ಆರ್ಥಿಕ ಚೇತರಿಕೆಗೆ ಕಾರಣವಾಗಿದ್ದ ಪರ್ಯಾಯ ಬೆಳೆಯೂ ಕೈಕೊಟ್ಟಿದೆ
ಕಡೂರು ಕೃಷ್ಣಮೂರ್ತಿ.ಕನ್ನಡಪ್ರಭ ವಾರ್ತೆ, ಕಡೂರುಬರಪೀಡಿತ ಕಡೂರು ತಾಲೂಕಿನಲೂ ಈ ಬಾರಿ ಈರುಳ್ಳಿ ಫಸಲು ಉತ್ತಮವಾಗಿದ್ದರೂ ರೈತರ ಶ್ರಮಕ್ಕೆ ತಕ್ಕಂತೆ ಲಾಭ ಸಿಗದೆ ಕಡಿಮೆ ಬೆಲೆ ದೊರೆಯುವಂತಾಗಿ ರೈತರು ಕಂಗಾಲಾಗಿದ್ದಾರೆ. 25 ವರ್ಷಗಳಿಗೂ ಹಿಂದೆ ಬಯಲು ಪ್ರದೇಶದ ಕಡೂರು ತಾಲೂಕಿನಲ್ಲಿ ರಾಗಿ ಮತ್ತು ಜೋಳವೇ ಪ್ರಮುಖ ಬೆಳೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ತಂತ್ರಜ್ಞಾನ ಹಾಗೂ ಕೃಷಿ ಇಲಾಖೆ ಮಾರ್ಗ ದರ್ಶನದಲ್ಲಿ ಪರ್ಯಾಯ ಬೆಳೆಗಳಾದ ಕುಂಬಳ, ಈರುಳ್ಳಿ, ಶುಂಠಿ, ಮೆಣಸಿನಕಾಯಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಾಲೂಕಿನ ಹಿರೇನಲ್ಲೂರು ಹೋಬಳಿ, ಚೌಳಹಿರಿಯೂರು ಮತ್ತು ಕಸಬಾ ಹೋಬಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮೆಣಸಿನಕಾಯಿ ಬೆಳೆ ಬೆಳೆದು ಆರ್ಥಿಕ ವಾಗಿ ಸ್ವಲ್ಪಮಟ್ಟಿಗೆ ರೈತರು ಚೇತರಿಸಿಕೊಂಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1 ಎಕರೆಗೆ ಸುಮಾರು 120 ಚೀಲಗಳಷ್ಟು (6-7 ಟನ್) ಈರುಳ್ಳಿ ಬೆಳೆ ಬಂದಿದ್ದರೂ ಕಳೆದ ವರ್ಷದಂತೆ 1ಕೆಜಿ ಈರುಳ್ಳಿಗೆ 28-32 ರು.ಇರಲಿ ಕನಿಷ್ಠ 20 ರು. ಗೂ ಮಾರಾಟವಾಗದೆ 1.ಕೆ.ಜಿ.ಗೆ ಕೇವಲ 7ರು. ಗೆ ಕೇಳುತ್ತಿರುವುದರಿಂದ ರೈತರು ಮಾರಾಟಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರೇನಲ್ಲೂರು ಹೋಬಳಿ ಕಾಮನಕೆರೆ ಗ್ರಾಮದ ರೈತ ಶಿವಲಿಂಗಪ್ಪ ಈ ಬಾರಿ ತಮ್ಮ 2.50 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಫಸಲು ಬಂದಿದೆ. ದಲ್ಲಾಳಿಗಳು 1 ಕೆಜಿಗೆ ಕೇವಲ 7 ರು. ಕೇಳುತ್ತಿರುವುದರಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಕಳೆದ ಬಾರಿ ಜಮೀನಿಗೆ ಬಂದು ಕೆಜಿಗೆ 28 ರು. ನಂತೆ ಖರೀದಿಸಿದ್ದರು. ಈರುಳ್ಳಿ ಬೆಳೆಯಲು ಕೂಲಿ, ಗೊಬ್ಬರ, ಬಿತ್ತನೆ ಬೀಜ, ಔಷಧಿ, ಈರುಳ್ಳಿ ಕೀಳಿಸಿ, ಬಿಡಿಸುವುದು ಸೇರಿದಂತೆ 1ಎಕರೆಗೆ ಸುಮಾರು 70 ಸಾವಿರ ಖರ್ಚು ಬಂದಿದೆ. ಇದನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ಹಲುಬಿದ್ದಾರೆ. ಮುಂದೆ ಬೆಲೆ ಸಿಗುವ ಆಶಾ ಭಾವನೆಯಿಂದ 1 ತಿಂಗಳು ತನಕ ಕಾದು ನೋಡಿ ಮಾರಾಟ ಮಾಡುವ ತೀರ್ಮಾನಿಸಿದ್ದು ಈಗ ದಾಸ್ತಾನು ಮಾಡುತ್ತೇವೆ ಎಂದರು. ಈರುಳ್ಳಿ ಬೆಳೆದ ರೈತರ ಕಣ್ಣೀರು ಒರೆಸಲು ರಾಜ್ಯ ಸರಕಾರ ಅವರಿಗೆ ನೆರವಾಗಬೇಕು ಎಂದು ರೈತರು ಮನವಿ ಮಾಡುತ್ತಿದ್ದು ಸ್ಥಳೀಯ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ರಾಜ್ಯ ಸರಕಾರದ ಗಮನ ಸೆಳೆದು ಬೆಂಬಲ ಬೆಲೆ ಕೊಡಿಸಿ ನಮ್ಮನ್ನು ಉಳಿಸಬೇಕು ಎಂದು ರೈತರು ಕೋರಿದ್ದಾರೆ. -- ಬಾಕ್ಸ್ --5 ಸಾವಿರ ರು.ನಂತೆ ನಾಲ್ಕು ಬಾರಿ ಈರುಳ್ಳಿ ಕಳೆ ತೆಗೆಸಲು 20 ಸಾವಿರ, ಗೊಬ್ಬರ, ಔಷಧಿ,ಈರುಳ್ಳಿ ಕೀಳಲು ಮತ್ತು ಬಿಡಿಸಲು ಸೇರಿ 1 ಎಕರೆಗೆ 70 ಸಾವಿರ ರು. ಖರ್ಚು ಬರುತ್ತಿದೆ. ಈರುಳ್ಳಿ ಬೆಳೆದು ಕಷ್ಟಕ್ಕೆ ಸಿಲುಕಿದ್ದೇವೆ. ಹಿಂದಿನ ವರ್ಷ 1 ಕೆ.ಜಿಗೆ ಸುಮಾರು 20 ರಿಂದ 25 ರು.ಸಿಕ್ಕಿತ್ತು. ಈ ಸಲ 1.ಕೆಜಿ. ಈರುಳ್ಳಿಗೆ ಕೇವಲ 7 ರು. ಕೇಳುತ್ತಿದ್ದಾರೆ. 3 ರೀತಿ ಗ್ರೇಡಿಂಗ್ ಮಾಡಿಸಿ ದಾಸ್ತಾನು ಮಾಡಿ 1ತಿಂಗಳು ಕಾದು ಧಾರಣೆ ನೋಡಿ ಮಾರಾಟ ಮಾಡುತ್ತೇವೆ
- ಶಂಬು ಲಿಂಗಪ್ಪ, ರೈತ, ಕಾಮನಕೆರೆ.ಈರುಳ್ಳಿ ಬೆಳೆಯೊಂದಿರೆ ರೈತರು,
15ಕೆಕೆಡಿಯು1ಎ.. ಈರುಳ್ಳಿ ಬಿಡಿಸುತ್ತಿರುವುದು,