ಕನ್ನಡಪ್ರಭ ವಾರ್ತೆ ನಾಪೋಕ್ಲು
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಾಫಿ ಬೆಳೆ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕಾರ್‍ಯಾಗಾರ ನಡೆಯಿತು.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ
ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಹಿಸಿದ್ದು, ಕಾರ್‍ಯಾಗಾರದ ಧ್ಯೇಯೋದ್ದೇಶವನ್ನುತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕಾಫಿ ಸಂಶೋಧನಾ ಸಂಸ್ಥೆ ಚಟ್ಟಳ್ಳಿಯ ವಿಜ್ಞಾನಿಗಳಾದ ಡಾ.
ಎಸ್.ಎ. ನಾಡಫ್, ಡಾ. ಶಿವಲಿಂಗು ಬಿ.ಆರ್., ಪವನ್ ಅವರು ರೈತರಿಗೆ ಕಾಫಿ
ಬೆಳೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಿ.ಎಂ., ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್ ಕುಶಾಲನಗರದ ಸಂಯೋಜಕ ಪ್ರಕೃತಿ ಪೊನ್ನಮ್ಮ ಹಾಗೂ ಉದಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್‍ಯಾಗಾರದಲ್ಲಿ ಸಂಘದ ನಿರ್ದೇಶಕರು ಹಾಗೂ ಆಸಕ್ತ ರೈತ ಸದಸ್ಯರು ಭಾಗವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸಂಪನ್ಮೂಲ ವ್ಯಕ್ತಿಗಳಿಗೆ
ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
Subscribe to get breaking news alertsSubscribe Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.