ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆಯಾದ ‘ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್’ (ಎಂಸಿಎಚ್‌ಪಿ) ಆಶ್ರಯದಲ್ಲಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ (ಕೆಎಸ್‌ಎಎಚ್‌ಸಿ) ವತಿಯಿಂದ ‘ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್’ (ಎನ್‌ಸಿಎಎಚ್‌ಪಿ) ಪಠ್ಯಕ್ರಮ ಅನುಷ್ಠಾನ ಕುರಿತಾದ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜಿಸಲಾಯಿತು.
ದೇಶದಲ್ಲಿನ ಅಲೈಡ್ ಹೆಲ್ತ್ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲದ ಎಂಸಿಎಚ್‌ಪಿ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಶೈಕ್ಷಣಿಕ ಶ್ರೇಷ್ಠತೆ, ನಿಯಂತ್ರಕ ಮಾನದಂಡಗಳ ಪಾಲನೆ ಮತ್ತು ಆರೋಗ್ಯ ಶಿಕ್ಷಣದಲ್ಲಿ ಸಾಮರ್ಥ್ಯ ವೃದ್ಧಿಗೆ ಮಾಹೆ ಸದಾ ಒತ್ತು ನೀಡುತ್ತಿದೆ ಎಂದರು.
ಗೌರವ ಅತಿಥಿಗಳಾಗಿ ಮಾಹೆ ಕುಲಪತಿ ನಿವೃತ್ತ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಕೆಎಸ್‌ಎಎಚ್‌ಸಿ ಅಧ್ಯಕ್ಷ ಪ್ರೊ. ಯು. ಟಿ. ಇಫ್ತಿಕಾರ್ ಅಲಿ ಫರೀದ್ ಮತ್ತು ಯೆನೆಪೋಯ ವಿವಿಯ ಕುಲಪತಿ ಡಾ. ಗಂಗಾಧರ ಸೋಮಯಾಜಿ ಭಾಗವಹಿಸಿದ್ದರು. ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಶರತ್ ಕುಮಾರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮೂರ್ತಿ ಎಸ್.ಟಿ., ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಡೀನ್ ಆದ ಡಾ. ಜಿ. ಅರುಣ್ ಮಯ್ಯ ಉಪಸ್ಥಿತರಿದ್ದರು.ಕರ್ನಾಟಕದಾದ್ಯಂತ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಪರರಿಗೆ ಏಕರೂಪದ ಮಾನದಂಡಗಳು ಮತ್ತು ಉತ್ತಮ ಗುಣಮಟ್ಟದ ತರಬೇತಿಯನ್ನು ಖಚಿತಪಡಿಸಿಕೊಳ್ಳಲು, ಎನ್‌ಸಿಎಎಚ್‌ಪಿ ಪಠ್ಯಕ್ರಮವನ್ನು ಎಲ್ಲೆಡೆ ಜಾರಿಗೆ ತರುವ ನಿರ್ಧಾರದೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು.