ಪುತ್ತೂರು: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಉಪವಿಭಾಗ ವತಿಯಿಂದ ಭಾನುವಾರ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ನಡೆಯಿತು.
ಪಾಲನಾ ವರದಿಯನ್ನು ಮಂಡಿಸಿದ ಪುತ್ತೂರು ನಗರ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಅವರು, ಹೊಸಮಠದಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ ಮಾಡಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಗುತ್ತಿಗಾರು- ಪಂಜ ರಸ್ತೆಯಲ್ಲಿ ಗುತ್ತಿಗಾರು ಬೀಟ್ ಅಧಿಕಾರಿ/ಸಿಬ್ಬಂದಿ ಗ್ರಾಮಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ಯಾರಾಮೆಡಿಕಲ್ ಕೋರ್ಸ್ಗೆ ಪಡೆದ ಶುಲ್ಕವನ್ನು ಹಿಂದಿರುಗಿಸುವ ವಿಚಾರದಲ್ಲಿ 6 ತಿಂಗಳು ಶಿಕ್ಷಣ ಪಡೆದ ವಿದ್ಯಾರ್ಥಿನಿಗೆ ರಶೀದಿ ಒದಗಿಸುವುದಾಗಿ ತಿಳಿಸಿರುವ ಬಗ್ಗೆ, ಸುಬ್ರಹ್ಮಣ್ಯ ದೇವಳದ ಟೆಂಡರ್‌ನಲ್ಲಿ ಹೊರಗುತ್ತಿಗೆ ಕೆಲಸಗಾರರಲ್ಲಿ ಎಸ್‌ಸಿ ಸಮುದಾಯವನ್ನು ಲಾಡ್ಜ್ ವಾಶ್‌ರೂಂ ತೊಳೆಯಲು ಮಾತ್ರ ಬಳಕೆ ಮಾಡುತ್ತಿರುವುದಾಗಿ ಆರೋಪದ ಬಗ್ಗೆ ಈ ನೇಮಕಾತಿಯು ಸ್ವಚ್ಛತೆ ವಿಭಾಗಕ್ಕೆ ಸಂಬಂಧಿಸಿದ್ದು ಆಗಿರುವುದರಿಂದ ಮತ್ತು ನೇಮಕಾತಿ ಆದೇಶದಲ್ಲಿಯೂ ಉಲ್ಲೇಖಿಸಿರುವುದರಿಂದ ಉದ್ದೇಶಪೂರ್ವಕ ಯಾವುದೇ ಪಂಗಡವನ್ನು ಕೆಲಸ ಮಾಡಿಸುತ್ತಿಲ್ಲ ಎಂಬ ಉತ್ತರವನ್ನು ನೀಡಿದರು. ಪುತ್ತೂರು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಸುಳ್ಯ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಸುಳ್ಯ ಉಪ ನಿರೀಕ್ಷಕ ಸಂತೋಷ್, ಬೆಳ್ಳಾರೆ ಉಪ ನಿರೀಕ್ಷಕ ಕಿಶೋರ್, ಕಡಬ ಠಾಣೆಯ ಉಪ ನಿರೀಕ್ಷಕ ಜಂಬೂರಾಜ್, ಉಪ್ಪಿನಂಗಡಿ ಉಪ ನಿರೀಕ್ಷಕ ಕೌಶಿಕ್ ಬಿ. ಸಿ., ಸಂಪ್ಯ ಉಪ ನಿರೀಕ್ಷಕಿ ಸುಷ್ಮಾ ಭಂಡಾರಿ, ಸುಬ್ರಹ್ಮಣ್ಯ ಉಪನಿರೀಕ್ಷಕ ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ. ಮತ್ತಿತರರು ಉಪಸ್ಥಿತರಿದ್ದರು. ಸಮುದಾಯದ ಪ್ರಮುಖರಾದ ಗಿರಿಧರ್ ನಾಯ್ಕ, ಅಣ್ಣಪ್ಪ ಕರೆಕಾಡು, ವಿಶ್ವನಾಥ, ಕೊರಗಪ್ಪ ನಾಯ್ಕ, ದೇವರಿ, ಸುಂದರಿ, ಸೇಸಮ್ಮ, ರೇಖಾ ಉಪಸ್ಥಿತರಿದ್ದರು.