ಕುಲಶಾಸ್ತ್ರೀಯ ಅಧ್ಯಯನದಿಂದ ಅಭಿವೃದ್ಧಿ: ವಿಶ್ವಕರ್ಮ ಸಮುದಾಯದ ಮುಖಂಡ ಶಾಮಣ್ಣ ಆಚಾರ್ಯ

KannadaprabhaNewsNetwork | Published : Nov 30, 2024 12:49 AM

ಸಾರಾಂಶ

ರಾಜ್ಯದ ವಿಶ್ವಕರ್ಮರ ಕುಲಶಾಸ್ತ್ರೀಯ ಅಧ್ಯಯನ ವಿಶ್ವಕರ್ಮರ ಮುಂದಿನ ತಲೆಮಾರಿಗೆ ವಿಶ್ವಕರ್ಮರ ಶ್ರೇಯೋಭೀವೃದ್ದಿಗೆ ಮತ್ತು ಏಳಿಗೆಗಾಗಿ ಅಗತ್ಯವಾಗಿದೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡ ಶಾಮಣ್ಣ ಆಚಾರ್ಯ ಹೇಳಿದರು. ಶಿರಾದಲ್ಲಿ ವಿಶ್ವಕರ್ಮರ ಕುಲಶಾಸ್ತ್ರೀಯ ಅದ್ಯಯನಕ್ಕೆ ಆಗಮಿಸಿದ್ದ ಅಧ್ಯಯನ ತಂಡಕ್ಕೆ ವಿರ್ಶಕರ್ಮ ಜನಾಂಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದ ವಿಶ್ವಕರ್ಮರ ಕುಲ ಶಾಸ್ತ್ರೀಯ ಅಧ್ಯಯನ ವಿಶ್ವಕರ್ಮರ ಮುಂದಿನ ತಲೆಮಾರಿಗೆ ವಿಶ್ವಕರ್ಮರ ಶ್ರೇಯೋಭೀವೃದ್ದಿಗೆ ಮತ್ತು ಏಳಿಗೆಗಾಗಿ ಅಗತ್ಯವಾಗಿದೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡ ಶಾಮಣ್ಣ ಆಚಾರ್ಯ ಹೇಳಿದರು.

ತುಮಕೂರಿನ ಶ್ರೀಕ್ಷೇತ್ರ ಕೈದಾಳ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಡಿ.ದೇವರಾಜು ಅರಸು ಇಲಾಖೆ ಹಾಗೂ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯ ಹೊರಗುಳಿಯುವಿಕೆ, ಒಳಗುಳಿಯುವಿಕೆ ಸಂಶೋಧನಾ ಸಂಸ್ಥೆ ವತಿಯಿಂದ ವಿಶ್ವಕರ್ಮರ ಕುಲಶಾಸ್ತ್ರೀಯ ಅದ್ಯಯನಕ್ಕೆ ಆಗಮಿಸಿದ್ದ ಅಧ್ಯಯನ ತಂಡಕ್ಕೆ ವಿರ್ಶಕರ್ಮ ಜನಾಂಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ವಿಶ್ವಕರ್ಮರ ಕುಲಶಾಸ್ತ್ರೀಯ ಅಧ್ಯಯನದ ಉದ್ದೇಶ ವಿಶ್ವಕರ್ಮರು ಅಭಿಯಂತರರನ್ನ ಈ ಜಗತ್ತಿಗೆ ಪರಿಚಯಿಸಿದರು. ಈ ಜಗತ್ತಿಗೆ ಕಲೆ, ಸಂಸ್ಕೃತಿ ಸಂಗೀತ, ಸಾಹಿತ್ಯ, ಶಿಲ್ಪ ಕಲೆಯನ್ನು ಅಪಾರವಾಗಿ ಕೊಡುಗೆಯನ್ನು ಕೊಟ್ಟಿರುವದಕ್ಕೆ ವಿಶ್ವಕರ್ಮರಿಗೆ ರಾಜ್ಯ ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಿ ಆರ್ಥಿಕ, ಸಾಮಾಜಿಕ, ಶಿಕ್ಷಣ, ಉದ್ಯೋಗ, ರಾಜಕೀಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳನ್ನು ಪಡೆಯುವುದಕ್ಕೆ ಈ ಅಧ್ಯಯನವನ್ನು ರಾಜ್ಯಾದ್ಯಂತ ಸಂಶೋಧನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಶ್ರೀ ಕ್ಷೇತ್ರದ ಕೈದಾಳ ಶ್ರೀ ಚನ್ನಕೇಶವ ದೇವಸ್ಥಾನದ ಪುರೋಹಿತರು ಜಯಸಿಂಹ ಮಾತನಾಡಿ ಶ್ರೀ ಚನ್ನಕೇಶವ ದೇಗುಲ 900 ವರ್ಷಗಳ ಇತಿಹಾಸ ಹೊಂದಿದೆ. ವಾಸ್ತ ಶಿಲ್ಪಿ ಅಮರ ಶಿಲ್ಪಿ ಜಕಣಾಚಾರಿ ರವರು ಕೈ ಇಲ್ಲದೆ ಡಂಕಣ ಚಾರಿ ಸೇರಿ ದೇಗುಲ ಶ್ರೀ ಚನ್ನಕೇಶವ ದೇವಸ್ಥಾನವನ್ನು ಕಲ್ಲಿನ ಕುಸುರಿ ಶಿಲ್ಪ ಕೆಲಸ ವನ್ನು ಪ್ರಾಚೀನ ಕಾಲದಲ್ಲಿ ಮಾಡಿದದಾರೆ. ದೇವ ಶಿಲ್ಪಿ ಜಕಣಾಚಾರಿ ಐತಿಹಾಸಿಕ ವ್ಯಕ್ತಿ ಕಾಲ್ಪನಿಕ ಅಲ್ಲ ಕಾಲ್ಪನಿಕ ವ್ಯಕ್ತಿ ಅನುವುದು ಸುಳ್ಳು ಅವರು ಮಾಡಿರುವ ಕೈದಾಳ ಕ್ಷೇತ್ರ ಶ್ರೀ ಚನ್ನಕೇಶವ ಶಿಲ್ಪ ಕಲೆಯೇ ಇದಕ್ಕೆ ಸಾಕ್ಷಿ ಎಂದರು. ವಿಶ್ವಕರ್ಮ ಮುಖಂಡ ಎಸ್.ಜಿ.ರುದ್ರಾಚಾರ್ ಮಾತನಾಡಿ ಅವರು ವಿಶ್ವಕರ್ಮರ 41ಉಪಜಾತಿಯಲ್ಲಿ ಬರುವ ಅಕ್ಕಸಾಲಿಗ ಎಂಬುವುದು ತಪ್ಪು ವ್ಯಾಖ್ಯಾನವಾಗಿದೆ. ಈ ಅಕ್ಕಸಾಲಿಗ ಪದ ಬಳಕೆ ನಿಷೇದಿಸಿ. ವಿಶ್ವಕರ್ಮರ ಪಂಡಿತರು ಹೇಳುವ ಪ್ರಕಾರ ಅರ್ಕಶಾಲೆ ಎಂದು ಸೇರ್ಪಡೆಗೊಳಿಸಿ. ಸರಕಾರದಮಟ್ಟದಲ್ಲಿ ಅರ್ಕ ಶಾಲೆ ಎಂದು ಪ್ರಚಾರ ಮಾಡಬೇಕು. ವಿಶ್ವಕರ್ಮ ಉಪಜಾತಿಗೆ ಮುಜುಗರ ತಪ್ಪಿಸಿ ಎಂದರು. ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಸಂಶೋಧನ ತಂಡದ ಪ್ರೋ. ಡಿ.ಸಿ.ನಂಜುಂಡ, ಡಾ.ಎಂ.ಮಹಾದೇವ್, ಡಾ.ಕೃಷ್ಣಮೂರ್ತಿ, ವಿಶ್ವಕರ್ಮ ಮುಖಂಡರಾದ ಕೃಷ್ಣಮೂರ್ತಿ.ಕೆ.ವಿ, ಶಾಮಣ್ಣ ಆಚಾರ್ಯ, ಅಶ್ವಥ ನಾರಾಯಣ ಚಾರ್ಯ, ಸೋಮಶೇಖರಾಚಾರ್ಯ, ಉಮ ಮಹೇಶ ಚಾರ್ಯ, ಚಿಕ್ಕಸ್ವಾಮಿ ಆಚಾರ್ಯ, ಭದ್ರಚಾರ್ಯ, ವೀರಬ್ರಹ್ಮಚಾರ್, ವಿಶ್ವಮೂರ್ತಿ.ಎನ್ ಸೇರಿದಂತೆ ಹಲವರು ಹಾಜರಿದ್ದರು.

Share this article