ಎಸ್ಸಿ-ಎಸ್ಟಿ ಅನುದಾನವನ್ನು ಈಗಾಗಲೇ ಸಾಕಷ್ಟು ಬಳಸಿಕೊಂಡಿದ್ದು, ಇರುವ ಹಣವನ್ನು ಯಾವ ಯಾವ ಇಲಾಖೆಗೆ ಕಳುಹಿಸಬೇಕು ಎನ್ನುವ ಬಗ್ಗೆ ಸಿಎಂ ಚಿಂತನೆಯಲ್ಲಿದ್ದಾರೆ. ರಾಜ್ಯದ ಖಜಾನೆಯಂತೂ ಖಾಲಿಯಾಗಿದೆ. ಕಾರ್ಯರೂಪಕ್ಕೆ ತರುವ ಅಭಿವೃದ್ಧಿ ಯಾವುದೂ ಆಗುತ್ತಿಲ್ಲ. ಆದರೂ ೨೦೦ ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಎನ್ನುತ್ತಾರೆ.
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರಕಾರದ ೫ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಎನ್ನುವುದು ಚುನಾವಣೆ ಸಮಯ ಹಾಗೂ ಭಾಷಣಗಳಿಗೆ ಮಾತ್ರವೇ ಸೀಮಿತವಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್‌ರೆಡ್ಡಿ ಲೇವಡಿ ಮಾಡಿದರು.ತಾಲೂಕಿನ ವೇಮಗಲ್ ಸಮೀಪ ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅವರ ತೋಟದ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಎಸ್ಸಿ-ಎಸ್ಟಿ ಅನುದಾನವನ್ನು ಈಗಾಗಲೇ ಸಾಕಷ್ಟು ಬಳಸಿಕೊಂಡಿದ್ದು, ಇರುವ ಹಣವನ್ನು ಯಾವ ಯಾವ ಇಲಾಖೆಗೆ ಕಳುಹಿಸಬೇಕು ಎನ್ನುವ ಬಗ್ಗೆ ಸಿಎಂ ಚಿಂತನೆಯಲ್ಲಿದ್ದಾರೆ. ರಾಜ್ಯದ ಖಜಾನೆಯಂತೂ ಖಾಲಿಯಾಗಿದೆ. ಕಾರ್ಯರೂಪಕ್ಕೆ ತರುವ ಅಭಿವೃದ್ಧಿ ಯಾವುದೂ ಆಗುತ್ತಿಲ್ಲ. ಆದರೂ ೨೦೦ ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಎನ್ನುತ್ತಾರೆ, ಕಡೆಗೆ ೨ ಕೋಟಿ ಇರಲಿ, ಕನಿಷ್ಟಪಕ್ಷ ೨೦ ಲಕ್ಷರೂ ಬಿಲ್ ಸಹ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.ವೇಮಗಲ್-ಕುರುಗಲ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಆಗುತ್ತಿರುವ ಮೋಸದ ಬಗ್ಗೆ ವಿಚಾರ ತಲುಪಿಸಲು ಮುಖಂಡರು ಮುಂದಾಗಲಿದ್ದಾರೆ ಎಂದರು.ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಳಉಚಿತ ಯೋಜನೆಗಳ ಬಗ್ಗೆ ತಾಯಂದಿರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದು ಒಂದು ಕಡೆಯಾದರೆ, ಸಿಎಂ ಕುರ್ಚಿಗಾಗಿ ಕಿತ್ತಾಟ ತೀವ್ರವಾಗಿದೆ. ಒಟ್ಟಾರೆಯಾಗಿ ಚುನಾವಣೆಗಳಲ್ಲಿ ಸರಿಯಾದ ಉತ್ತರ ಜನರು ಕೊಡುತ್ತಾರೆ ಎಂದ ಅವರು, ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರೆಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಎಂಎಲ್ಸಿ ಇಂಚರ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.