ಅತಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲ ವಿನಾಶ: ಪ್ರೊ.ಎ.ಎಸ್.ಚಂದ್ರಶೇಖರ್

KannadaprabhaNewsNetwork |  
Published : Jun 07, 2024, 01:32 AM ISTUpdated : Jun 07, 2024, 10:27 AM IST
ಪೊಟೊ: 4ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಹೊರವಲಯದಲ್ಲಿರುವ ರೋಟರಿ ಬಯೋಡೈವರ್ಸಿಟಿ ಪಾರ್ಕ್‌ನಲ್ಲಿ ಗಿಡ ನೆಡುವ ಹಾಗೂ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪರಿಸರದಿಂದ ಸಕಲವನ್ನು ಪಡೆದ ನಾವು ಕಾಡುಗಳ ಕಡಿದು ಪರಿಸರ ಹಾನಿ ಮಾಡುತ್ತಿದ್ದೇವೆ. ಕಾಡು ಕಡಿತದಿಂದ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತಿವೆ.  

 ಶಿವಮೊಗ್ಗ ;  ಇಂದು ನಗರೀಕರಣ ಹಾಗೂ ಮನುಷ್ಯನ ದುರಾಸೆಯಿಂದ ಪರಿಸರ ವಿನಾಶದತ್ತ ಸಾಗುತ್ತಿದೆ ಎಂದು ಪ್ರೊ.ಎ.ಎಸ್.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿರುವ ರೋಟರಿ ಬಯೋಡೈವರ್ಸಿಟಿ ಪಾರ್ಕ್ ನಲ್ಲಿ ನಗರದ ಎಲ್ಲ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಹಾಗೂ ಇಂಡೋ ಕಿಡ್ಸ್ ಮಕ್ಕಳು ಹಾಗೂ ಶಿಕ್ಷಕರು ಆಡಳಿತ ಮಂಡಳಿ ಸಹಕಾರದಲ್ಲಿ ಆಯೋಜಿಸಿದ್ದ ಗಿಡ ನೆಡುವ ಹಾಗೂ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದಿಂದ ಸಕಲವನ್ನು ಪಡೆದ ನಾವು ಕಾಡುಗಳ ಕಡಿದು ಪರಿಸರ ಹಾನಿ ಮಾಡುತ್ತಿದ್ದೇವೆ. ಕಾಡು ಕಡಿತದಿಂದ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತಿವೆ. ಆದ್ದರಿಂದ ಮನುಕುಲಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.ವಾಯುಮಾಲಿನ್ಯ ಮತ್ತು ಜಲಮಾಲಿನ್ಯದಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಮನುಕುಲ ವಿನಾಶದತ್ತ ಕರೆದೊಯ್ಯುತ್ತಿದೆ. ಇಂದು ಗಿಡಗಳ ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ವಲ್ಪ ಜಾಗ ಸಿಕ್ಕರೂ ವಾಣಿಜ್ಯ ಬಳಕೆಗೆ ಬಳಸುತ್ತಾರೆ ಎಂದರು.

ಹವಾಮಾನ ವೈಪರೀತ್ಯದಿಂದ ಹಾಗೂ ಅತಿಯಾದ ತಾಪಮಾನದಿಂದ ಮನುಷ್ಯ ಜೀವಿಸುವುದು ಕಷ್ಟಕರವಾಗಿದೆ. ಜಲ ಮಾಲಿನ್ಯದಿಂದ ನೀರನ್ನು ಕಲುಷಿಗೊಳಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ಪರಿಸರ ಸಂರಕ್ಷಣೆಯು ಮುಖ್ಯ. ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಹಾಯಕ ಗವರ್ನರ್ ಕೋಟೋಜಿ ರವಿ ಮಾತನಾಡಿ, ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂಬುದು ಚಿಂತಿಸಬೇಕು. ಶುದ್ಧವಾದ ಆಮ್ಲಜನಕದ ಕೊರತೆ ಇದೆ. ವಿವಾಹ ವಾರ್ಷಿಕೋತ್ಸವ ಹಾಗೂ ಜನ್ಮದಿನ ಸೇರಿ ವಿಶೇಷ ಸಂದರ್ಭಗಳಲ್ಲಿ ಗಿಡಗಳ ನೆಡುವ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಲಯ 10ರ ನಿಯೋಜಿತ ಸಹಾಯಕ ಗವರ್ನರ್ ನಾಗರಾಜ್ ಎಸ್ಸಾರ್ ಮಾತನಾಡಿ, ಕಲುಷಿತ ವಾತಾವರಣ, ಜಾಗತಿಕ ತಾಪಮಾನದಿಂದ ಯಾವಾಗ ಬೇಕಾದರೂ ಮಳೆ ಬರುವುದು ಹಾಗೂ ತಾಪಮಾನ ಹೆಚ್ಚುವುದು ಆಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪಾಲಿಸಬೇಕು ಎಂದರು.

ಪ್ರತಿ ಮಕ್ಕಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಹಾಯಕ ಗೌವರ್ನರ್ ಎಂ.ಪಿ.ಆನಂದಮೂರ್ತಿ, ಭಾರತಿ ಚಂದ್ರಶೇಖರ್, ಕೆ.ಪಿ.ಶೆಟ್ಟಿ, ಗುರುರಾಜ್, ಎಂ.ಎಸ್.ಬಸವರಾಜ್ ಹಾಗೂ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನ ಮುಖ್ಯ ರೂವಾರಿ ಉಮೇಶ್, ಸೋಮಶೇಖರ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. 

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು