ಮಕ್ಕಳಲ್ಲಿ ಚೆಸ್‌ ಅಭಿರುಚಿ ಬೆಳೆಸಿ: ಇಒ ಹಾದಿಮನಿ

KannadaprabhaNewsNetwork |  
Published : Jun 05, 2025, 01:14 AM IST
ಎಚ್‌04.6-ಡಿಎನ್‌ಡಿ1: ವಿದ್ಯಾರ್ಥಿಗಳ ಚೆಸ್ ಸ್ಪರ್ಧೆ ಚಿತ್ರ | Kannada Prabha

ಸಾರಾಂಶ

ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗಿದೆ.

ದಾಂಡೇಲಿ: ತಾಲೂಕಿನ ಅಂಬೇವಾಡಿ ಗಾಂವಠಾಣದ ಉರ್ದು ಪ್ರಾಥಮಿಕ ಶಾಲಾ ಆವರಣದಲ್ಲಿರುವ ಚೆಸ್ ಪಾರ್ಕ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಪಂಚಾಯತಿ ವತಿಯಿಂದ ಚೆಸ್ ಸ್ಪರ್ಧೆಯನ್ನು ಬುಧವಾರ ಹಮ್ಮಿಕೊಳ್ಳಲಾಯಿತು.

ತಾಲೂಕು ಪಂಚಾಯತಿ ಇಒ ಟಿ.ಎಸ್. ಹಾದಿಮನಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಚದುರಂಗ ಭಾರತದ ಪುರಾತನ ಕ್ರೀಡೆಯಾಗಿದೆ. ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಚೆಸ್ ಕ್ರೀಡೆಯ ಅಭಿರುಚಿಯನ್ನು ಬೆಳೆಸಿದರೆ ಮುಂದೆ ಅದರಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಹುದು ಎಂದರು.

ರಾಷ್ಟ್ರೀಯ ಚೆಸ್ ಆಟಗಾರ ರಾಮಕೃಷ್ಣ ಪ್ರಭು ನಿರ್ಣಾಯಕರಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಚೆಸ್ ಆಟದ ತಂತ್ರಗಳು ಮತ್ತು ಸೂತ್ರಗಳನ್ನು ವಿವರಿಸಿ ಚೆಸ್ ಕುರಿತು ಹೆಚ್ಚಿನ ಅಭ್ಯಾಸ ಮಾಡುವಂತೆ ತಿಳಿಸಿದರು.

ಅಂಬೇವಾಡಿ ಗ್ರಾಪಂ ಅಧ್ಯಕ್ಷ ಜಿ.ಈ. ಪ್ರಕಾಶ, ಗ್ರಾಪಂ ಸದಸ್ಯೆ ಶಾಹಿದಾ ಬಾನು, ಚೆಸ್ ಪ್ರೇಮಿ ನವೀನ ಕಾಮತ, ಸಿಆರ್‌ಪಿಗಳಾದ ಲಲೀತ ಕೆ., ಶ್ರೀದೇವಿ, ಪಿಡಿಒ ಸಂತೋಷ ಹೆಳವರ, ದೈಹಿಕ ಶಿಕ್ಷಕರಾದ ಸೀತಾರಾಮ ನಾಯ್, ಡೇವಿಡ್ ದಾನಮ್, ಮಮತಾ ಕಾಮತ, ಸಿಬ್ಬಂದಿ ಮಹಾದೇವಿ, ದಿನೇಶ, ಪ್ರದಿಪ ಮತ್ತಿತರರಿದ್ದರು.

ಗ್ರಾಮೀಣ ಮತ್ತು ನಗರ ವಿಭಾಗಗಳಲ್ಲಿ ಚೆಸ್ ಸ್ಪರ್ಧೆ ನಡೆಯಿತು. ೬೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗ್ರಾಮೀಣ ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಕೋಗಿಲಬನ್ ಶಾಲೆಯ ಚಂದನ ಚಲವಾದಿ ಪ್ರಥಮ, ಗೌಳಿವಾಡಾ ಶಾಲೆಯ ಸೋಮನಿಂಗ ಚಿಗಳ್ಳಿ ದ್ವಿತೀಯ, ಗಾಂವಠಾಣ ಶಾಲೆಯ ಮೇತನವೀರ ಸೌದಾಗರ ತೃತೀಯ. ಬಾಲಕೀಯರ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಕೋಗಿಲಬನ ಶಾಲೆಯ ಪ್ರಥ್ವಿ ಸುತಾರ, ದ್ವಿತೀಯ ಗೌಳಿವಡಾ ಶಾಲೆಯ ಲಕ್ಷ್ಮೀ ಪಾಟೀಲ, ತೃತೀಯ ಗಾಂವಠಣ ಶಾಲೆಯ ಸಹದಪ ಅನ್ವರ ತಾಲಿಪರಂಬನ.

ಬಾಲಕರ ಪ್ರೌಢ ವಿಭಾಗ:

ಕೋಗಿಲಬನ ಶಾಲೆಯ ರಾಹುಲ್ ಜಟಾರ್ ಪ್ರಥಮ, ದ್ವಿತೀಯ ವಿಕಾಸ ಠಾಕುರ, ತೃತೀಯ ಅಶ್ರಪಾಲಿ ಪಾಟೇಲ, ಬಾಲಕೀಯ ವಿಭಾಗದಲ್ಲಿ ಕೋಗಿಲಬನ ಶಾಲೆಯ ಮೇಹರಕ್ ಮುತೃಜಾ ಪ್ರಥಮ, ಗೌಳಿವಾಡಾ ಶಾಲೆಯ ದೀಪಾ ಪಾಟೀಲ ದ್ವಿತೀಯ, ಗೌಳಿವಾಡಾ ಶಾಲಾಯ ಸ್ವಪ್ನಾ ಪಾರದೆ

ನಗರ ವಿಭಾಗ:

ಪ್ರಾಥಮಿಕ ವಿಭಾಗ ಆಯೇಷಾ ವಾಂಗಿಕರ್ ಪ್ರಥಮ ನಿಶಾಂತ್ ಶೆಟ್ಟಿ ದ್ವಿತೀಯ, ಮುತ್ತಪ್ಪ ಚಿಗಳ್ಳಿ ತೃತೀಯ ಬಾಲಕಿಯರ ವಿಭಾಗದಲ್ಲಿ ನಿಯತಿ ಮಲ್ಯ ಪ್ರಥಮ ಪ್ರಿನ್ಸಿ ಮನಿಕೊಟ್ಲಾ. ದ್ವಿತೀಯ, ಜಾನವಿ ಗ್ರಾಮ್ ಜೋಶ್ಮಿ ತೃತೀಯ, ಪ್ರೌಢಶಾಲೆ ವಿಭಾಗದಲ್ಲಿ ಬಾಲಕರ ಮಧುಕರ್ ನಾಳೆ ಶೇಖರ್ ಪ್ರಥಮ, ಆಯುಷ್ ನಾಯಕ್ ದ್ವಿತೀಯ, ಐಸಾಕ್ ಕ್ರರಾ ತೃತೀಯ, ಬಾಲಕಿಯರ ವಿಭಾಗ ಕಾವ್ಯ ಪ್ರಥಮ ಶಿಂಷಾ ಖಾನ ದ್ವಿತೀಯ ಯಾಸ್ಮಿನ್ ಶೇಖ ತೃತೀಯ ಪಡೆದುಕೊಂಡಿದ್ದಾರೆ.

ಜೂನ್ 5 ರಂದು ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ಈ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು.

PREV

Recommended Stories

ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!
ಶವ ಹೂತ ಕೇಸ್‌: 2ನೇ ದಿನವೂ ಅವಶೇಷ ಸಿಗಲಿಲ್ಲ