ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ದೇಸಾಯಿ

KannadaprabhaNewsNetwork |  
Published : Nov 04, 2025, 12:30 AM IST
ದಿ. ಎನ್‌.ಸಿ. ದೇಸಾಯಿಯವರ ಕಲಾಕೃತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಕಲಾವಿದರು ತಾವು ರಚಿಸಿದ ಕಲಾ ಕೃತಿ ಮಾರಾಟ ಮಾಡಬಾರದು. ಇದರಿಂದ ಸಂಸ್ಕೃತಿ ಸಂಪತ್ತು ನಶಿಸಿಹೋಗುತ್ತದೆ. ಎನ್.ಸಿ. ದೇಸಾಯಿ ಅವರು ಕುರಿತು ಪುಸ್ತಕ ಪ್ರಕಟವಾಗಬೇಕು.

ಹುಬ್ಬಳ್ಳಿ:

ಕಲಾವಿದ ಎನ್.ಸಿ. ದೇಸಾಯಿ ಅವರು ಸಾಕಷ್ಟು ಆಸ್ತಿ- ಅಂತಸ್ತು ಇದ್ದರೂ ಸಹ ಕಲೆ ನಿಜವಾದ ಆಸ್ತಿ ಎಂದು ಅರಿತು ಕೊನೆಯ ವರೆಗೂ ಕಲೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.

ನಗರದ ಸರ್. ಸಿದ್ದಪ್ಪ ಕಂಬಳಿ ರಸ್ತೆಯ ಚಿಟಗುಪ್ಪಿ ಆವರಣದಲ್ಲಿರುವ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾವಿದ ದಿ. ಎನ್.ಸಿ. ದೇಸಾಯಿ ಅವರ ಶತಮಾನೋತ್ಸವ ಅಂಗವಾಗಿ ಅವರು ರಚಿಸಿದ ಕಲಾಕೃತಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯ ಗಳಿಸಿದ ಆಸ್ತಿಗೆ ವಾರಸುದಾರರಾಗಲು ಭಯಸುವವರ ಮಧ್ಯದಲ್ಲಿ ಅವರ ಕುಟುಂಬ, ಅವರು ಬಿಡಿಸಿದ ಕಲೆಗಳನ್ನು ಕಾಯ್ದುಕೊಂಡು ಪ್ರದರ್ಶನ ಮಾಡಿ ಸಮಾಜಕ್ಕೆ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿ. ಮನುಷ್ಯನಿಗೆ ಕಲೆ, ಸಾಹಿತ್ಯ, ಕಾವ್ಯ ಬಹಳ ಮುಖ್ಯ. ಕಾವ್ಯ ರಚಿಸಿದರೆ ಕವಿ, ಕಲೆ ಬಿಡಿಸಿದರೆ ಕಲಾವಿದರಾಗುತ್ತಾರೆ. ಕಲೆ, ಕವಿತೆ ಮನುಷ್ಯನಿಗೆ ಶಾಂತಿ, ನೆಮ್ಮದಿ ಜತೆಗೆ ಸಂತೋಷ ನೀಡುತ್ತದೆ ಎಂದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಬಸವರಾಜ ಕಲೆಗಾರ ಮಾತನಾಡಿ, ಕಲಾವಿದರು ತಾವು ರಚಿಸಿದ ಕಲಾ ಕೃತಿ ಮಾರಾಟ ಮಾಡಬಾರದು. ಇದರಿಂದ ಸಂಸ್ಕೃತಿ ಸಂಪತ್ತು ನಶಿಸಿಹೋಗುತ್ತದೆ. ಎನ್.ಸಿ. ದೇಸಾಯಿ ಅವರು ಕುರಿತು ಪುಸ್ತಕ ಪ್ರಕಟವಾಗಬೇಕು ಎಂದು ಹೇಳಿದರು.ಶಶಿ ಸಾಲಿ ಮಾತನಾಡಿ, ಕಲಾವಿದ ಎನ್.ಸಿ. ದೇಸಾಯಿ ಅವರು ಸರಳ- ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಹಲವು ವಾರ ಪತ್ರಿಕೆಗೆ ವರ್ಣ ಚಿತ್ರ ಬರೆಯುತ್ತಿದ್ದರು ಎಂದರು.

ಜ. ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ನಿವೃತ್ತ ಆರೋಗ್ಯಾಕಾರಿ ವಿ.ಬಿ. ನಿಟಾಲಿ, ಬಾಲಚಂದ್ರ ಬಹದ್ದೂರ, ರಿಷಿಕೇಶ ಬಹದ್ದೂರ, ಅಗಡಿ ಆನಂದವನದ ಗುರುದತ್ತ ಸ್ವಾಮಿ ಚಕ್ರವರ್ತಿ, ಭಾರತಿ ದೇಸಾಯಿ, ಹಿರೇಗೌಡರ, ಎಸ್.ಎಂ. ಕಾಂಬಳೆ, ಪ್ರತಾಪ ಬಹುರೂಪಿ ಇತರರು ಪಾಲ್ಗೊಂಡಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ