ಕನ್ನಡಪ್ರಭ ವಾರ್ತೆ ಮೂಲ್ಕಿ
ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯಂತೆ ಮೂಲ್ಕಿಯ ಕೊಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೇನೆಬಿಲಿಟಿ ಹೆಲ್ತ್‌ಕೇರ್ ಸೊಲ್ಯೂಷನ್ ಕಂಪನಿಯಲ್ಲಿ ಬುಧವಾರ ನಾಶಪಡಿಸಲಾಯಿತು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, 2025ನೇ ಸಾಲಿನಲ್ಲಿ ಇದುವರೆಗೆ 5 ಪ್ರಕರಣಗಳನ್ನು ದಾಖಲಿಸಿ 9 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 73,75,000 ರುಯ ಬೆಲೆಬಾಳುವ ಗಾಂಜಾ ಎಂಡಿಎ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳ ಒಟ್ಟು 37 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 6,80,86,558 ಮೌಲ್ಯದ 460 ಕೆಜಿ 335 ಗ್ರಾಂ ಗಾಂಜಾ, 7 ಕೆಜಿ 640 ಗ್ರಾಂ ಎಂಡಿಎಂಎ ಮತ್ತು ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಯಿತು.