ಕಾರ್ಕಳ: ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಗಣಿತ ನಗರದಲ್ಲಿ ಇಂಟಾರ್ಯಾಕ್ಟ್ ಕ್ಲಬ್ ವತಿಯಿಂದ ದಂತ ಆರೋಗ್ಯ ಮತ್ತು ಆರೈಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಶುಕ್ರವಾರ ನಡೆಯಿತು. ಆರೋಗ್ಯಕರ ಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ. ಆದುದರಿಂದ ಮೌಖಿಕ ನೈರ್ಮಲ್ಯ, ಹಲ್ಲುಉಜ್ಜುವ ವಿಧಾನ, ಹಲ್ಲುಗಳು ಮತ್ತು ವಸಡುಗಳ ಆರೋಗ್ಯ ತಪಾಸಣೆಯ ಬಗ್ಗೆ ಓರಲ್ ಆಂಡ್ ಮ್ಯಾಕ್ಸಿಲೋಫೆಶಿಯಲ್ ರೇಡಿಯೋಲಾಜಿಸ್ಟ್ ಹಾಗೂ ಜೋಡುರಸ್ತೆಯ ಶಾನ್ ಡೆಂಟಲ್ ಕ್ಲಿನಿಕ್‌ನ ವೈದ್ಯೆಡಾ. ಶಾಂತಲಾ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ವಾಣಿ ಕೆ., ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಜ್ಯೋತಿ ಪದ್ಮನಾಭ ಭಂಡಿ, ಇಂಟರ್ಯಾಕ್ಟ್ ಕ್ಲಬ್ ನ ಸಂಯೋಜಕಿ ದಿವ್ಯಾ ಉಪಸ್ಥಿತರಿದ್ದರು ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.