ಕನ್ನಡಪ್ರಭ ವಾರ್ತೆ ಘಟಪ್ರಭಾ: ದೇವದಾಸಿ ಮಹಿಳೆಯರೆಲ್ಲರೂ ಸೇರಿ ತಮ್ಮದೇ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮದ ಬೆಳಗಾವಿಯ ಡಿವಿಜನಲ್ ಮ್ಯಾನೇಜರ್ ಬಿ.ಪಿ ರವಿ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾ: ದೇವದಾಸಿ ಮಹಿಳೆಯರೆಲ್ಲರೂ ಸೇರಿ ತಮ್ಮದೇ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮದ ಬೆಳಗಾವಿಯ ಡಿವಿಜನಲ್ ಮ್ಯಾನೇಜರ್ ಬಿ.ಪಿ ರವಿ ಹೇಳಿದರು.
ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಘಟಪ್ರಭಾ(ಮಾಸ್) ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ದೇವದಾಸಿ ಮಹಿಳೆಯರಿಗಾಗಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಸ್ಥಾಪನೆಯಾಗಿರುವ ಒಂದು ಸಂಸ್ಥೆ. ಈ ಸಂಸ್ಥೆ ಸತತ 27 ವರ್ಷಗಳಿಂದ ಸಾಮಾಜಿಕ ಕಾರ್ಯ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ ಎಂದು ಹೇಳಿದರು.ಪ್ರಾಸ್ತವಿಕವಾಗಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಮಾಸ್ ಸಂಸ್ಥೆಯ ಸಿಇಒ ಡಾ.ಸೀತವ್ವ ಜೋಡಟ್ಟಿ ಅವರು, ಈ ಸಂಸ್ಥೆ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಸ್ಥಾಪನೆಯಾಗಿ ಅನೇಕ ದಶಕಗಳಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಶ್ರಮಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ದೇವದಾಸಿ ಪದ್ಧತಿಯನ್ನು ಬೇರು ಸಹಿತ ಕಿತ್ತು ಹಾಕಲಾಗಿದ್ದು, ಈ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಬೇಕೆಂಬ ಕನಸನ್ನು ನನಸು ಮಾಡಲಾಗಿದೆ. ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಸತತವಾಗಿ ಪ್ರಯತ್ನ ಪಟ್ಟು ಈ ಕಾರ್ಯವನ್ನು ಯಶಸ್ಸುಗೂಳಿಸಲಾಗಿದೆ ಎಂದರು.ಹಲವಾರು ಯೋಜನೆಗಳ ಮೂಲಕ ದೇವದಾಸಿ ಹಾಗೂ ಮಾಜಿ ದೇವದಾಸಿಯವರು ಸಾಮಾಜಿಕವಾಗಿ ಆರ್ಥಿಕವಾಗಿ ಸಮಾಜದಲ್ಲಿ ಸಬಲೀಕರಣವಾಗುವಂತೆ ಮಾಡಲಾಗಿದೆ. ಅದರ ಜೊತೆಗೆ ದಲಿತ ಹಾಗೂ ದೇವದಾಸಿಯ ಮಕ್ಕಳು ಮತ್ತು ಮೊಮ್ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಅವರಿಗೆ ಉನ್ನತ ಶಿಕ್ಷಣ ನಿಧಿಯನ್ನು ಸಹ ನೀಡಲಾಗುತ್ತಿದೆ. ಸರ್ಕಾರದಿಂದ ಮಾಸಿಕ ಪಿಂಚಣಿ ಹಾಗೂ ಸಂಸ್ಥೆಯಿಂದ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ ಈಗ ಸ್ವಂತ ಕಟ್ಟಡ ನಿರ್ಮಾಣದಿಂದ ದೇವದಾಸಿಯರ ಕನಸು ಈಗ ನನಸಾಗಿದೆ ಎಂದು ಹೇಳಿದರು.ಭಾರತೀಯ ಜೀವ ವಿಮಾ ನಿಗಮ ಹಾಗೂ ಇನ್ನೂ ಹಲವಾರು ಸಂಸ್ಥೆಗಳು ಸಹಾಯ ಮಾಡಿರುವುದರಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಎಲ್ಐಸಿ ಸೇಲ್ಸ್ ಮ್ಯಾನೇಜರ್ ಎಂ.ಎಸ್.ಮಾನೆ ಮತ್ತು ಇತರೆ ಅಧಿಕಾರಿಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.