ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುವಾದದ ಪ್ರವರ್ತಕರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ತನ್ನ ಶೂ ಎಸೆಯಲು ಮುಂದಾಗಿರುವುದು ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ ನ್ಯಾಯದ ಮೇಲಿನ ದಾಳಿ. ಸಂವಿಧಾನದ ಮೇಲೆ ಮನುವಾದಿಗಳಿಗಿರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದರು.
ಇತಿಹಾಸದಲ್ಲೇ ಎಂದೂ ನಡೆಯದ ಈ ಮಾದರಿಯ ಕೃತ್ಯ ನಡೆದಿದೆ. ಮನುವಾದಿಗಳ ಈ ಕಪ್ಪುಚುಕ್ಕಿಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಸ್ವಾತ್ರಂತ್ಯ ಸಿಕ್ಕ ನಂತರದಿಂದ ಹಿಡಿದು ಇವತ್ತೀನವರೆಗೂ ಏನು ಬದಲಾವಣೆ ಆಗಿಲ್ಲ. ಈ ಮನುವಾದಿ ಸನಾತನಿ ಮತಾಂಧ ಸಂಘ ಪರಿವಾರದ ವಿಕೃತ ಮನಸ್ಥಿತಿ ೧೨ ಡಿಸೆಂಬರ್ ೧೯೪೫ ಇದೇ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅಂಬೇಡ್ಕರ್ ಶವಯಾತ್ರೆ ಮಾಡಿದರು. ಮತ್ತೆ ಸಂವಿಧಾನದ ಪ್ರತಿಗಳನ್ನು ಸುಟ್ಟಿದರು. ಇದೇ ದೇಶದ್ರೋಹಿಗಳು ಸಂಘಟನಾ ಸಂಘ ಪರಿವಾರಗಳು ಎಂದರು.ಸನಾತನಿ ಮನುವಾದಿ ಮತಾಂಧ ಭಯೋತ್ಪಾದಕ ಕಿಶೋರ್ ರಾಕೇಶ್ ಎಂಬವನು ಶೂ ಎಸೆತ ಮಾಡಿದ್ದಾನೆ. ಈ ಘಟನೆಗೆ ಹಿನ್ನೆಲೆ ಖಜುರಾಹೋದಲ್ಲಿರುವ ೭ ಅಡಿ ಉದ್ದದ ವಿಷ್ಣು ಮೂರ್ತಿಯ ಮಸ್ತಕವಿಚ್ಛೇದಿತ ವಿಗ್ರಹದ ಪುನರ್‌ಸ್ಥಾಪನೆ ಕುರಿತ ಹಳೆಯ ಪ್ರಕರಣಕ್ಕೆ ಸಂಬಂಧಿಸಿದೆ. ಆಗ ಗವಾಯಿ ಅವರು ಹಾಸ್ಯಾತ್ಮಕ ಶೈಲಿಯಲ್ಲಿ ನೀವು ಭಕ್ತರಾದರೆ ದೇವರನ್ನೇ ಕೇಳಿ. ಈಗ ದೇವರು ನಿಮಗೆ ಸಹಾಯ ಮಾಡಲಿ’ ಎಂದು ಹೇಳಿದ್ದರು. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಇದು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಚಿತ್ರಿತವಾಗಿದೆ ಎಂದು ಹೇಳಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ , ಜನಹಿತಾಶಕ್ತಿ ಹೋರಾಟ ವೇದಿಕೆ ರಾಮಸಮುದ್ರ ಸುರೇಶ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲಿ ಜಿಲ್ಲಾ ಸಂಯೋಜಕ ಬಸವರಾಜು ಕೆರೆಹಳ್ಳಿ, ಜಿಲ್ಲಾ ಸಂಘಟನಾ ಸಂಘಟಕರಾದ ನಂಜುಂಡಸ್ವಾಮಿ, ಶಿವಕುಮಾರ್, ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಇದ್ದರು.