ಬಡವರನ್ನು ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ

KannadaprabhaNewsNetwork |  
Published : Sep 24, 2025, 01:04 AM IST
ನಡಹಳ್ಳಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಹಕಾರಿ ರಂಗದಲ್ಲಿ ಬಡವರನ್ನು ಮೇಲೆತ್ತಲು ಎಷ್ಟು ಸಾಧ್ಯವಿದೆಯೋ ಅಷ್ಟು ಅವರನ್ನು ನಾವು ಅಭಿವೃದ್ಧಿ ಮಾಡಿದರೆ ದೇಶ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತದೆ. ಸಾಲ ಕೊಡಬೇಕಾದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೂರಾರು ಕಂಡಿಷನ್ಸ್ ಹಾಕುತ್ತವೆ. ಆದರೆ ಸಹಕಾರ ಸಂಘಗಳು, ಬ್ಯಾಂಕ್‌ಗಳು ವ್ಯಕ್ತಿಯ ಪ್ರಾಮಾಣಿಕತೆಯ ಮೇಲೆ ಸಾಲ ನೀಡುತ್ತವೆ. ಜವಾಬ್ದಾರಿ ಇಲ್ಲದವರಿಗೆ ಸಾಲ ಕೊಟ್ಟರೆ ಬ್ಯಾಂಕ್‌ಗಳು ದಿವಾಳಿಯಾಗುತ್ತವೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಹಕಾರಿ ರಂಗದಲ್ಲಿ ಬಡವರನ್ನು ಮೇಲೆತ್ತಲು ಎಷ್ಟು ಸಾಧ್ಯವಿದೆಯೋ ಅಷ್ಟು ಅವರನ್ನು ನಾವು ಅಭಿವೃದ್ಧಿ ಮಾಡಿದರೆ ದೇಶ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತದೆ. ಸಾಲ ಕೊಡಬೇಕಾದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೂರಾರು ಕಂಡಿಷನ್ಸ್ ಹಾಕುತ್ತವೆ. ಆದರೆ ಸಹಕಾರ ಸಂಘಗಳು, ಬ್ಯಾಂಕ್‌ಗಳು ವ್ಯಕ್ತಿಯ ಪ್ರಾಮಾಣಿಕತೆಯ ಮೇಲೆ ಸಾಲ ನೀಡುತ್ತವೆ. ಜವಾಬ್ದಾರಿ ಇಲ್ಲದವರಿಗೆ ಸಾಲ ಕೊಟ್ಟರೆ ಬ್ಯಾಂಕ್‌ಗಳು ದಿವಾಳಿಯಾಗುತ್ತವೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ರಾಘವೇಂದ್ರ ಮಂಗಲಭವನದಲ್ಲಿ ಬನಶಂಕರಿ ಪತ್ತಿನ ಸಹಕಾರಿ ಸಂಘದ ರಜತಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದ ನಂತರ ಸಾಕಷ್ಟು ಬದಲಾವಣೆಯಾಗಿದ್ದು, ಜನರಿಗೆ ಹೊರೆಯಾಗದಂತೆ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಪ್ರಾಮಾಣಿಕತೆ ಇರಬೇಕು. ಆಡಳಿತ ಮಂಡಳಿಯವರು ಸಾಲ ವಸೂಲಾತಿಗೆ ತೆರಳಿದರೆ ಸಂಘದ ಆರ್ಥಿಕ ಶಕ್ತಿ ಚೇತರಿಕೆಯಾಗುತ್ತದೆ. ಬನಶಂಕರಿ ಸಂಘದಿಂದ ಹೆಚ್ಚಿನ ವ್ಯವಹಾರ ವಿಸ್ತರಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿ ಸಾಧಿಸಲು ಸರಿಯಾದ ಸಮಯಕ್ಕೆ ಸಾಲ ಮರುಪಾವತಿಯಾಗಬೇಕು ಎಂದು ತಿಳಿಸಿದರು.

ಹೊಸಮಠದ ಅಮರೇಶ್ವರ ದೇವರು, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕಿ ಭಾಗ್ಯಶ್ರೀ ಎಸ್.ಕೆ, ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನಂದ ಹುಲಮನಿ, ಬಾಗಲಕೋಟ ನೇಕಾರ ಸಮಾಜದ ಮುಖಂಡ ಈರಣ್ಣ ಚಲ್ಮಿ, ಉದ್ಯಮಿ ಸತೀಶ ಓಸ್ವಾಲ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಪ್ಯಾಟಿಗೌಡರ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸಂಘದ ಅಧ್ಯಕ್ಷ ಶಂಕರ ಹೆಬ್ಬಾಳ, ಉಪಾಧ್ಯಕ್ಷ ರಮೇಶ ಹೆಬ್ಬಾಳ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ, ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ, ನಿರ್ದೇಶಕರಾದ ಸುಭಾಷ ರುದ್ರಗಂಟಿ, ಬಸವರಾಜ ಅಗಸಬಾಳ, ಬಸಪ್ಪ ಹುಣಶ್ಯಾಳ, ಸಂಗಪ್ಪ ಕಲ್ಲುಂಡಿ, ದ್ಯಾವಪ್ಪ ಹುಣಶ್ಯಾಳ, ಉಮೇಶ ಪ್ಯಾಟಿಗೌಡರ, ಜಯಶ್ರೀ ಹೆಬ್ಬಾಳ, ಚಂದ್ರಕಾಂತ ಹೆಬ್ಬಾಳ, ಶಂಕ್ರಮ ಪ್ಯಾಟಿಗೌಡರ, ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಪಣಿಗೋಳ, ಸಂಘದ ನಾಲತವಾಡ ಕಚೇರಿಯ ಸಲಹಾ ಸಮಿತಿ ಸದಸ್ಯರು ಇದ್ದರು. ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿದರು. ರಮೇಶ ಹೆಬ್ಬಾಳ ಸ್ವಾಗತಿಸಿದರು. ಗಣೇಶ ಮಂಗಳೂರ ಹಾಗೂ ಸರಸ್ವತಿ ಹುಣಶ್ಯಾಳ ನಿರೂಪಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ:

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಕಾಶೀನಾಥ ಹೆಬ್ಬಾಳ, ಈರಣ್ಣ ಚಲ್ಮಿ, ಬಸವರಾಜ ಪಣಿಗೋಳ, ದೇವೇಂದ್ರಪ್ಪ ಬೇಲಾಳ, ಬಸವರಾಜ ಮುದ್ದೇಬಿಹಾಳ, ಶಂಕರಲಿಂಗ ಹುಣಶ್ಯಾಳ, ಶಿವಶಂಕರ ಪ್ಯಾಟಿಗೌಡರ, ಬಸವರಾಜ ಹಾದಿಮನಿ, ಎಸ್.ಎಂ.ಚಳಗೇರಿ, ಪಿ.ಎನ್.ಬಿರಾದಾರ, ಎಂ.ಆರ್.ಪತ್ತಾರ, ಸುಭಾಷ ಚಿತ್ತರಗಿಯನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಾಕ್ಷಿ ಹೆಬ್ಬಾಳ, ಅನುರಾಧಾ ರುದ್ರಗಂಟಿ, ನಂದನ ಬೇಲಾಳ, ಸಂಗಮೇಶ ಗುಡಗುಂಟಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಬನಶ್ರೀ ಮುದ್ದೇಬಿಹಾಳ, ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದ ಗಿರೀಶ ಕಲ್ಲುಂಡಿ ಅವರನ್ನು ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ