ಹಾಸನದಲ್ಲಿ ಈ ಬಾರಿ ದೇವೇಗೌಡರೇ ಸ್ಪರ್ಧಿಸಲೆಂದ ಮಂಜು

KannadaprabhaNewsNetwork |  
Published : Oct 21, 2023, 12:30 AM IST
20ಎಚ್ಎಸ್ಎನ್16 :  ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಮಂಜು. | Kannada Prabha

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ ಪ್ರಸ್ತುತ ರಾಜಕೀಯದಲ್ಲಿ ಯಾರೂ ಶತ್ರುನೂ ಇಲ್ಲ, ಮಿತ್ರನೂ ಇರುವುದಿಲ್ಲ. ನಮ್ಮ ಕಣ್ಣ ಮುಂದೆ ಕಾಣುವುದು ಪಾರ್ಟಿ ಮಾತ್ರ. ನಮ್ಮ ವೈಯಕ್ತಿಕಕ್ಕಿಂತ ದೇಶದ ಹಿತದೃಷ್ಠಿಯಲ್ಲಿ ಹೋಗಬೇಕೆಂದು ಮಾಜಿ ಸಚಿವ ಎ. ಮಂಜು ತಿಳಿಸಿದರು. ನಗರದ ಡೀಸಿ ಕಚೇರಿ ಬಳಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ಒರಿಜಿನಲ್ ಜೆಡಿಎಸ್ ನಮ್ದು ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ಹಾಗೂ ಜೆಡಿಎಸ್‌ನಿಂದ ಸಿ.ಎಂ. ಇಬ್ರಾಹಿಂ ಉಚ್ಛಾಟನೆ ಹಾಗೂ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡುತ್ತಾ, ಹಲವಾರು ಮೀಟಿಂಗ್‌ಗಳು ಆಗಿವೆ. ಎಲ್ಲಾ ಮೀಟಿಂಗ್‌ಗಳು ಅವರ ಅಧ್ಯಕ್ಷತೆಯಲ್ಲಿ ಆಗಿವೆ. ಅವರು ಎಲ್ಲಾ ಮೀಟಿಂಗ್‌ಗಳಲ್ಲೂ ಇದ್ದಾರೆ. ಚರ್ಚೆ ಮಾಡಿದಾಗ ಅವರು, ನಾನು ಭಾಗಿಯಾಗಿದ್ದೇವೆ. ಯಾವ ಮೀಟಿಂಗ್‌ನಲ್ಲೂ ಹೊಂದಾಣಿಕೆ ಆಗಬಾರದು ಎಂದು ಹೇಳಿಲ್ಲ. ಏನು ಹೇಳದಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ.. ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ನಾನು ಸಭೆಯಲ್ಲಿದ್ದೀನಿ, ಅವರು ಸಭೆಯಲ್ಲಿದ್ದಾರೆ. ಅವರೇ ಭಾಷಣ ಮಾಡಿದ್ದಾರೆ. ಈಗ ಅವರು ಬಿಜೆಪಿಗೆ ಹೋಗುವುದು ತಪ್ಪು ಎಂದು ಹೇಳುವುದು ಒಳ್ಳೆಯದಲ್ಲ. ನಾನೇ ಮೊದಲು ವಿರೋಧ ಇದ್ದೆ. ನಾನೇ ಅಡ್ಜಸ್ಟ್ ಆಗಿದ್ದೀನಿ, ಅದಕ್ಕಿಂತ ಉದಾಹರಣೆ ಏನು ಬೇಕು ಎಂದರು. ಅವರೇ ಹೇಳಬೇಕು: ಆ ದೃಷ್ಟಿಯಲ್ಲಿ ಒಂದಾಗಬೇಕು ಎಂದು ಇಬ್ಬರು ಕೂಡ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದರು. ಅವರವರ ಪಕ್ಷ ಅವರವರು ತೀರ್ಮಾನ ತಗೊತರೆ. ಕೆಲವರದ್ದು ವೈಯುಕ್ತಿಕ ನಿರ್ಧಾರ ಇರುತ್ತೆ. ಇಬ್ರಾಹಿಂ ಯಾಕೆ ಆ ರೀತಿ ಹೇಳಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು. ಎನ್‌ಡಿಎ ಜೊತೆ ಹೋಗುವುದು ಇಷ್ಟ ಇಲ್ಲಾ ಎಂದು ಇಬ್ರಾಹಿಂ ಹೇಳಿದಾಗ ಅವರ ಬದಲು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಪಕ್ಷದ ಜವಾಬ್ದಾರಿ. ಆ ಪಕ್ಷದ ಜವಾಬ್ದಾರಿ ಮೇಲೆ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದೇವೆ. ಅದರಲ್ಲಿ ತಪ್ಪೇನು ಇಲ್ಲವಲ್ಲಾ. ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆ. ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ. ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ. ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ. ಆ ಪಕ್ಷದ ಶಕ್ತಿಯನ್ನು ಹೆಚ್ಚಿಗೆ ಮಾಡಲು ಮುಂದಾಗಿದ್ದಾರೆ ಎಂದರು. ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯತೀತ ತತ್ವ ಬದಲಾವಣೆ ಆಗಲ್ಲ. ಉದಾಹರಣೆಗೆ ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ, ನನ್ನ ಇನ್ಸಿಲ್ ಚೇಂಜ್ ಆಗುತ್ತಾ! ಅದಕ್ಕೂ, ಇದಕ್ಕೂ ಸಂಬಂಧವಿಲ್ಲ. ಸರಿಯಲ್ಲ: ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಅವರು ಮಗನನ್ನು ಅದೇ ಪಾರ್ಟಿಯಲಿ ಎಂಎಲ್‌ಎಗೆ ನಿಲ್ಲಿಸಿರಲಿಲ್ವಾ. ಹೇಗೆ ಆ ರೀತಿ ಮಾತನಾಡುತ್ತಾರೆ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ದರು. ಆಗ ಯಾರ ಮನೆ ಉದ್ಧಾರ ಆಯ್ತು. ತೊಂದರೆಯಾದಾಗ ವೈಯುಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ. ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ಅವರ ಹತ್ರನೇ ಹೌಸ್‌ಫುಲ್, ನನ್ನನ್ನು ಯಾಕೆ ಕರೀತಾರೆ. ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದಿದ್ದರು ಎಂದು ಇಬ್ರಾಹಿಂ ಹೇಳಿಕೆಗೆ ಶಾಸಕ ಎ.ಮಂಜು ತಿರುಗೇಟು ನೀಡಿದರು. ಯಾರು ಯಾರ ಮೇಲೆ ಬೇಕಾದರೂ ಕೇಸ್ ಹಾಕಬಹುದು. ಇದು ಹೊಸ ಕೇಸ್ ಅಲ್ಲಾ, ಹಳೇದೆ. ಯಾಕೆ ತನಿಖೆ ಮಾಡ್ತೀರಿ ಅಂತ ಸಿಬಿಐನವರನ್ನು ಕೇಳಲು ಯಾರಿಗೂ ಅಧಿಕಾರ ಇಲ್ಲಾ. ಡಿಕೆ.ಶಿವಕುಮಾರ್‌ ತಿಹಾರ್ ಜೈಲಿಗೆ ಹೋಗ್ತಾರೆ ಅಂತಾ ಕುಮಾರಸ್ವಾಮಿ ಹೇಳಿದ್ದರು. ಅವರೇನು ಜಡ್ಜ್ ಅಂಥಾ ಡಿಕೆಶಿ ಅಂದ್ರು ಅದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಅವರವರ ಭಾವನೆಯಲ್ಲಿ ಅವರು ಮಾತನಾಡ್ತಾರೆ. ಸಿಬಿಐ ತನಿಖೆ ಮಾಡುವುದರ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದರು. ರಾಜಣ್ಣ ಅರಸೀಕೆರೆಗೆ ಮಂತ್ರಿ ಅಲ್ಲ: ನಾನು ಜಿಲ್ಲಾ ಮಂತ್ರಿಯಲ್ಲಿ ಮನವಿ ಮಾಡುತ್ತೇನೆ. ನೀವು ತಾಲೂಕು ಮಂತ್ರಿ ಅಲ್ಲಾ, ಜಿಲ್ಲಾ ಮಂತ್ರಿ, ರಾಜ್ಯಕ್ಕೆ ಮಂತ್ರಿ. ಎಲ್ಲಾ ತಾಲೂಕುಗಳಿಗೆ ನೀವು ಬರಬೇಕು. ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ ಅಂತ ಅತಿ ಪ್ರೀತಿ ತೋರಿಸುವುದು ಒಳ್ಳೆಯದಲ್ಲ ಎಂದು ಈಗಾಗಲೇ ಅವರಿಗೆ ಮನವಿ ಮಾಡಿದ್ದೇನೆ. ಇಡೀ ಜಿಲ್ಲೆಯನ್ನು ಸಮಗ್ರವಾಗಿ ತೆಗೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿ. ನಾವು ಅವರಿಗೆ ಸಹಕಾರ ಕೊಡಲು ಸಿದ್ಧರಿದ್ದೇವೆ. ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿ ವಿಚಾರವಾಗಿ ರೇವಣ್ಣ ಅವರು ಮೀಟಿಂಗ್ ಬರಲಿಲ್ಲ. ನಾವು ಮೀಟಿಂಗ್‌ನಲ್ಲಿ ನೀರು ಬಿಡಿಸಲು ತೀರ್ಮಾನ ಮಾಡಿದ್ದೇವೆ. ಆರು ದಿನ ಮೊದಲು ಹೈ ಲೆವೆಲ್ ಕೆನಾಲ್‌ಗೆ ನೀರು ಬಿಡ್ತಾರೆ. ಮಿಕ್ಕಿದ ಕೆನಾಲ್‌ಗಳಿಗೆ ಆರು ದಿನ ಆದ್ಮೇಲೆ ಬಿಡ್ತಾರೆ. ಈಗಾಗಲೇ ಸರ್ಕಾರ ಕೆರೆ ತುಂಬಿಸಲು ನೀರು ಬಿಡುತ್ತಿರುವುದು ಯಾರು ಕೂಡ ಬೆಳೆ ಬೆಳೆಯಬಾರದು ಎಂದು ಹೇಳಿದ್ದೇನೆ. ಮಾರ್ಚ್‌ವರೆಗೂ ಕುಡಿಯುವ ನೀರು ಇಟ್ಕಂಡು ಈಗಿರುವ ನೀರಿನಲ್ಲಿ ಮೂರು ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಿಡ್ತಾರೆ. ಈಗಾಗಲೇ ಹೈ ಲೆವೆಲ್ ಕೆನಾಲ್‌ಗೆ ನೀರು ಬಿಟ್ಟಿದ್ದಾರೆ ಎಂದು ಮಾಹಿತಿ ಕೊಟ್ಟರು. ದೇವೇಗೌಡರು ಸ್ಪರ್ಧಿಸಲಿ, ಅವರದ್ದು ಇದು ಕೊನೆ ಎಲೆಕ್ಷನ್: ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದು, ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್. ಅವರು ಈ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ. ಹಾಸನದಿಂದ ದೇವೇಗೌಡರು ಚುನಾವಣೆಗೆ ನಿಲ್ಲಲಿ ಎಂದ ಜೆಡಿಎಸ್ ಶಾಸಕರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ದೆಗೆ ವಿರೋಧ ವ್ಯಕ್ತಪಡಿಸಿದಂತಿತ್ತು. ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದು, ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್. ಅವರು ಈ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ. ಹಾಸನದಿಂದ ದೇವೇಗೌಡರು ಚುನಾವಣೆಗೆ ನಿಲ್ಲಲಿ ಎಂದ ಜೆಡಿಎಸ್ ಶಾಸಕರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ದೆಗೆ ವಿರೋಧ ವ್ಯಕ್ತಪಡಿಸಿದಂತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ