ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕಿನಲ್ಲಿ ೧೫೬ ಪ್ರಕರಣ ಕಂಡುಬಂದಿದ್ದು, ಈ ಪೈಕಿ ೩೭ ನಗರ ಮತ್ತು ೧೧೯ ಗ್ರಾಮಾಂತರ ಪ್ರದೇಶದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಮದ್ದೂರು ತಾಲೂಕಿನಲ್ಲಿ ೪೦, ಮಳವಳ್ಳಿಯಲ್ಲಿ ೧೮, ಪಾಂಡವಪುರದಲ್ಲಿ ೧೬, ಶ್ರೀರಂಗಪಟ್ಟಣ ೩೪, ಕೆ.ಆರ್.ಪೇಟೆ ೧೭ ಹಾಗೂ ನಾಗಮಂಗಲ ತಾಲೂಕಿನಲ್ಲಿ ೧೬ ಪ್ರಕರಣಗಳು ಪತ್ತೆಯಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನೀರು ನಿಲ್ಲದಂತೆ ಎಚ್ಚರವಹಿಸಿ:ಮಾರಣಾಂತಿಕವಾಗಿರುವ ಡೆಂಘೀ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮನೆಯ ಸುತ್ತ ಪರಿಸರ ಸ್ವಚ್ಛವಾಗಿಟ್ಟುಕೊಂಡು ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗಿರುವ ರೆಫ್ರಿಜರೇಟರ್‌ನ ಹಿಂಭಾಗದಲ್ಲಿ ನೀರಿನ ಬಾಕ್ಸ್ ಇದ್ದು, ಅದರಲ್ಲಿ ಸೊಳ್ಳೆ ಮೊಟ್ಟೆ ಇಟ್ಟು ಸೊಳ್ಳೆಗಳಾಗಿ ರೂಪುಗೊಳ್ಳುತ್ತವೆ. ಸೋಂಕಿತ ಹೆಣ್ಣು ಸೊಳ್ಳೆ ಮನುಷ್ಯನಿಗೆ ಕಚ್ಚಿದರೆ ಅದರಿಂದ ಡೆಂಘೀ ಹರಡು ಸಾಧ್ಯತೆಗಳಿವೆ ಎಂದರಲ್ಲದೇ, ಜೊತೆಗೆ ಚಿಕೂನ್‌ಗುನ್ಯಾ, ಝೀಕಾ, ಮೆದುಳು ಜ್ವರ, ಮಲೇರಿಯಾ, ಆನೆಕಾಲು ರೋಗವೂ ಬರಬಹುದು ಎಂದು ಎಚ್ಚರಿಸಿದರು.
ಲಾರ್ವಾ ಸಮೀಕ್ಷೆಗಾಗಿ ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳ ಬಳಿಗೆ ಬಂದಾಗ ಅವರಿಗೆ ಮನೆಯೊಳಗೆ ತೆರಳಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜಾತಿ ವ್ಯವಸ್ಥೆ ಹೆಚ್ಚಿರುವ ಕಾರಣ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೂರು ಹಂತದಲ್ಲಿ ಹರಡುವ ಡೆಂಘೀ:
ಇನ್ನು ಆನೆಕಾಲಿನ ರೋಗವೂ ಸಹ ಸೋಂಕಿನಿಂದಲೇ ಬರುತ್ತಿದ್ದು, ಇದನ್ನೂ ನಿರ್ಲಕ್ಷಿಸುವಂತಿಲ್ಲ. ಐದಾರು ವರ್ಷಗಳ ನಂತರ ಇದು ಕಾಣಿಸಿಕೊಳ್ಳುತ್ತದೆ. ರೋಗ ಉಲ್ಬಣವಾಗುವ ಮುನ್ನ ಕೇವಲ ೧೨ ದಿನದೊಳಗೆ ಔಷಧ ಪಡೆದಲ್ಲಿ ಗುಣಮುಖರಾಗಬಹುದು. ಈ ರೋಗಗಳು ಸಾಮಾನ್ಯವಾಗಿ ಹೊರಗಿನಿಂದ ಬಂದಿರುವವರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಹೊರಗಿನಿಂದ ಬಂದವರನ್ನು ತಪಾಸಣೆ ಒಳಪಡಿಸಲಾಗುತ್ತಿದೆ ಎಂದರು.
ಸಹಾಯಕ ಕೀಟಶಾಸ್ತ್ರಜ್ಞೆ ಜಾನೆಟ್ ಮೆಂಜೇಸ್, ಮೇಲ್ವಿಚಾರಕ ಸೋಮಶೇಖರ್ ಇತರರು ಗೋಷ್ಠಿಯಲ್ಲಿದ್ದರು.