ಕಿಡಿಗೇಡಿಗಳನ್ನು ಗಡಿಪಾರು ಮಾಡಿ

KannadaprabhaNewsNetwork |  
Published : Apr 18, 2026, 02:30 AM IST
17ಕೆಕೆಆರ್7:ಕುಕನೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ದಲಿತ ಸೇನೆಯಿಂದ ಪ್ರತಿಭಟನೆ ನಡೆಸಿ ಅಂಬೇಡ್ಕರ್ ಹಾಗೂ ಗಣ್ಯರಿಗೆ ಅಪಮಾನ ಮಾಡಿದ ಕೀಡಿಗೇಡಿಗಳನ್ನು  ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.  | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ, ಜ್ಞಾನ ಭಂಡಾರ ಎಂದು ಕರೆಯುವ ಬಾಬಾ ಸಾಹೇಬರ ಮೇಲೆ ಹೀನಕೃತ್ಯ ಎಸಗುವವರ ಸಂಖ್ಯೆ ಹೆಚ್ಚಾಗಿದೆ

ಕುಕನೂರು:

ವೀರಾಪುರ ಗ್ರಾಮದಲ್ಲಿ ಅಂಬೇಡ್ಕರ್ ಹಾಗೂ ಗಣ್ಯರಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ದಲಿತ ಸೇನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಉಡಚಪ್ಪ ಶ್ರೀರಾಮನಗರ ಆಗ್ರಹಿಸಿದರು.

ತಾಲೂಕಿನ ವೀರಾಪುರ ಗ್ರಾಮದಲ್ಲಿ ದಲಿತ ಸೇನೆಯಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ, ಜ್ಞಾನ ಭಂಡಾರ ಎಂದು ಕರೆಯುವ ಬಾಬಾ ಸಾಹೇಬರ ಮೇಲೆ ಹೀನಕೃತ್ಯ ಎಸಗುವವರ ಸಂಖ್ಯೆ ಹೆಚ್ಚಾಗಿದೆ. ಬಾಬಾ ಸಾಹೇಬರು ಯಾವ ಜಾತಿ ಧರ್ಮದ ವಿರೋಧಿಗಳಲ್ಲ ಅವರು ಕೇವಲ ದಲಿತರಿಗೆ ಮಾತ್ರ ಸಂವಿಧಾನ ರಚನೆ ಮಾಡಿ ಮೀಸಲಾತಿ ನೀಡಿಲ್ಲ. ಸರ್ವ ಜನಾಂಗಕ್ಕೆ ಒಳಿತನ್ನ ಬಯಸಿದವರು. ಅಂತವರ ಭಾವಚಿತ್ರ, ಮೂರ್ತಿಗಳ ಮೇಲೆ ದುಷ್ಕರ್ಮಿಗಳು ಪದೇ ಪದೆ ಅವಮಾನ ಮಾಡುವ ಕಾರ್ಯ ರಾಜ್ಯಾದ್ಯಂತ ನಿರಂತರವಾಗಿದೆ. ಅದರಲ್ಲಿ ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ.ಇಂತಹ ಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೇಲವು ವಿಕೃತ ಮನಸ್ಸು ಪತ್ತೆ ಹಚ್ಚಬೇಕು. ವೀರಾಪುರ ಈ ಘಟನೆಯಲ್ಲಿ ಭಾಗಿಯಾದಂತಹ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಸೇನೆಯ ಕುಕನೂರು ತಾಲೂಕಾಧ್ಯಕ್ಷ ಮುದಿಯಪ್ಪ ಛಲವಾದಿ, ಉಪಾಧ್ಯಕ್ಷ ಬಸವರಾಜ ಕಡೆಮನಿ, ಕಾರ್ಯದರ್ಶಿ ರಾಜೇಶ ಕಾಳಿ, ಸೋಮಣ್ಣ ಬಡಿಗೇರ, ಮಹೇಶ ದೊಡ್ಡಮನಿ, ಶ್ರೀಕಾಂತ ಸೋಂಪೂರ, ಮುತ್ತು ಕುಕನೂರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಮ್ಮೆಮಾಡು ಮಖಾಂ ಉರೂಸ್‌ಗೆ ಚಾಲನೆ
ಕಾರು-ಬೈಕ್‌ ಡಿಕ್ಕಿ: ಸವಾರ ಸಾವು