ಡಿಸಿ ಕಚೇರಿ ಎಫ್‌ಡಿಎ ಮನೆಗಳ ಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : Sep 23, 2026, 01:15 AM IST
   ಸಿಕೆಬಿ-5 ಜೆ. ದರ್ಶನ್ ಗೌಡ         ಸಿಕೆಬಿ-6  ಲೋಕಾ ದಾಳಿಗೆ ಒಳಗಾದ ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಜೆ. ದರ್ಶನ್ ಗೌಡ ಮನೆ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೆ. ದರ್ಶನ್ ಗೌಡ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲೂಕಿನ ನಿವಾಸ ಸೇರಿ ಸುಮಾರು 8 ಕಡೆ ದಾಳಿ ನಡೆದಿದೆ.

ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜೆ. ದರ್ಶನ್ ಗೌಡ ಅವರ ನಿವಾಸ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೆ. ದರ್ಶನ್ ಗೌಡ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲೂಕಿನ ನಿವಾಸ ಸೇರಿ ಸುಮಾರು 8 ಕಡೆ ದಾಳಿ ನಡೆದಿದೆ.

ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಎರಡು ಮನೆಗಳು, ಮಲ್ಲಸಂದ್ರದಲ್ಲಿನ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯಲ್ಲಿನ ಒಂದು ಮನೆ, ಯಶವಂತಪುರ, ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕು ವಡನಘಟ್ಟದಲ್ಲಿನ ಅವರ ಮಾವನ ಮನೆಯ ಮೇಲೆಯೂ ಸಹಾ ದಾಳಿ ನಡೆದಿದೆ.

ಜೆ.ದರ್ಶನ್ ಗೌಡ ಅವರ ಆದಾಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಆದಾಯಕ್ಕಿಂತಲೂ ಆಸ್ತಿಯು ಶೇ. 138.22ರಷ್ಟು ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ಸಿಕೆಬಿ-5 ಜೆ. ದರ್ಶನ್ ಗೌಡ

ಸಿಕೆಬಿ-6 ಲೋಕಾ ದಾಳಿಗೆ ಒಳಗಾದ ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಜೆ. ದರ್ಶನ್ ಗೌಡ ಮನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿ.ಎಫ್: ಕಾರ್ಮಿಕರ ವೇತನ‌ಮಿತಿ ₹ 25,000ಕ್ಕೆ ಹೆಚ್ಚಳ: ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ
ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ: ಡಾ. ಕಣ್ಣೂರ್