ನಮ್ದೇ ಸರ್ಕಾರ ಇದೆ, ನಮ್ಮವರನ್ನೇ ಗೆಲ್ಲಿಸಿಕೊಳ್ಳೋಣ

KannadaprabhaNewsNetwork |  
Published : Apr 04, 2024, 01:07 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್ 11 | Kannada Prabha

ಸಾರಾಂಶ

ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ನಮ್ಮವರೇ ಆದ ಬಿ.ಎನ್.ಚಂದ್ರಪ್ಪ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳೋಣ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ತುರುವನೂರು: ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ನಮ್ಮವರೇ ಆದ ಬಿ.ಎನ್.ಚಂದ್ರಪ್ಪ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳೋಣ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಮುದ್ದಾಪುರ, ಚಿಕ್ಕಗೊಂಡನಹಳ್ಳಿ, ಕೂನಬೇವು, ಮಾಡನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಬುಧವಾರ ಭೇಟಿ ಮಾಡಿ ಮಾತನಾಡಿ, ಬಿ.ಎನ್.ಚಂದ್ರಪ್ಪ ಅವರು ಕಳೆದ ಬಾರಿ ಸೋಲು ಅನುಭವಿಸಿದರೂ ಜನರ ಜೊತೆಗಿದ್ದು, ಕೆಲಸ ಮಾಡಿದ್ದಾರೆ. ಅಂತಹ ವ್ಯಕ್ತಿಯ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಎಲ್ಲರೂ ಹೊರಬೇಕೆಂದರು.

ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಊರುಗಳಲ್ಲಿ ಅತ್ಯಧಿಕ ಲೀಡ್ ಕೊಡಬೇಕು. ಪಕ್ಷ ನುಡಿದಂತೆ ನಡೆದಿದ್ದು, ಇದನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕು ಎಂದರು.

ರಾಜ್ಯದಲ್ಲಿ ಬರಗಾಲ ಇದ್ದರೂ ಜನರು ವಲಸೆ ಹೋಗದಂತೆ ನೋಡಿಕೊಂಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಇಷ್ಟೊಂದು ಬರಗಾಲ ಇದ್ದರು ರಾಜ್ಯಕ್ಕೆ ಒಂದು ರುಪಾಯಿ ಪರಿಹಾರ ನೀಡದೆ ಜನವಿರೋಧಿ ನಿಲುವು ತಾಳಿದೆ. ರಾಜ್ಯದ ಬಿಜೆಪಿಗರು ಕೇಂದ್ರ ಸರ್ಕಾರಕ್ಕೆ ಈ ವಿಚಾರದಲ್ಲಿ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ರಘುಮೂರ್ತಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಮಂಗಳಾ ಸಿದ್ದೇಶ್, ಉಪಾಧ್ಯಕ್ಷೆ ಸುಧಾರಾಣಿ, ಚಿಕ್ಕಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಮಾಂತಮ್ಮಾ ಎಕಾಂತಪ್ಪ, ಉಪಾಧ್ಯಕ್ಷ ಗಂಗಾಧರ, ಮಾಡನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್, ಕೂನಬೇವು ಗ್ರಾಪಂ ಅಧ್ಯಕ್ಷೆ ಕವಿತಾ ನಾಗರಾಜ್, ಉಪಾಧ್ಯಕ್ಷೆ ಪೂಜಾರ್ ಮಂಜಣ್ಣ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಮೈಲಾರಪ್ಪ, ಶೇಖರಪ್ಪ, ಲೋಕೇಶ್, ರವಿ, ವಾಜೀದ್, ಲಿಂಗಾರೆಡ್ಡಿ, ದೊರೆಸ್ವಾಮಿ, ಸಂತೋಷ, ನಾಗರಾಜ್, ಮುಖಂಡರುಗಳಾದ ರಾಜಪ್ಪ, ಸಿದ್ದೇಶ್, ಬಸವರಾಜ್, ನಿರಂಜನ್, ನಾಗೇಶ್, ಚಿತ್ರಲಿಂಗಪ್ಪ, ತಿಪ್ಪೇಸ್ವಾಮಿ, ರವಿ, ಅಜ್ಜಪ್ಪ, ಬಾಬು, ತಿಪ್ಪಣ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ