26ರ ಶನಿವಾರ ಸಂಜೆ 7 ಗಂಟೆಗೆ ನಗರ ಎಂ.ಜಿ.ರಸ್ತೆಯಲ್ಲಿರುವ ವಿಲಾಸಿ ಡಿಲೈಟ್ ಹೋಟೆಲ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ವಿಶೇಷ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ
ಕನ್ನಡಪ್ರಭ ವಾರ್ತೆ ತುಮಕೂರು ಜಮಾಆತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ವತಿಯಿಂದ 26ರ ಶನಿವಾರ ಸಂಜೆ 7 ಗಂಟೆಗೆ ನಗರ ಎಂ.ಜಿ.ರಸ್ತೆಯಲ್ಲಿರುವ ವಿಲಾಸಿ ಡಿಲೈಟ್ ಹೋಟೆಲ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ವಿಶೇಷ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾ ಆತೆಇಸ್ಲಾಮೀ ಹಿಂದ್‌ನ ಸ್ಥಾನಿಯ ಅಧ್ಯಕ್ಷ ಅಸ್ರಾರ್ ಅಹಮದ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಹಿಳಾ ಸೀರತ್ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ವಿಷಯದ ಮೇಲೆ ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕರಾದ ಕುಲ್ಸೂಮ್ ಅಬೂಬಕ್ಕರ್ ಅವರು ಮಾತನಾಡಲಿದ್ದಾರೆ. ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತ ಪ್ರವೇಶವಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸೀರತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಅಭಿಯಾನದ ಭಾಗವಾದ ಪ್ರವಾದಿ ಮುಹಮ್ಮದ್‌ರ(ಸ) ಜೀವನ ಮತ್ತು ಸಂದೇಶ ಎಂಬ ವಿಷಯದ ಮೇಲೆ ನಡೆಯುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಮುಸ್ಲಿಂಯೇತರ ಶಿಕ್ಷಕರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನವಾಗಿ 20 ಮತ್ತು ತೃತೀಯ ಬಹುಮಾನವಾಗಿ 15 ಸಾವಿರ ರು. ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಮಾ ಆತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಸ್ಥಾನಿಕ ಪ್ರಮುಖರಾದ ಹಾಜಿರಾ ಬೀ, ಸಭೀನಾ ಭಾನು, ಸಾಹಿತಿಗಳಾದ ಬಾ.ಹ.ರಮಾಕುಮಾರಿ, ಆಸ್ಮಾ ಫೀರ್‌ದೋಸ್, ಶಮಿನಾ ಭಾನು, ಮಲ್ಲಿಕಾ ಉಲ್ಲಪತ್, ಜೀಯಾವುಲ್ಲಾ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.