ದೇವೇಗೌಡರ ಕಡೂರು ಕಾರ್ಯಕ್ರಮ 24ಕ್ಕೆ ಮುಂದೂಡಿಕೆ: ವೈ.ಎಸ್.ವಿ.ದತ್ತ

KannadaprabhaNewsNetwork |  
Published : Nov 14, 2026, 01:15 AM IST
ವೈಎಸ್ ವಿ ದತ್ತ  | Kannada Prabha

ಸಾರಾಂಶ

ಕಡೂರುಕಡೂರಿನಲ್ಲಿ ನ. 15ರಂದು ನಿಗದಿಯಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರರ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ನ. 24ಕ್ಕೆ ಮುಂದೂಡಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ನ. 15ರಂದು ನಡೆಯಬೇಕಿದ್ದ ಕಾರ್ಯಕ್ರಮ: ಕನ್ನಡಪ್ರಭ ವಾರ್ತೆ, ಕಡೂರುಕಡೂರಿನಲ್ಲಿ ನ. 15ರಂದು ನಿಗದಿಯಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರರ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ನ. 24ಕ್ಕೆ ಮುಂದೂಡಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.ಪಟ್ಟಣದ ಸಾಯಿ ಸಂಭ್ರಮ ಡೆವಲಪರ್ಸ್ ಕಚೇರಿಯಲ್ಲಿ ಮಾತನಾಡಿ ತಮ್ಮ ರಾಜಕೀಯ ಗುರುಗಳೂ ಆದ ದೇವೇಗೌಡರು ನ. 15ರಂದು ಹೆಲಿಕಾಪ್ಟರ್ ಮೂಲಕ ಕಡೂರಿಗೆ ಆಗಮಿಸಿ, ಜೆಡಿಎಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಂದೇಶ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅವರೊಂದಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕೂಡ ಆಗಮಿಸಲಿದ್ದರು. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು ಎಂದರು.94ನೇ ವಯಸ್ಸಿನಲ್ಲೂ ದೇವೇಗೌಡರು ಉತ್ಸಾಹದಿಂದ ಕಡೂರಿಗೆ ಆಗಮಿಸಲು ಸಿದ್ಧರಾಗಿದ್ದರು. ಆದರೆ, ಅವರಿಗೆ ಕಣ್ಣಿನ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವೈದ್ಯರು ಕಡ್ಡಾಯವಾಗಿ ಒಂದು ವಾರ ವಿಶ್ರಾಂತಿ ಪಡೆವಂತೆ ಸೂಚಿಸಿದ್ದಾರೆ. ಹೀಗಾಗಿ ನ. 15ರ ಕಾರ್ಯಕ್ರಮವನ್ನು ನ. 24ರ ಮಂಗಳವಾರಕ್ಕೆ ಮುಂದೂಡಲಾಗಿದೆ. ದೇವೇ ಗೌಡರು ಆರೋಗ್ಯವಾಗಿದ್ದು, ತಾವೇ ನ. 24ರಂದು ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.ಸಂಸದರಾಗಿದ್ದಾಗ ದೇವೇಗೌಡರು ಕಡೂರು ಕ್ಷೇತ್ರಕ್ಕೆ ಗಣನೀಯ ಪ್ರಮಾಣದ ಅನುದಾನ ನೀಡಿ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ತಾವು ಶಾಸಕರಾದಾಗ ಆಹ್ವಾನಿಸಿದ ಎಲ್ಲ ಸಂದರ್ಭಗಳಲ್ಲೂ ಕಡೂರಿಗೆ ಬಂದಿದ್ದಾರೆ. ಕಡೂರು ಕ್ಷೇತ್ರದೊಂದಿಗೆ ದೇವೇಗೌಡರಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.ಸ್ಥಳೀಯ ಸಂಸ್ಥೆಗಳು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಕಾರ್ಯ ಕರ್ತರಿಗೆ ಸಂದೇಶ ನೀಡಿ, ಅವರಲ್ಲಿ ಉತ್ಸಾಹ ತುಂಬಲು ಈ ಸಮಾವೇಶ ಆಯೋಜಿಸಲಾಗಿತ್ತು. ಅನಿವಾರ್ಯ ವಾಗಿ ಕಾರ್ಯಕ್ರಮ ಮುಂದೂಡಲಾಗಿದೆ. ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನ.24ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ:ಕಡೂರು ಜೆಡಿಎಸ್ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಪಕ್ಷದಲ್ಲಿ ಗೊಂದಲವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೊಂದಾಣಿಕೆ ಕುರಿತು ಪಕ್ಷದ ಮೇಲ್ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಜೆಡಿಎಸ್ ಎನ್‌ಡಿಎ ಭಾಗವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ದೇವೇಗೌಡರೇ ಸ್ಪಷ್ಟನೆ ನೀಡಲಿದ್ದಾರೆ ಎಂದರು.ಇನ್ನೂ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೊಸ ಅಥವಾ ಹಳೆಯ ಮತದಾರರ ಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಸಬೇಕೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಚುನಾವಣೆ ಸೇರಿದಂತೆ ರಾಜಕೀಯ ವಿಚಾರಗಳ ಕುರಿತು ಮಾತ ನಾಡಲು ಇದು ಸೂಕ್ತ ಸಮಯವಲ್ಲ. ಎಲ್ಲ ವಿಷಯಗಳಿಗೂ ದೇವೇಗೌಡರೇ ಸ್ಪಷ್ಟನೆ ನೀಡಲಿದ್ದಾರೆ ಎಂದು ದತ್ತ ತಿಳಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿ.ಆರ್.ಪ್ರೇಂ ಕುಮಾರ್, ಬಿ.ಟಿ.ಗಂಗಾಧರ ನಾಯ್ಕ, ಕಡೂರು ಶ್ರೀಹರ್ಷ, ಮಚ್ಚೇರಿ ಮಂಜುನಾಥ್, ಸುಮಂತ್ ಹಾಗೂ ಕೆ.ವಿ.ಮಂಜುನಾಥ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ