- ಗುಣಮಟ್ಟದ ಭತ್ತವನ್ನು ಖರೀದಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಕಳೆದ ವರ್ಷ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಭತ್ತವನ್ನು ಖರೀದಿ ಮಾಡದೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗಿದೆ.ತಾಲೂಕಿನ ಹಂಪಾಪುರ ಶಾಂತಿನಾಥ ರೈಸ್ ಮೀಲ್ ಮಾಲೀಕರೂ ಆದ ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಪಿ. ಪ್ರಶಾಂತ್ ಅವರಿಗೆ ಎರಡು ಲೋಡ್ ಭತ್ತವನ್ನು ಅಕ್ಕಿ ಮಾಡಲು ಕಳುಹಿಸಿದಾಗ ಕಳಪೆ ಕಂಡು ಬಂದ ಹಿನ್ನೆಲೆ ಅವರು ವಾಪಸ್ ಕಳುಹಿಸಿದ್ದಾರೆ.
ಇದರ ಜತೆಗೆ ನಮ್ಮ ರೈಸ್ ಮಿಲ್ ಗೆ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿರುವ ಭತ್ತವನ್ನು ಅಕ್ಕಿ ಮಾಡಲು ಕಳುಹಿಸುವಂತೆ ಸೂಚನೆ ಇದ್ದರು ಅಧಿಕಾರಿಗಳು ತಮ್ಮ ಬೇಜವಬ್ದಾರಿಯಿಂದ ಎಪಿಎಂಸಿ ಉಗ್ರಾಣದಿಂದ ಕಳುಹಿಸಿ ಬೇರೆ ರೈಸ್ ಮಿಲ್ ನವರು ಕಳಪೆ ಎಂದು ತಿರಸ್ಕರಿಸುವ ಭತ್ತವನ್ನು ನನ್ನಗೆ ಕಳುಹಿಸಿದ್ದು, ಪರಿಶೀಲನೆ ನಂತರ ಇದು ಸಾಬೀತಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೋರ್ವ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ, ಖರೀದಿ ಕೇಂದ್ರ ತೆರೆದ ನಂತರ ಗೋದಾಮಿನಲ್ಲಿ ಸಂಗ್ರಹವಾಗುವ ಭತ್ತವನ್ನು ರೈಸ್ ಮಿಲ್ಗಳಿಗೆ ಅಕ್ಕಿ ಮಾಡಲು ಕಳುಹಿಸುವಾಗ ಯಾವುದೇ ನಿಯಮ ಪಾಲಿಸುವುದಿಲ್ಲ ಮತ್ತು ಇಲ್ಲಿನ ಏಜೆನ್ಸಿ ಮತ್ತು ಅಧಿಕಾರಿಗಳನ್ನು ಕೇಳುವವರೆ ಇಲ್ಲದಂತಾಗಿದ್ದು, ಜಿಲ್ಲಾಧಿಕಾರಿಗಳು ಗೋದಾಮಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೋಟ್...
- ವಾಣಿಶ್ರೀ, ಜಿಲ್ಲಾ ವ್ಯವಸ್ಥಾಪಕರು, ಕನಿಷ್ಠ ಯೋಜನಾ ಬೆಂಬಲ ಬೆಲೆ ಇಲಾಖೆ