ಬಸವಣ್ಣನ ಬಗ್ಗೆ ಅವಹೇಳನ: ಬಸವಾಭಿಮಾನಿಗಳಿಂದ ಪ್ರತಿಭಟನೆ

KannadaprabhaNewsNetwork |  
Published : Nov 21, 2026, 02:15 AM IST
ಕಲಘಟಗಿಯಲ್ಲಿ ಬಸವಾಭಿಮಾನಿಗಳಿಂದ ಪ್ರತಿಭಟನೆ | Kannada Prabha

ಸಾರಾಂಶ

ಬಸವಣ್ಣನವರ ಕುರಿತು ಅನಿವಾಸಿ ಭಾರತೀಯನಾದ ರವಿ ಹಂಜ್‌ ಅತ್ಯಂತ ಕೀಳುಮಟ್ಟದ ಮತ್ತು ಅವಹೇಳನಕಾರಿ ಪದ ಬಳಸಿ ಅಪಮಾನಿಸಿದ್ದಾನೆ. ಇದರಿಂದ ಬಸವಾಭಿಮಾನಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ.

ಕಲಘಟಗಿ:

ವಿಶ್ವಗುರು ಬಸವಣ್ಣನವರು ಹಾಗೂ ವಚನ ಸಾಹಿತ್ಯದ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಸವಾಭಿಮಾನಿಗಳು ಪ್ರತಿಭಟನೆ ನಡೆಸಿದರು.

ತಾಲೂಕಿನ ಹಿರೆಹೊನ್ನಿಹಳ್ಳಿ ಗ್ರಾಮದ ಶರಣರ ಬಳಗ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಪಟ್ಟಣ, ವಿವಿಧ ಗ್ರಾಮಗಳ ಶರಣರು, ಬಸವ ಭಕ್ತರು ಪಟ್ಟಣದ ಎಪಿಎಂಸಿಯಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಸವಣ್ಣನವರ ಕುರಿತು ಅನಿವಾಸಿ ಭಾರತೀಯನಾದ ರವಿ ಹಂಜ್‌ ಅತ್ಯಂತ ಕೀಳುಮಟ್ಟದ ಮತ್ತು ಅವಹೇಳನಕಾರಿ ಪದ ಬಳಸಿ ಅಪಮಾನಿಸಿದ್ದಾನೆ. ಇದರಿಂದ ಬಸವಾಭಿಮಾನಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ. ಇವರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ದ್ವೇಷ ಹರಡಿ, ಶಾಂತಿ-ಸೌಹಾರ್ದತೆ ಮತ್ತು ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ್ದಾರೆ ಎಂದು ದೂರಿದರು.ಈ ಸಂದರ್ಭದಲ್ಲಿ ನೀಲಪ್ಪ ಹಿರೇಗುಂಜಾಳ, ಅಶೋಕ ಶೀಲವಂತರ, ನೀಲಪ್ಪ ಮುತ್ತಗಿ, ರಾಮಣ್ಣ ಕೋಟಿ, ಬಸವರಾಜ ದಾಸನಕೊಪ್ಪ, ರಾಜಶೇಖರ ಶೀಲವಂತರ, ತಿಪ್ಪಣ್ಣ ಕುರುಗುಂದ, ಗುರು ಕಂಪ್ಲಿ, ಸಹದೇವ ಉಳ್ಳಾಗಡ್ಡಿ, ಶಂಕರ ದಾಸನಕೊಪ್ಪ, ಶಿವರುದ್ರ ಧನಿಗೊಂಡ, ಚನ್ನಬಸು ಶಿಗಟ್ಟಿ, ಶಂಕ್ರಪ್ಪ ಗಬ್ಬೂರು, ಶಿವಲಿಂಗ ಮೂಗನ್ನವರ, ಬಸವರಾಜ ಯಲಿವಾಳ, ರಾಮಣ್ಣ ಬಡಿಗೇರ, ನಿಂಗಪ್ಪ ಬೆಳ್ಳಿವಲಿ, ಸಹದೇವಪ್ಪ ಧನಿಗೊಂಡ, ಬಸಪ್ಪ ಕೆಲಗೇರಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ