ಕ್ರೀಡೆಯಲ್ಲಿ ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಕ್ಷೇತ್ರದ ಸಣ್ಣ ರೈತರ ಸಬಲೀಕರಣದ ಉದ್ದೇಶದಿಂದ ಬೆಳೆಗಳಿಗೆ ರಾಸಾಯನಿಕ ಹಾಗೂ ಇತರ ಸಿಂಪಡಣೆಗಾಗಿ ಉಚಿತವಾಗಿ ಡ್ರೋನ್ ಸೇವೆ ಒದಗಿಸಿ, ಕಾರ್ಮಿಕರ ಕೊರತೆ ನೀಗಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಹೇಳಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇರಿದಂತೆ ಹುಲಿಕಟ್ಟಿ ಗ್ರಾಮದ ಗಂಗಾಧರ ಗಡ್ಡೆಯವರ ಹೊಲದಲ್ಲಿ ಆಯೋಜಿಸಿದ್ದ ಉಚಿತ ಡ್ರೋನ್ ಸೇವೆ ಒದಗಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಉಂಟಾಗುತ್ತಿದೆ. ಹೀಗಾಗಿ, ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಉಚಿತವಾಗಿ ಡ್ರೋನ್ ಒದಗಿಸಿ. ಬೆಳೆಗಳಿಗೆ ಕೀಟನಾಶಕ ಸೇರಿದಂತೆ ಇನ್ನಿತರ ಔಷಧ ಸಿಂಪಡಣೆಗೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ರೈತರು ನಮ್ಮ ಕಚೇರಿಯಲ್ಲಿ ಹೆಸರು ನೋಂದಾಯಿಸಿ, ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಸಿ. ಪಾಟೀಲ, ಚನ್ನಮ್ಮ ಬೊಮ್ಮಾಯಿ, ಶೋಭಾ ನಿಸ್ವೀಮಗೌಡ್ರ, ವಿಶ್ವನಾಥ ಹರವಿ, ನವೀನ ಸವಣೂರ, ಕಾಶಿನಾಥ ಕಳ್ಳಿಮನಿ, ಗಂಗಾಧರ ಗಡ್ಡೆ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಮಾಳಪ್ಪ ಗಡ್ಡೆ, ಡಾ.ಮಲ್ಲೇಶಪ್ಪ ಹರಿಜನ, ಮಾಂತೇಶ ಬಾವಿಕಟ್ಟಿ, ಸುರೇಶ ಮುರಾರಿ, ನಿಂಗನಗೌಡ ಬನ್ನೂರ, ಮಂಜಪ್ಪ ಸೂರಣ್ಣವರ, ರಾಜಣ್ಣ ಕುಲಕರ್ಣಿ, ಚಿದಾನಂದ, ಸಿದ್ದನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ಪೊಟೋ ಪೈಲ್ ನೇಮ್ ೨ಎಸ್‌ಜಿವಿ೩
ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇರಿದಂತೆ ಹುಲಿಕಟ್ಟಿ ಗ್ರಾಮದ ಗಂಗಾಧರ ಗಡ್ಡೆಯವರ ಹೊಲದಲ್ಲಿ ಆಯೋಜಿಸಿದ್ದ ಉಚಿತ ಡ್ರೋನ್ ಸೇವೆ ಒದಗಿಸಿ ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.