ಜೀವಾತ್ಮರ ಜೀವ ಹೋಗುವಾಗ ಅಭಿವೃದ್ಧಿಗೆ ಅರ್ಥವಿಲ್ಲ

KannadaprabhaNewsNetwork |  
Published : Apr 20, 2026, 02:15 AM IST
19ಕೆಪಿಎಲ್27 ನಗರಸಭೆ ಎದುರು  171 ನೇ ದಿನದ ಬಲ್ಡೋಟ ಹಟಾವೋ ಧರಣಿ ಸತ್ಯಾಗ್ರಹ | Kannada Prabha

ಸಾರಾಂಶ

ಪ್ರಕೃತಿ ಉಳಿದರಷ್ಟೇ ಜೀವಾತ್ಮರು ಉಳಿಯುತ್ತಾರೆ. ಜೀವಾತ್ಮರ ಜೀವ ಹೋಗುವಾಗ ಅಭಿವೃದ್ಧಿಗೆ ಅರ್ಥವಿಲ್ಲ

ಕೊಪ್ಪಳ: ಮಾಲಿನ್ಯದಿಂದ ಆರೋಗ್ಯ ಹಾಳಾದರೇ ಯಾರಿಗಾಗಿ ಅಭಿವೃದ್ಧಿ,ಅಂಥ ಅಭಿವೃದ್ಧಿಯಿಂದ ಏನು ಪ್ರಯೋಜನ ಎಂದು ಬೀದರ ಲಿಂಗಾಯತ ಮಹಾಮಠದ ಶ್ರೀಪ್ರಭುದೇವ ಶ್ರೀಗಳು ಹೇಳಿದ್ದಾರೆ.

ನಗರಸಭೆ ಎದುರು 171ನೇ ದಿನದ ಬಲ್ಡೋಟ ಹಟಾವೋ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಕೊಪ್ಪಳ ಜನರ ಭಾವ ಗಮನಿಸುತ್ತಿದ್ದೇನೆ. ಅವರು ಏನೋ ಕಳೆದು ಹೋಗುತ್ತಿದೆ ಎನ್ನುವ ಮುಖಭಾವ ಕಾಣುತ್ತಿದೆ. ಪ್ರವಚನ ಆಯೋಜಕರು ನನಗೆ ಬಾಧಿತ ಹಳ್ಳಿಯ ಪರಿಸ್ಥಿತಿ ಹೇಳಿದ್ದಾರೆ. ಇಲ್ಲಿನ ವಾತಾವರಣ ಶುದ್ಧವಾಗಿಲ್ಲ.ಧೂಳು, ಹೊಗೆ, ಬೂದಿಯ ಮಾಲಿನ್ಯ ತುಂಗಭದ್ರಾ ನೀರು ವಿಷಗೊಳಿಸಿದೆ ಎಂದು ಗೊತ್ತಾಗಿದೆ. ಅದೇ ನೀರು ಕುಡಿದು ಜನರು ಆರೋಗ್ಯದಿಂದ ಇರಲು ಹೇಗೆ ಸಾಧ್ಯ. ₹54 ಸಾವಿರ ಹೂಡಿಕೆ ಎಂದರೆ ಖುಷಿಪಡುವ ವಿಚಾರವಲ್ಲ. ಇದರಿಂದ ಉಂಟಾಗುವ ಮಾಲಿನ್ಯಕ್ಕೆ ಯಾರು ಹೊಣೆಯಾಗುತ್ತಾರೆ. ಪ್ರಕೃತಿಯೇ ದೊಡ್ಡ ದೇವರು, ಪ್ರಕೃತಿ ಉಳಿದರಷ್ಟೇ ಜೀವಾತ್ಮರು ಉಳಿಯುತ್ತಾರೆ. ಜೀವಾತ್ಮರ ಜೀವ ಹೋಗುವಾಗ ಅಭಿವೃದ್ಧಿಗೆ ಅರ್ಥವಿಲ್ಲ.ಅಂತಹ ಅಭಿವೃದ್ಧಿ ಯಾರೂ ಒಪ್ಪುವುದಿಲ್ಲ. ನಾನು ಮುಂದಿನ ದಿನಗಳಲ್ಲಿ ಕೊಪ್ಪಳಕ್ಕೆ ಬಂದು ಬಾಧಿತ ಹಿರೇಬಗನಾಳ, ಹಾಲವರ್ತಿ,ಕುಣಿಕೇರಿ, ಕಾಸನಕಂಡಿಗೆ ಭೇಟಿ ನೀಡುತ್ತೇನೆ. ಈ ಹೋರಾಟ ಸಾತ್ವಿಕ ಶಕ್ತಿಯಿಂದ ಸಾಗುತ್ತಿದ್ದು ಜೀವಾತ್ಮರ ಜೀವ ಉಳಿಯಲು ಹೋರಾಟ ಗೆಲ್ಲುತ್ತದೆ ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ರಾಜೇಶ ಸಸಿಮಠ, ಹನುಮೇಶ ಕಲಮಂಗಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಸರೋಜಾ ಬಾಕಳೆ, ಕಾವ್ಯಾ ಗಡಾದ, ವಿದ್ಯಾ ನಾಲ್ವಾಡ, ಸುಪ್ರೀತ ಪತಂಗೆ, ಸಲೀಮಾ ಜಾನ್, ಪ್ರಸಾದ ಹಿರೇಮಠ, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ.ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ರವಿ ಕಾಂತನವರ, ಸುಭಾನ ಸಾಬ್ ನೀರಲಗಿ, ರಾಜಶೇಖರ ಏಳುಬಾವಿ, ರಾಜ್ಯ ರೈತ ಸಂಘದ ಭೀಮಸೇನ ಕಲಕೇರಿ, ಮಹಾದೇವಪ್ಪ ಮಾವಿನಮಡು, ರೇವಣಪ್ಪ ಕುರಿ, ಶಿವಪ್ಪ ಹಲಗೇರಿ, ಹುಸೇನಮ್ಮ ದೊಡ್ಡಮನಿ, ಯಮನೂರಪ್ಪ ಹಾಲಳ್ಳಿ, ಗಾಳೆಪ್ಪ ಪೂಜಾರ, ಪಂಪಣ್ಣ ಚಿಂತಪಲ್ಲಿ, ಹುಸೇನಮ್ಮ ಮಾಳಿಗಿಮನಿ, ದುರುಗಮ್ಮ ಕುರುಗೋಡು, ವೆಂಕಣ್ಣ ತಳವಾರ, ಸುಂಕಮ್ಮ ಪಡಚಿಂತಿ, ರತ್ನಮ್ಮ ದೊಡ್ಡಮನಿ, ಗಂಗಪ್ಪ ಡಂಬಳ, ಭೀಮಪ್ಪ ಯಲಬುರ್ಗಾ, ವಿಜಯಮಹಾಂತೇಶ ಹಟ್ಟಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿ