ಕಂದಾಯ ಇಲಾಖೆ ಜನಸಾಮಾನ್ಯರ ಇಲಾಖೆ: ಶಾಸಕ ಕೋನರಡ್ಡಿ

KannadaprabhaNewsNetwork |  
Published : Feb 04, 2025, 12:31 AM IST
ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿನ ನಾಡಕಚೇರಿಯ ನೂತನ ಕಟ್ಟಡವನ್ನು ಶಾಸಕ ಎನ್‌.ಎಚ್‌. ಕೋನರಡ್ಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರದ ಇಲಾಖೆಗಳಲ್ಲಿ ಕಂದಾಯ ಇಲಾಖೆ ಮಹತ್ವದ ಮತ್ತು ಜನಸಾಮಾನ್ಯರಿಗೆ ಪ್ರತಿನಿತ್ಯ ಸಂಪರ್ಕಕ್ಕೆ ಬರುವ ಇಲಾಖೆ. ವಿವಿಧ ಸೇವೆಗಳನ್ನು ನೀಡುತ್ತದೆ. ಇಂತಹ ಇಲಾಖೆಯ ಸೇವೆಗಳನ್ನು ಸುಧಾರಿಸಲು ಮತ್ತು ಜನಸ್ನೇಹಿ ಇಲಾಖೆಯಾಗಿ ರೂಪಿಸಲು ಸರ್ಕಾರ ಕ್ರಮಕೈಗೊಂಡಿದೆ.

ಹುಬ್ಬಳ್ಳಿ:

ಕಂದಾಯ ಇಲಾಖೆಯು ಜನಸಾಮಾನ್ಯರ, ರೈತ ಸ್ನೇಹಿ ಇಲಾಖೆಯಾಗಿದೆ. ಈ ಇಲಾಖೆ ಸೇವೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ಶಾಸಕ ಎನ್‌.ಎಚ್. ಕೋನರಡ್ಡಿ ಹೇಳಿದರು.

ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿನ ನಾಡಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮೊರಬ ನಾಡಕಚೇರಿಗೆ ನೂತನ ಕಟ್ಟಡ ಕಟ್ಟಲು ಆರಂಭವಾಗಿ ಆರ್ಥಿಕ ಕೊರತೆಯಿಂದ ಅರ್ಧಕ್ಕೆ ನಿಂತಿತ್ತು. ಇದರ ಅಗತ್ಯತೆ ಮನಗಂಡು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ₹12 ಲಕ್ಷ ಆರ್ಥಿಕ ಅನುದಾನ ನೀಡಿ ಪೂರ್ಣಗೊಳಿಸಲಾಗಿದೆ ಎಂದರು.

ಸರ್ಕಾರದ ಇಲಾಖೆಗಳಲ್ಲಿ ಕಂದಾಯ ಇಲಾಖೆ ಮಹತ್ವದ ಮತ್ತು ಜನಸಾಮಾನ್ಯರಿಗೆ ಪ್ರತಿನಿತ್ಯ ಸಂಪರ್ಕಕ್ಕೆ ಬರುವ ಇಲಾಖೆ. ವಿವಿಧ ಸೇವೆಗಳನ್ನು ನೀಡುತ್ತದೆ. ಇಂತಹ ಇಲಾಖೆಯ ಸೇವೆಗಳನ್ನು ಸುಧಾರಿಸಲು ಮತ್ತು ಜನಸ್ನೇಹಿ ಇಲಾಖೆಯಾಗಿ ರೂಪಿಸಲು ಸರ್ಕಾರ ಕ್ರಮಕೈಗೊಂಡಿದೆ. ಇಲಾಖೆಯ ಸಿಬ್ಬಂದಿ, ಕಟ್ಟಡ, ಮೂಲಸೌಕರ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ವರ್ಷಗಳು ಉರುಳಿದಂತೆ ಹೊಸ-ಹೊಸ ಸರ್ಕಾರಗಳು ಬಂದಂತೆ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಅನೇಕ ವಿನೂತನ ಯೋಜನೆಗಳನ್ನು ಘೋಷಿಸಿ, ಜಾರಿಗೊಳಿಸಲಾಗುತ್ತದೆ. ಅವುಗಳಲ್ಲಿನ ಬಹುತೇಕ ಯೋಜನೆ, ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಜವಾಬ್ದಾರಿ ಕಂದಾಯ ಇಲಾಖೆಯದಾಗಿರುತ್ತದೆ ಎಂದು ಹೇಳಿದರು.

ಆಧಾರ್ ಸಿಡಿಂಗ್ ಕಾರ್ಯದಲ್ಲಿ ನವಲಗುಂದ ತಾಲೂಕು ಶೇ. 92ರಷ್ಟು ಸಾಧನೆ ಮಾಡಿದೆ. ತಾಲೂಕಿನ 3 ಗ್ರಾಮಗಳು ಆಧಾರ್ ಸಿಡಿಂಗ್ ದಲ್ಲಿ ಶೇ. 100ರಷ್ಟು ಸಾಧನೆ ಮಾಡಿವೆ. ಇದಕ್ಕೆ ಕಾರಣರಾದ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳನ್ನು, ಗ್ರಾಮ ಸೇವಕರನ್ನು ಈ ಅಭಿನಂದಿಸುತ್ತೇನೆ ಎಂದರು.

ತಹಸೀಲ್ದಾರ್‌ ಸುಧೀರ ಸಾಹುಕಾರ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಮೊರಬ ಗ್ರಾಪಂ ಅಧ್ಯಕ್ಷೆ ಪಾರ್ವತವ್ವ ಜಾಲಿಹಾಳ, ಉಪಾಧ್ಯಕ್ಷ ಶಿವಯೋಗಿ ಮನಮಿ, ಉಪ ತಹಸೀಲ್ದಾರ್‌ ಎಂ.ಎಚ್. ಸದರಬಾಯಿ, ಕಂದಾಯ ನಿರೀಕ್ಷಕ ಕುಮಾರಗೌಡ ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಪ್ರಸಾದ ಪತ್ತಾರ ಸೇರಿದಂತೆ ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ