ಸುಂಟಿಕೊಪ್ಪದ ಇಮ್ಮಾನುವೆಲ್ ದೇವಾಲಯದಲ್ಲಿ ಮಹಿಳಾ ಕ್ರಿಸ್ಮಸ್ ಆಚರಣೆ

KannadaprabhaNewsNetwork |  
Published : Dec 24, 2025, 03:00 AM IST
 ದಕ್ಷಿಣಪ್ರಾಂತ್ಯ | Kannada Prabha

ಸಾರಾಂಶ

ಕ್ರಿಸ್ಮಸ್ ಆಚರಣೆ ಅಂಗವಾಗಿ ಕೊಡಗು ವಲಯದ ವಿವಿಧ ದೇವಾಲಯಗಳಿಂದ ಮಹಿಳಾ ಕ್ರಿಸ್ಮಸ್ ಆಚರಿಸಲಾಯಿತು.

ಸುಂಟಿಕೊಪ್ಪ: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಸುಂಟಿಕೊಪ್ಪದ ಇಮ್ಮಾನುವೆಲ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ ಅಂಗವಾಗಿ ಕೊಡಗು ವಲಯದ ವಿವಿಧ ದೇವಾಲಯಗಳಿಂದ ಮಹಿಳಾ ಕ್ರಿಸ್ಮಸ್ ಆಚರಿಸಲಾಯಿತು.

ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಆನಂದಪುರ, ಪಾಲಿಬೆಟ್ಟ ದೇವಾಲಯಗಳ ವ್ಯಾಪ್ತಿಯಲ್ಲಿರುವ ಮಹಿಳೆಯರು ಮತ್ತು ಯುವತಿಯರು ಸುಂಟಿಕೊಪ್ಪದ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಇಮ್ಮಾನುವೆಲ್ ದೇವಾಲಯದ ಆವರಣದಲ್ಲಿ ಅಯೋಜಿಸಲಾಗಿದ್ದ ಮಹಿಳಾ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿಯಾಗಿ ಪ್ರಭು ಕ್ರಿಸ್ತರ ಜನನದ ಸಂದೇಶದ ಗಾಯನ ಹಾಗೂ ರೂಪಕಗಳೊಂದಿಗೆ ಕ್ರಿಸ್ತ ಜಯಂತಿಯ ಸಂದೇಶ ಸಾರಿದರು. ಬಳಿಕ ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು.

ಸಮಾರಂಭವನ್ನು ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಬಿಷಪ್ ಹೇಮಚಂದ್ರ ಅವರ ಪತ್ನಿ ಮಂಗಳೂರು ಪ್ರಾಂತಿಯ ಮಹಿಳಾ ಅಧ್ಯಕ್ಷೆ ಬಾಲಭಾರತಿ ಅವರು ಉದ್ಘಾಟಿಸಿದರು.

ಮಹಿಳೆಯರು ಒಂದಾಗಿ ಸಮಾರಂಭವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಅವರಲ್ಲಿರುವ ಪ್ರತಿಭೆಗಳನ್ನು ಹೊರ ತರಲು ವೇದಿಕೆ ಒದಗಿಸಿದಂತಾಗಿದೆ ಎಂದು ಅವರು ಆಭಿಪ್ರಾಯಪಟ್ಟರು.

ಮಡಿಕೇರಿ ಶಾಂತಿ ದೇವಾಲಯದ ಧರ್ಮಗುರು ಮಧುಕಿರಣ್, ಕುಶಾಲನಗರದ ಮೆಡಕ್ ದೇವಾಲಯದ ಧರ್ಮಗುರು ಶ್ಯಾಮ್‌ವೆಲ್ ಮನೋಜ್ ಕುಮಾರ್, ಸೋಮವಾರಪೇಟೆ ಸಂತ ಜಾನ್ ದೇವಾಲಯದ ಧರ್ಮಗುರು ಪ್ರಿಯದರ್ಶಿನಿ, ಮಂಗಳೂರು ಪ್ರಾಂತಿಯ ಮಹಿಳಾ ಕಾರ್‍ಯದರ್ಶಿ ಸುಲೋಚನ ನಿರಂಜನ್, ಮಹಿಳಾ ವಲಯಾಧ್ಯಕ್ಷೆ ಅಕ್ಷಜೈಸನ್, ಸುಂಟಿಕೊಪ್ಪ ಇಮ್ಮಾನುವೆಲ್ ದೇವಾಲಯದ ಧರ್ಮಗುರು ಹಾಗೂ ವಲಯ ಅಧ್ಯಕ್ಷ ಜೈಸನ್ ಗೌಡ, ಆನಂದಪುರ ದೇವಾಲಯದ ಧರ್ಮಗುರು ಹಾಗೂ ವಲಯ ಕಾರ್‍ಯದರ್ಶಿ ಮಿಲನ್ ಚಕ್ರವರ್ತಿ, ಪಾಲಿಬೆಟ್ಟ ದೇವಾಲಯದ ಧರ್ಮಗುರು ಶಶಿಕುಮಾರ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ