ರೈತರ ಮೇಲಿನ ಸುಳ್ಳು ಮೊಕದ್ದಮೆ ವಾಪಸ್ ಪಡೆಯಿರಿ

KannadaprabhaNewsNetwork |  
Published : Jun 05, 2025, 01:13 AM ISTUpdated : Jun 05, 2025, 01:14 AM IST
ರೈತ ಸಂಘ | Kannada Prabha

ಸಾರಾಂಶ

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್ ವಿರುದ್ಧ ರೈತರು ಎತ್ತಿರುವ ಪ್ರಶ್ನೆ ಸಮಂಜಸವಾಗಿದ್ದು, ಸರಕಾರ ಕೂಡಲೇ ರೈತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಹೇಮಾವತಿ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್ ವಿರುದ್ಧ ರೈತರು ಎತ್ತಿರುವ ಪ್ರಶ್ನೆ ಸಮಂಜಸವಾಗಿದ್ದು, ಸರಕಾರ ಕೂಡಲೇ ರೈತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ವಿಚಾರದಲ್ಲಿ ರಾಜಕಾರಣವನ್ನು ಬದಿಗಿರಿಸಿ, ಎರಡು ಜಿಲ್ಲೆಗಳ ಜನರನ್ನು ಎತ್ತಿಕಟ್ಟುವುದನ್ನು ಬಿಟ್ಟು, ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ರೈತ ಸಂಘಟನೆಗಳ ಮತ್ತು ಸರ್ವ ಪಕ್ಷಗಳ ಸಭೆಕರೆದು ಅಂಕಿ-ಅಂಶಗಳನ್ನು ನೀಡಿ ಸಾಧಕ-ಬಾಧಕಗಳನ್ನು ಚರ್ಚಿಸಬೇಕು ಎಂದು ಆಗ್ರಹಿಸಿದರು.ನಮ್ಮ ಹೋರಾಟ ಲಿಂಕ್‌ ಕೆನಾಲ್‌ ಯೋಜನೆಯ ವಿರುದ್ಧವಷ್ಟೇ. ಮೂಲ ಯೋಜನೆಯ ಪ್ರಕಾರ ಹೇಮಾವತಿ ಜಲಾಶಯ ಯೋಜನೆಯ ಸಂಪೂರ್ಣ ನೀರಾವರಿ ಅಚ್ಚುಕಟ್ಟು ಯೋಜನೆಯಾಗಿದ್ದು, ಅದನ್ನು ಸಾಕಾರಗೊಳಿಸದೆ ರಾಜಕಾರಣಿಗಳು ತಮ್ಮರಾಜಕೀಯ ಲಾಭಕ್ಕಾಗಿ ಇಲಾಖಾ ಅಧಿಕಾರಿಗಳಿಗೆ ಒತ್ತಡ ಹಾಕಿ ಕೆರೆಗೆ ನೀರು ತುಂಬಿಸುವ ಯೋಜನೆಯಾಗಿ ವಿರೂಪಗೊಳಿಸಲು ಹೊರಟಿರುವುದು ಖಂಡನಾರ್ಹ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ , ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಎಕ್ಸ್ ಪ್ರೆಸ್ ಲಿಂಕ್‌ ಯೋಜನೆಯಿಂದ ಮೂಲ ಯೋಜನೆಯಾಗಿರುವ ಟಿಬಿಸಿ ನಾಲೆಯ 70 ಕಿಲೋ ಮೀಟರ್ ನಿಂದ 167 ನೇ ಕಿಲೋ ಮೀಟರ್‌ಗೆ ಹರಿಯುವ ನೀರಿನ ಮಟ್ಟ ಅಂದರೆ ಎತ್ತರ ಕಡಿಮೆಯಾಗಿ ಹರಿವಿನ ವೇಗವು ಸಹ ಕಡಿಮೆಯಾಗುತ್ತದೆ ಎಂದರು.ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ನಾಲೆ ಪ್ರಾರಂಭದಿಂದ ಇಂದಿನವರೆಗೆ ಕುಣಿಗಲ್‌ಗೆ ನಿಗದಿತ ಪ್ರಮಾಣದ ನೀರು ಹರಿದಿಲ್ಲ ಎಂದರೆ ಅದು ನೀರಾವರಿ ಇಲಾಖೆಯ ವೈಫಲ್ಯ ಎದ್ದುಕಾಣುತ್ತದೆ. ಇದನ್ನೇ ನೆಪ ಮಾಡಿ, ಉಳಿದ ತಾಲೂಕುಗಳ ನೀರಿನ ಹಕ್ಕು ಕಸಿಯುವುದು ತರವಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಎ. ಗೋವಿಂದರಾಜು, ಬಡಗಲಪುರ ನಾಗೇಂದ್ರ, ಸಿ. ಅಜ್ಜಪ್ಪ, ಟಿ. ಯಶವಂತ, ಬಿ. ಉಮೇಶ್,ಸಿ.ಯತಿರಾಜು,ಎಸ್.ಎನ್. ಸ್ವಾಮಿ,ಕಂಬೇಗೌಡ,ಸಿಐಟಿಯು ಸೈಯದ್ ಮುಜೀಬ್.ಚಿಕ್ಕಗೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?