ಕನ್ನಡಪ್ರಭ ವಾರ್ತೆ ಮೈಸೂರು
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೆಂಕಟೇಶ್ ಅವರ ಹೇಳಿಕೆ ನೋಡಿ ಅವರ ಮೇಲೆ ಇದ್ದ ಎಲ್ಲ ಗೌರವವು ಮರೆಯಾಗಿದೆ. ದೇವೇಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತೆ ಹೊರತು, ತುಳಿದು ಗೊತ್ತಿಲ್ಲ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದರು.
ನನಗೆ ಟಿಕೆಟ್ ಕೊಡಿಸಬೇಕು ಎಂದು ಒಂದು ಗಂಟೆ ಕಾಲ ಕಾದು ಅಮಿತ್ ಶಾ ಅವರ ಜೊತೆ ಪೋನ್‌ನಲ್ಲಿ ಮಾತನಾಡಿದ್ದು ದೇವೇಗೌಡರು. ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರನ್ನು ಕೇಳಿದವರಲ್ಲಿ ದೇವೇಗೌಡರು ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ? ಎಂದು ಅವರು ಬೇಸರ ವ್ಯಕ್ತಪಡಿಸಿದರು.ಮೈಸೂರಿನಲ್ಲಿ ಕಾಂಗ್ರೆಸ್‌ನವರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ. ನಾಳೆ ಇನ್ನೂ ಒಂದು ದಿನ ಅವಕಾಶ ಇದೆ. ಈಗಲಾದರೂ ನಿಮಗೆ ಅಭ್ಯರ್ಥಿ ಬದಲಾಯಿಸಲು ಅವಕಾಶ ಇದೆ. ಅದನ್ನು ಬೇಕಾದ್ರೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.