ವಿವಿಧೆಡೆ ದೇವೇಗೌಡರ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : May 19, 2026, 01:15 AM IST
  ಸಿಕೆಬಿ-2  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರದ  ಹೆಚ್.ಡಿ.ದೇವೇಗೌಡ ಅಭಿಮಾನಿಗಳ ಬಳಗದಿಂದ ತಾಲೂಕಿನ ಸುಲ್ತಾನ್‌ಪೇಟೆಯ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಬ್ರೆಡ್ ವಿತರಿಸಿದರು | Kannada Prabha

ಸಾರಾಂಶ

ದೇವೇಗೌಡರು ಜಾತ್ಯತೀತ ನಾಯಕರಾಗಿದ್ದು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಅನೇಕ ಜನರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಇಂದು ವಿವಿಧ ಪಕ್ಷಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ .ದೇವರು ಅವರಿಗೆ ಇನ್ನಷ್ಟು ಆರೋಗ್ಯ ಹಾಗೂ ಶಕ್ತಿ ನೀಡ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 70 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯ ಹಾಗೂ ರಾಷ್ಟ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದು, ಅವರ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ವಕೀಲ ಹಾಗೂ ನಗರಸಭೆ ಮಾಜಿ ಸದಸ್ಯ ಆರ್. ಮಟಮಪ್ಪ ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿ ದೇವೇಗೌಡ 94ನೇ ಹುಟ್ಟುಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರದ ಹೆಚ್.ಡಿ. ದೇವೇಗೌಡ ಅಭಿಮಾನಿಗಳ ಬಳಗದಿಂದ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ತಾಲೂಕಿನ ಸುಲ್ತಾನ್‌ಪೇಟೆಯ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದಲ್ಲಿ ವೃದ್ಧರೊಂದಿಗೆ ಕೇಕ್ ಕತ್ತರಿಸಿ, ತರಕಾರಿ, ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸಿದ ನಂತರ ಮಾತನಾಡಿ, ದೇವೇಗೌಡರು ದೀನ ದಲಿತರು, ರೈತರು, ಕಾರ್ಮಿಕರು ಹಾಗೂ ಮಹಿಳೆಯರ ಪರ ಸದಾ ಧ್ವನಿ ಎತ್ತಿ, ಅವರಿಗೆ ನ್ಯಾಯ ಸಿಗುವಂತೆ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದರು.

ದೇವೇಗೌಡರು ಜಾತ್ಯತೀತ ನಾಯಕರಾಗಿದ್ದು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಅನೇಕ ಜನರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಇಂದು ವಿವಿಧ ಪಕ್ಷಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ .ದೇವರು ಅವರಿಗೆ ಇನ್ನಷ್ಟು ಆರೋಗ್ಯ ಹಾಗೂ ಶಕ್ತಿ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದ ವೃದ್ಧರು ಸಹ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ವೇಳೆ ಅಂದರ್ಲಹಳ್ಳಿ ಶ್ರೀನಿವಾಸ್, ಜಾತವಾರಹೊಸಹಳ್ಳಿ ಜಗದೀಶ್, ತಮ್ಮನಾಯಕನಹಳ್ಳಿ ಕರಗರೆಡ್ಡಿ, ಅನಕನೂರು ರಾಜಣ್ಣ, ಗಂಗಾನಾರಾಯಣ, ನಂಜಾಪುರ ರಾಜಣ್ಣ, ಮಹೇಶ್, ವಕೀಲರಾದ ಅಮರ್,ಉಪ್ಪರಹಳ್ಳಿ ಅನಿಲ್, ಶ್ರೀನಿವಾಸ್, ಗಂಗರಾಜು ಅಂಗರೇಕನಹಳ್ಳಿ, ಗುಬ್ಬಿ ಗಣೇಶ್, ಗುಡಿಬಂಡೆ, ಶಿವರಾಜ್, ಗಂಗನಮಿದ್ದೆ ಮಹೇಶ್, ರವಿತೇಜ ಮತ್ತಿತರರು ಇದ್ದರು.

-------- ಸಿಕೆಬಿ-2 ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರದ ಹೆಚ್.ಡಿ. ದೇವೇಗೌಡ ಅಭಿಮಾನಿಗಳ ಬಳಗದಿಂದ ತಾಲೂಕಿನ ಸುಲ್ತಾನ್‌ಪೇಟೆಯ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಬ್ರೆಡ್ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಪೋಲು
ರೈತ ಕುಟುಂಬದಿಂದ ಬೆಳೆದು ದೇಶಕ್ಕೆ ಪ್ರಧಾನಿಯಾದವರು