ದೇವರಹಿಪ್ಪರಗಿ: ಶೇ.62.11ರಷ್ಟು ಮತದಾನ

KannadaprabhaNewsNetwork |  
Published : May 08, 2024, 01:01 AM IST
ಕ್ಷೇತ್ರದಲ್ಲಿ ಶೇ.00% ರಷ್ಟು ಮತದಾನ.ಬಹುತೇಕ ಶಾಂತಿಯುತ. | Kannada Prabha

ಸಾರಾಂಶ

ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆ ಮಂಗಳವಾ ಸುಸೂತ್ರವಾಗಿ ನಡೆಯಿತು.ಚುನಾವಣೆಯಲ್ಲಿ ಕ್ಷೇತ್ರಾದ್ಯಂತ ಶೇ.62.11ರಷ್ಟು ಮತದಾನವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನದಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಪ್ರಾರಂಭವಾದ ಮತದಾನ ಬಿಸಿಲು ಏರುತ್ತ ತುಸು ಚುರುಕುಗೊಂಡು ಸಂಜೆ ಉತ್ತಮವಾಗಿ ಮತದಾನ ನಡೆಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆ ಮಂಗಳವಾ ಸುಸೂತ್ರವಾಗಿ ನಡೆಯಿತು.ಚುನಾವಣೆಯಲ್ಲಿ ಕ್ಷೇತ್ರಾದ್ಯಂತ ಶೇ.62.11ರಷ್ಟು ಮತದಾನವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನದಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಪ್ರಾರಂಭವಾದ ಮತದಾನ ಬಿಸಿಲು ಏರುತ್ತ ತುಸು ಚುರುಕುಗೊಂಡು ಸಂಜೆ ಉತ್ತಮವಾಗಿ ಮತದಾನ ನಡೆಯಿತು.

ಪ್ರತಿ ಮತದಾನ ಕೇಂದ್ರಗಳಿಗೆ ಪೊಲೀಸ್‌ರಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಾಂತಿಯುತ ಮತದಾನಕ್ಕೆ ಮತದಾರರು ಅಗತ್ಯ ಸಹಕಾರ ನೀಡಿದರು. ದೇವರಹಿಪ್ಪರಗಿ ಮತಕ್ಷೇತ್ರದ ಹಾಲ್ಯಾಳ ಗ್ರಾಮಕ್ಕೆ ಚುನಾವಣಾ ವೀಕ್ಷಕರಾದ ಡಾ.ರತನಕುಮಾರಿ ಕನವರ(ಐಎಎಸ್) ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚುನಾವಣಾ ಕಾರ್ಯದಲ್ಲಿ ಸಹಾಯಕ ಚುನಾವಣಾಧಿಕಾರಿ ಪ್ರವೀಣ್ ಜೈನ್, ತಹಸೀಲ್ದಾರ್ ಪ್ರಕಾಶ ಸಿಂದಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವಕುಮಾರ ಜಿನ್ನುರ, ಶಿರಸ್ತೇದಾರ ಸುರೇಶ ಮ್ಯಾಗೇರಿ ಸೇರಿದಂತೆ ಮಾಸ್ಟರ್ ಟ್ರೇನರ್‌ಗಳು ಚುನಾವಣಾ ಕಾರ್ಯಕ್ಕೆ ಆಗಮಿಸಿದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ