ದೇವರಾಜ ಅರಸು ಓರ್ವ ದಾರ್ಶನಿಕ ವ್ಯಕ್ತಿ: ಪ್ರೊ.ರವಿವರ್ಮ ಕುಮಾರ್‌

KannadaprabhaNewsNetwork |  
Published : Nov 22, 2025, 01:15 AM IST
4 | Kannada Prabha

ಸಾರಾಂಶ

ದೇವರಾಜ ಅರಸು ಅವರು ನನಗೆ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ನೀಡಿದ್ದರು. ಬೆಳಗೆದ್ದು ನಾನು ಯಾರ್ಯಾರ ನೆನೆಯಾಲಿ ಎಂದು ಹಾಡು ಹೇಳಿದರೆ, ನನ್ನ ಹೆತ್ತ ತಂದೆ, ತಾಯಿಯ ಜತೆಗೆ ಡಿ. ದೇವರಾಜ ಅರಸು ಅವರನ್ನು ನೆನೆಯಬೇಕು. ಅವರು ಭೂ ಸುಧಾರಣ ಕಾಯ್ದೆ ಜಾರಿಗೊಳಿಸಿದಾಗ ದಾಖಲಾದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಹೊಣೆಯನ್ನು ನನಗೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ದೇವರಾಜ ಅರಸು ಅವರು ಲಿಂಗಾಯತರು ಮತ್ತು ಬ್ರಾಹ್ಮಣರಿಗೂ ಮೀಸಲಾತಿ ನೀಡಿದ್ದಾಗಿ ನಿವೃತ್ತ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇವರಾಜ ಅರಸು ಮತ್ತು ಎಲ್‌.ಜಿ.ಹಾವನೂರು ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇವರಾಜ ಅರಸು ಅವರು ನನಗೆ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ನೀಡಿದ್ದರು. ಬೆಳಗೆದ್ದು ನಾನು ಯಾರ್ಯಾರ ನೆನೆಯಾಲಿ ಎಂದು ಹಾಡು ಹೇಳಿದರೆ, ನನ್ನ ಹೆತ್ತ ತಂದೆ, ತಾಯಿಯ ಜತೆಗೆ ಡಿ. ದೇವರಾಜ ಅರಸು ಅವರನ್ನು ನೆನೆಯಬೇಕು. ಅವರು ಭೂ ಸುಧಾರಣ ಕಾಯ್ದೆ ಜಾರಿಗೊಳಿಸಿದಾಗ ದಾಖಲಾದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಹೊಣೆಯನ್ನು ನನಗೆ ನೀಡಿದ್ದಾಗಿ ಹೇಳಿದರು.

ಭೂ ಸುಧಾರಣಾ ಕಚೇರಿಯನ್ನು ತೆರೆದು ಅಲ್ಲಿಯೇ ಕುಳಿತು ಅಲ್ಲಿಗೆ ಸಲ್ಲಿಕೆಯಾದ ದೂರುಗಳಿಗೆ ರಿಟ್‌ ಸಲ್ಲಿಸುವ ಜವಾಬ್ದಾರಿ ನೀಡಿದರು. ಸುಮಾರು 15 ಸಾವಿರ ಪ್ರಕರಣಗಳನ್ನು ನನಗೆ ಕೊಟ್ಟಿದ್ದರು. ಈಗ ಅವರ ಹೆಸರಿನಲ್ಲಿ ನನಗೆ ಪ್ರಶಸ್ತಿ ನೀಡುತ್ತಿರುವುದಕ್ಕೆ ನಿಮ್ಮ ಸಂಘಕ್ಕೆ ವಂದನೆ ಸಲ್ಲಿಸುತ್ತೇನೆ ಎಂದರು.

ಒಮ್ಮೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಆಚೆ ಕೆಲವರು ನಿರ್ಗತಿಕರಂತೆ ಕುಳಿತ್ತಿದ್ದರು. ಅವರನ್ನು ನೋಡಿ ಕಾರು ನಿಲ್ಲಿಸುವಂತೆ ಸೂಚಿಸಿದ ಅರಸು ಅವರು ನೀವು ಯಾರೆಂದು ವಿಚಾರಿಸಿದರು. ಅವರು ತಾವೆಲ್ಲರೂ ಕುಷ್ಟ ರೋಗಕ್ಕೆ ತುತ್ತಾಗಿದ್ದು, ನಮ್ಮನ್ನು ಇದರಿಂದ ಪಾರು ಮಾಡುವಂತೆ ಕೋರಿದರು. ಕೂಡಲೇ 165 ಎಕರೆಯನ್ನು ಪಾದ್ರಿಯೊಬ್ಬರಿಗೆ ನೀಡಿದ ಅರಸು ಅವರು, ತಾವು ಕುಷ್ಟರೋಗ ನಿರ್ಮೂಲನ ಕೇಂದ್ರವನ್ನು ತೆರೆಯುವಂತೆ ಸೂಚಿಸಿದರು.

ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಹಿಂದಕ್ಕೆ ಪಡೆಯಲು ಉದ್ದೇಶಿಸಿದ್ದಾಗಿ ಅವರು ತಿಳಿಸಿದರು.

ದೇವರಾಜ ಅರಸು ಅವರು ಒಬ್ಬ ದಾರ್ಶನಿಕ ವ್ಯಕ್ತಿ. ಅವರ ತೀರ್ಮಾನಗಳಲ್ಲಿ ಒಂದು ವಿಶ್ವಾಸ ಇತ್ತು. ದೇವರಾಜ ಅರಸು ಅವರು ರಚಿಸಿದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಿಂದು ಸಂಪೂರ್ಣ ನಿಷ್ಕ್ರೀಯಗೊಳಿಸಿದೆ. ಹೊರ ದೇಶದ ಮಾರ್ವಾಡಿಗಳು ಜಮೀನು ಖರೀದಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.

ಹಿರಿಯ ವಿದ್ಯಾರ್ಥಿಗಳ ಈ ಸಮಿತಿಯಲ್ಲಿ ಒಬ್ಬಳೇ ಒಬ್ಬಳು ಹೆಣ್ಣು ಮಗಳೂ ಇಲ್ಲ. ಆದ್ದರಿಂದ ಕೂಡಲೇ ವಿದ್ಯಾರ್ಥಿ ನಿಲಯಗಳಲ್ಲಿ ಓದಿದ ವಿದ್ಯಾರ್ಥಿನಿಯರು ನಿಮಗಿಂತ ಮುಂದಿದ್ದಾರೆ. ಅವರನ್ನು ಸೇರಿಸಿ ಹೆಚ್ಚಿನ ಕೆಲಸ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

2ಬಿ ಯಿಂದ ಕೈಬಿಟ್ಟು ಆದೇಶಿಸಿದೆ. ಅದನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರು. ಅದನ್ನು ಹಿಂದಕ್ಕೆ ಪಡೆದಿಲ್ಲ. ದೇವರಾಜ ಅರಸು ಮತ್ತು ಹಾವನೂರರ ವ್ಯಕ್ತಿಚಿತ್ರವನ್ನು ಪಠ್ಯ ಪುಸ್ತಕದಲ್ಲಿ ದೊರಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

PREV

Recommended Stories

ಮಠ-ಮಾನ್ಯಗಳು ಗ್ರಾಮ ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು: ಎಚ್‌.ಕೆ. ಪಾಟೀಲ್
ದೊಡ್ಡ ಕನಸುಗಳ ಈಡೇರಿಕೆಗೆ ಶಿಕ್ಷಣ ಬೇಕು: ಪ್ರೊ.ಡಿ.ಎಸ್.ಗುರು