ಉತ್ತಮ ಆಟಗಾರನಾಗಿ ಬೆಳೆಯುವುದು ಮುಖ್ಯ

KannadaprabhaNewsNetwork |  
Published : Sep 23, 2026, 01:15 AM IST
್ಿ್ಿಿ | Kannada Prabha

ಸಾರಾಂಶ

ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಉತ್ತಮ ಆಟಗಾರನಾಗಿ ಬೆಳೆಯುವುದು ಮುಖ್ಯ ಎಂದು ತುಮಕೂರು ವಿವಿಯ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಮಹಾಲಿಂಗ ಕೆ. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಉತ್ತಮ ಆಟಗಾರನಾಗಿ ಬೆಳೆಯುವುದು ಮುಖ್ಯ ಎಂದು ತುಮಕೂರು ವಿವಿಯ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಮಹಾಲಿಂಗ ಕೆ. ಅವರು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ 2026-27ನೇ ಸಾಲಿನ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಟೇಕ್ವಾಂಡೋ ಪಂದ್ಯಾವಳಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಿಂದ ವ್ಯಕ್ತಿಯ ಪ್ರತಿಭೆ ಮಾತ್ರವಲ್ಲ, ದೇಶದ ಗೌರವವೂ ಹೆಚ್ಚುತ್ತದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ವಿಶ್ವಕಪ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳು ಪದಕ ಗೆದ್ದಾಗ, ಅವರ ಸಾಧನೆ ದೇಶದ ಕೋಟ್ಯಂತರ ಜನರಿಗೆ ಹೆಮ್ಮೆ ತರುತ್ತದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಆರ್. ರೇಣುಕಾ ಅವರು ಮಾತನಾಡಿ ಟೇಕ್ವಾಂಡೋ ಪಂದ್ಯಾವಳಿ ಕೇವಲ ಕ್ರೀಡಾ ಸ್ಪರ್ಧೆಯಲ್ಲ. ಇದು ಶಕ್ತಿ, ಶಿಸ್ತು, ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಮಹತ್ವವನ್ನು ಸಾರುವ ಒಂದು ವೇದಿಕೆಯಾಗಿದೆ. ವಿಶೇಷವಾಗಿ ಮಹಿಳೆಯರ ವಿಚಾರಕ್ಕೆ ಬಂದಾಗ ಆತ್ಮರಕ್ಷಣೆಯ ಕಲೆ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ಯಾವುದೇ ಪರಿಸ್ಥಿತಿಯಲ್ಲೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೊಂದಿರಬೇಕು. ಅದಕ್ಕಾಗಿ ಟೇಕ್ವಾಂಡೋ, ಕರಾಟೆ ಸೇರಿದಂತೆ ಆತ್ಮರಕ್ಷಣಾ ಕಲೆಗಳ ತರಬೇತಿ ಸಹಕಾರಿಯಾಗಿದೆ ಎಂದರು. ತುಮಕೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಸುದೀಪ್ ಕುಮಾರ್, ಗಣೇಶ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾದಲ್ಲಿ ಕಂಬಳ ಸರಿಯಲ್ಲ: ಪ್ರಮೋದಾ ದೇವಿ
ಮುಂಗಾರು ಅಂತ್ಯದ ಮಳೆಗೆ ಮೂರು ಸಾವು