ಶಿಕ್ಷಣದ ಜತೆ ನಾಯಕತ್ವದ ಸಾಮರ್ಥ್ಯ ಬೆಳೆಸಿಕೊಳ್ಳಿ: ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಸಸಿ ನೆಡುವ ಮೂಲಕ ಶಾಸಕ ಡಾ. ಸಿದ್ದು ಪಾಟೀಲ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಘಟನೆ ಹಾಗೂ ನಾಯಕತ್ವದ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದು ದೇಶದ ಭವಿಷ್ಯ ರೂಪಿಸುತ್ತದೆ ಎಂದು ಹುಮನಾಬಾದ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ತಿಳಿಸಿದರು.

ಅವರು ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀದರ್‌ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ಕಾಲೇಜು ವಿವಿಧ ಕೋರ್ಸ್‌ ಮೂಲಕ ಉತ್ತಮ ಶಿಕಣ ನೀಡುತ್ತಿದೆ. ನ್ಯಾಕ್ ದಿಂದ 2017ರಲ್ಲಿ ‘ಬಿ’ ಮತ್ತು 2023ರಲ್ಲಿ ‘ಬಿ ಫ್ಲಸ್’ ಮಾನ್ಯತೆ ಪಡೆದಿರುವದೆ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಸಭಾಂಗಣದ ಇನ್ನುಳಿದ ಕಾಮಗಾರಿಗೆ ₹2 ಕೋಟಿ ಮಂಜೂರಾಗಿದೆ. ಜೊತೆಗೆ ಡಿಜಿಟಲ್ ಗ್ರಂಥಾಲಯ ಮತ್ತು ಅವಶ್ಯಕ ಮೂಲಭೂತ ಸೌಕರ್ಯ ಒದಗಿಸಲಾಗುವದು ಎಂದು ತಿಳಿಸಿದರು.

ಯುವಕರಿಗೆ ಗುಣಮಟ್ಟದ ಶಿಕ್ಷಣ ಮತ್ತು ಸರ್ವ ಜನತೆಗೆ ಉತ್ತಮ ಆರೋಗ್ಯದ ಸೇವೆ ಒದಗಿಸುವದೇ ತಮ್ಮ ಮೊದಲ ಆದ್ಯತೆವಾಗಿದೆ ಎಂದ ಅವರು, ಒಂದು ವಾರ ನಡೆಯುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ನಿಮಿತ್ತ ಸಸಿ ನೆಡುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಅವರು ಶಿಬಿರಾರ್ಥಿಗಳು ಶ್ರಮದಾನದೊಂದಿಗೆ ಜೀವನ ಕೌಶಲ್ಯ ಅರಿತುಕೊಳ್ಳಬೇಕು, ಜೊತೆಗೆ ಸಮಾಜದಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಎನ್ಎಸ್ಎಸ್ ಅಧಿಕಾರಿ ಡಾ.ವೀರಶೆಟ್ಟಿ ಮೈಲೂರಕರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಯುವಕರ ಪಾತ್ರ ಸಂದೇಶ ಸಾರುತ್ತಿದೆ. ಶಿಬಿರಾರ್ಥಿಗಳಿಗೆ ವ್ಯಕ್ತಿ ಮತ್ತು ಸಮಷ್ಠಿಯ ಭಾಂದವ್ಯದ ಅರಿವು, ಪರಿಸರ ಸಂರಕ್ಷಣೆ, ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಭಾತೃತ್ವ ಕುರಿತು ವಿಶೇಷ ಉಪನ್ಯಾಸಗಳ ಮೂಲಕ ಅರಿವು ಮೂಡಿಸಲಾಗುವದು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಂದರ್ ಸಿಂಗ್ ಅವರು ಶಿಬಿರದಲ್ಲಿ 100 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಬಸ್ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗುವದು ಎಂದರು. ರೇವಣಪ್ಪಾ ಹೂಗಾರ, ಅನೀಲ ಜೋಶಿ, ನಾಗಭೂಷಣ ಸಂಗನ್, ಡಾ. ಶಿವಕುಮಾರ ಬಿರಾದರ ಅತಿಥಿಗಳಾಗಿ ಭಾಗವಹಿಸಿದ್ದರು.

ಮುಖಂಡರಾದ ಪ್ರವೀಣ ರಾಜಾಪುರ, ರಾಜಗೋಪಾಲ ಐನಾಪುರ, ಗೋಪಾಲಕೃಷ್ಣ ಮೋಹಲೆ, ಇಸ್ಮಾಯಿಲ್ ರಾಠೋಡ, ಸಚಿನ ಮಠಪತಿ, ಅಮೀತ ತೊಗಲೂರ, ರಾಜಕುಮಾರ ಗುತ್ತೆದಾರ, ಹಿರಿಯ ಪ್ರಾಧ್ಯಾಪಕರಾದ ಡಾ. ಕೆ.ಶಿವಕುಮಾರ, ಡಾ, ಜಯದೇವಿ ಗಾಯಕವಾಡ, ಡಾ. ರವೀಂದ್ರಕುಮಾರ ಟಿಳೆಕರ್, ಮೀನಾಕ್ಷಿ, ಡಾ ಶೇಷರಾವ, ಡಾ.ಯೇಸುಮಿತ್ರ, ಜಬಿವುಲ್ಲಾ, ರಮೇಶಕುಮಾರ ಬಿರಾದರ, ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಡಾ. ಚಿತ್ರಶೇಖರ ಚಿರಳ್ಳಿ ನಿರೂಪಿಸಿದರೆ ಶಾಂತಕುಮಾರ ಪಾಟೀಲ ವಂದಿಸಿದರು.

Share this article