ಸಂವಹನ ಕೌಶಲ್ಯ ಬೆಳೆಸಿಕೊಂಡರೆ ಉತ್ತಮ ಅವಕಾಶ

KannadaprabhaNewsNetwork |  
Published : Sep 27, 2026, 02:15 AM IST
ಸಸಸ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಉತ್ತಮ ನಿರೂಪಕರಿಗೆ ಹೆಚ್ಚಿನ ಬೇಡಿಕೆ ಹಾಗೂ ಅವಕಾಶಗಳಿವೆ. ನಿರೂಪಣೆಗೆ ಭಾಷೆಯ ಮೇಲಿನ ಹಿಡಿತದ ಜತೆಗೆ ಸ್ಪಷ್ಟ ಧ್ವನಿ, ಆಸಕ್ತಿ, ಕಾರ್ಯಕ್ರಮದ ಸ್ವರೂಪದ ಅರಿವು ಮತ್ತು ಶಿಷ್ಟಾಚಾರದ ತಿಳಿವಳಿಕೆ ಅಗತ್ಯ.

ಮೋಕ: ವಿದ್ಯಾರ್ಥಿಗಳು ಉತ್ತಮ ಭಾಷೆ, ಧ್ವನಿ, ವಿಷಯದ ತಿಳಿವಳಿಕೆ ಹಾಗೂ ಕಾರ್ಯಕ್ರಮದ ಶಿಷ್ಟಾಚಾರ ಮೈಗೂಡಿಸಿಕೊಂಡರೆ ಉತ್ತಮ ನಿರೂಪಕರಾಗಿ ಹೊರಹೊಮ್ಮಲು ಸಾಧ್ಯ ಎಂದು ನಿರೂಪಕ ವಿನೋದ್ ಕುಮಾರ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಹನ ಕೌಶಲ್ಯಗಳು ವಿಶೇಷ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಉತ್ತಮ ನಿರೂಪಕರಿಗೆ ಹೆಚ್ಚಿನ ಬೇಡಿಕೆ ಹಾಗೂ ಅವಕಾಶಗಳಿವೆ. ನಿರೂಪಣೆಗೆ ಭಾಷೆಯ ಮೇಲಿನ ಹಿಡಿತದ ಜತೆಗೆ ಸ್ಪಷ್ಟ ಧ್ವನಿ, ಆಸಕ್ತಿ, ಕಾರ್ಯಕ್ರಮದ ಸ್ವರೂಪದ ಅರಿವು ಮತ್ತು ಶಿಷ್ಟಾಚಾರದ ತಿಳಿವಳಿಕೆ ಅಗತ್ಯ. ವಿದ್ಯಾರ್ಥಿಗಳು ಈ ಕೌಶಲ್ಯ ಬೆಳೆಸಿಕೊಂಡರೆ ನಿರೂಪಣೆಯನ್ನೇ ವೃತ್ತಿಯನ್ನಾಗಿ ರೂಪಿಸಿಕೊಳ್ಳಬಹುದು ಎಂದರು.

ಸುಮಾರು ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ತಾವು ಅಂತಾರಾಷ್ಟ್ರೀಯ ಮಟ್ಟದ ನಿರೂಪಕರಾಗಿ ಬೆಳೆದು ಬಂದ ಹಾದಿ ಹಂಚಿಕೊಂಡು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಮೋಕ ಗ್ರಾಮದ ಕಥೆಗಾರ ಕೆ. ಭುವನೇಶ್ ಕಾರ್ಯಾಗಾರ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸರೋಜ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಹಂತದಿಂದಲೇ ಸಂವಹನ ಕೌಶಲ್ಯ ರೂಢಿಸಿಕೊಳ್ಳಬೇಕು. ತರಗತಿ ಹಾಗೂ ಕಾಲೇಜಿನ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮ ನಿರ್ವಹಣೆಗೆ ಮುಂದಾಗಬೇಕು. ಹಿಂಜರಿಕೆ ಮತ್ತು ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆದರೆ ಉತ್ತಮ ನಿರೂಪಕರಾಗಬಹುದು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಕಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸಿಕೊಳ್ಳಲು ಭಾಷಾ ಕೌಶಲ್ಯ ಮೈಗೂಡಿಸಿಕೊಳ್ಳುವುದು ಅಗತ್ಯ. ಪ್ರಸ್ತುತ ನಿರೂಪಣೆಯೂ ಉತ್ತಮ ವೃತ್ತಿ ಅವಕಾಶವಾಗಿ ರೂಪುಗೊಂಡಿದೆ ಎಂದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸೋಮಶೇಖರ್ ಎಂ. ಸ್ವಾಗತಿಸಿದರು. ರೇಖಾ ಮತ್ತು ಸಂಗಡಿಗರು ಅಲ್ಲಮಪ್ರಭು ವಚನದ ಮೂಲಕ ಪ್ರಾರ್ಥಿಸಿದರು. ಡಾ. ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಿತಾ ವಂದಿಸಿದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಸಂಭ್ರಮವಿರಬೇಕು: ಪ್ರೊ. ಕೃಷ್ಣಮೂರ್ತಿ
ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ