ.ವೆಂಕಟೇಶ್, ಡಾ.ಮಧುಕುಮಾರ್, ತಾಲೂಕು ವ್ಯವಸ್ಥಾಪಕರಾದ ಮಹಮ್ಮದ್ ಅಲಿ, ಸಂತೋಷ, ಹಬೀಬ್, ಜಿಲ್ಲಾ ವ್ಯವಸ್ಥಾಪಕರಾದ ಪ್ರಫುಲ್ಲಾ, ಮೇಟಿ, ಕುಮಾರ್, ಅರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಇದ್ದರು.

----------

ಪೋಟೋ: ರಾಜ್ಯ ಸರ್ವೇಕ್ಷಣಾ ಘಟಕ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕಿ ಹಾಗೂ ಚಿತ್ರದುರ್ಗ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಂ.ಆರ್.ಪದ್ಮಾ ಡೆಂಗ್ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

---

ಪೋಟೋ: 31 ಸಿಟಿಡಿ 7

Share this article