ಕಾರ್ಕಳ: ಬದುಕಿಗೆ ಆಸೆಗಳೇ ಇಂಧನ. ನಮ್ಮ ಸಾಮರ್ಥ್ಯದ ಅರಿವು ನಮಗಿರಬೇಕು. ನಮ್ಮಗೌರವದ ಸ್ಥಾನಮಾನಗಳು ಸಾವಿರ ಮಂದಿಗೆ ಕನಸಿನ ತಾಣವಾಗಿರುವಂತೆ ಬೆಳೆಯಬೇಕು. ಅತಿಯಾಸೆ ಇರುವವನು ಬಡವ, ಮಹತ್ತರವಾದ ಕನಸುಗಳನ್ನು ಕಾಣುವವನು ಶ್ರೀಮಂತ ಎಂದು ಮೈಸೂರಿನ ಸುತ್ತೂರು ಜೆ.ಎಸ್.ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಹಾಗೂ ವಾಗ್ಮಿ ಜಿ.ಎಲ್ ತ್ರಿಪುರಾಂತಕ ಹೇಳಿದರು.
ಬೆಲೆಬಾಳುವ ಒಂದು ವಜ್ರದಕ್ಕಿದ ಮೇಲೆ ಎಷ್ಟಾದರೂ ಕಲ್ಲುಗಳನ್ನು ಕಲೆ ಹಾಕಬಹುದು. ಹೆತ್ತವರು ನಮ್ಮ ಆಸೆಗಳನ್ನು ಈಡೇರಿಸಬಹುದು. ಆದರೆ ನಮ್ಮ ಕನಸುಗಳನ್ನು ನನಸು ಮಾಡುವ ಹೊಣೆ ನಮ್ಮದೇ ಎಂದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಸಹನಾ ಕಾರ್ಯಕ್ರಮ ನಿರೂಪಿಸಿದರು.