ಕನ್ನಡಪ್ರಭ ವಾರ್ತೆ ತುಮಕೂರು
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾದ 5300 ಕೋಟಿ ರು. ಬಿಡುಗಡೆಗೊಳಿಸಿ, ಶೀಘ್ರ ಅನುಷ್ಠಾನಕ್ಕೆ ಸಂಕಲ್ಪ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯನ್ನು ಜಲಜೀವನ್ ಮಿಷನ್ ಕಾರಿಡಾರ್ ಆಗಿ ಘೋಷಣೆ ಮಾಡಿಸಲಾಗುವುದು. ತುಮಕೂರು ಲೋಕಸಭಾ ಕ್ಷೇತ್ರದ ಎಲ್ಲ ಕೆರೆಗಳಿಗೆ ನದಿ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲ ನಗರಗಳಿಗೆ 24/7 ಕುಡಿಯುವ ನೀರಿನ ವ್ಯವಸ್ಥೆಗೆ ಜಾರಿ ಮಾಡಲಾಗುವುದು ಎಂದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ತುಮಕೂರಿನಲ್ಲಿ ಐಐಟಿ, ಮಧುಗಿರಿ-ತಿಪಟೂರು ವಿಭಾಗಗಳಲ್ಲಿ ಕೇಂದ್ರೀಯ ವಿದ್ಯಾಲಯ, ನವೋದಯ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸ್ಥಾಪನೆ, ಇಎಸ್‌ಐ ಆಸ್ಪತ್ರೆ, ಹೈಟೆಕ್ ಮಹಿಳೆ ಮತ್ತು ನವಜಾತ ಶಿಶುಗಳ ಆರೈಕೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಡಯಾಲಿಸಿಸ್ ಆಸ್ಪತ್ರೆ ಉನ್ನತೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುವುದು. ಎಲ್ಲ ತಾಲೂಕು ಕೇಂದ್ರಗಳನ್ನು ಸ್ಮಾರ್ಟ್ ಟೌನ್‌ಗಳಾಗಿ ಪರಿವರ್ತಿಸಿ ಆಧುನಿಕ ಸೌಕರ್ಯ ಒದಗಿಸಲಾಗುವುದು. ಸುಸ್ಥಿರ ಮೂಲ ಸೌಕರ್ಯಗಳ ಸೌಲಭ್ಯ, ವಸಂತನರಸಾಪುರದಲ್ಲಿ ಇಂಡೋರ್ ಮಾದರಿಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ತುಮಕೂರಿನಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಉನ್ನತ ದರ್ಜೆಗೇರಿಸಲಾಗುವುದು ಎಂದು ಹೇಳಿದರು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಸ್ಥಾಪನೆ, ಬೆಂಗಳೂರಿನ ಮಾದರಿಯಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾಪನೆ, ಇಸ್ರೋ ಘಟಕಕ್ಕೆ ಹೆಚ್ಚಿನ ಒತ್ತು, ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ವೇಗ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಐತಿಹಾಸಿಕ ಸ್ಥಳಗಳ ಗುರುತಿಸುವಿಕೆ ಮತ್ತು ಪ್ರವಾಸೋದ್ಯಮಕ್ಕೆ ಸೂಕ್ತವಾದ ಮೂಲಸೌಕರ್ಯ ಒದಗಿಸಿ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದರು.ಅಭಿವೃದ್ಧಿಯ ಹೆಸರಿನಲ್ಲಿ ಕಡಿದಿರುವ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡುವುದು, ಕಾಡಿನ ಸಂರಕ್ಷಣೆ, ಜಲಚರ ಸೇರಿದಂತೆ ಎಲ್ಲ ಜೀವ ಸಂಕುಲ ಸಂರಕ್ಷಣೆ ಮಾಡಲು ಸಂಕಲ್ಪ ಮಾಡಲಾಗಿದೆ. ಈ ಎಲ್ಲ ಯೋಜನೆಗಳು ಸಾಕಾರಗೊಳ್ಳಲು ಈ ಬಾರಿ ಸೋಮಣ್ಣರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ರೈತ ಮೋರ್ಚಾ ಎಸ್. ಶಿವಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಅಡಿಕೆ ಸಂಸ್ಕರಣಾ ಘಟಕ ಸ್ಥಾಪನೆ, ತೆಂಗು ಆಧಾರಿತ ಉತ್ಪನ್ನಗಳ ಬೃಹತ್ ಕೈಗಾರಿಗೆ, ಬೆಂಬಲ ಬೆಲೆಯಲ್ಲಿ ಶಾಶ್ವತ ಕೊಬ್ಬರಿ ಖರೀದಿ ಕೇಂದ್ರ ತೆರೆಯುವುದು, ಕೇಂದ್ರದ ಸಹಕಾರದೊಂದಿಗೆ ಕೋಕೋನಟ್ ಸ್ಪೆಷಲ್ ಎಕಾನಾಮಿಕ್ ಝೋನ್ ಸ್ಥಾಪನೆ, ಚಿಕ್ಕನಾಯಕನಹಳ್ಳಿಯಲ್ಲಿ ಸಿರಿಧಾನ್ಯ ಹಾಗೂ ಆರ್ಗಾನಿಕ್ ಫಾರ್ಮಿಂಗ್ ಕ್ಲಸ್ಟರ್ ಸ್ಥಾಪನೆ, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಉಗ್ರಾಣ ಮತ್ತು ಶೈಥಲೀಕರಣ ಘಟಕ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ಅಭಿವೃದ್ಧಿಯ ಸಂಕಲ್ಪ ಪತ್ರದ ಸಂಚಾಲಕರಾದ ಅನಿಲ್‌ಕುಮಾರ್, ಜಿ.ಆರ್. ಸುರೇಶ್‌ಕುಮಾರ್, ಟಿ.ಆರ್. ಸದಾಶಿವಯ್ಯ, ಜಗದೀಶ್ ಇದ್ದರು.