ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಚಿಕ್ಕಂಗಡಿ ಬೀದಿಯ ರಾಮಮಂದಿರದಲ್ಲಿ ಸಿಪಿಆರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಮಾಜದ ವಿದ್ಯಾರ್ಥಿ ವೇತನ ಕೊಡುಗೆ ಹಾಗೂ ಸಾಧಕರಿಗ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಎಂಬುವುದು ಸಾಧಕರ ಸ್ವತ್ತು. ಬಡವರು , ಶ್ರೀಮಂತರು ಎಂಬ ಭೇದಭಾವವಿಲ್ಲ. ಬಡತನವು ಶಿಕ್ಷಣಕ್ಕೆ ಪ್ರೇರಣೆ ನೀಡುತ್ತದೆ. ಸಾಧಿಸುವ ಛಲ ಬೇಕು. ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಪರಿಶ್ರಮ ಪಟ್ಟು ಓದುವುದನ್ನು ರೂಢಿಸಿಕೊಳ್ಳಬೇಕು. ಸಿ. ಪಿ. ರಾಜಣ್ಣ ಅವರು ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲು ಟ್ರಸ್ಟ್ ರಚನೆ ಮಾಡಿ, ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇಂಥ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.ನಗರದ ದಾಸ ಬಣಜಿಗರ ಸಂಘದ ಅಧ್ಯಕ್ಷರು, ನಗರಸಭೆ ಮಾಜಿ ಸದಸ್ಯ, ಟ್ರಸ್ಟ್‌ನ ಖಜಾಂಚಿ ಚಂದ್ರಶೇಖರ್ ಮಾತನಾಡಿ, ಇದೊಂದು ಪವಿತ್ರವಾದ ಕಾರ್ಯವಾಗಿದೆ. ಸಮಾಜದ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಿ.ಪಿ. ರಾಜಣ್ಣ ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅವರು ಕುಟುಂಬಕ್ಕೆ ಮತ್ತು ಟ್ರಸ್ಟ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕರಾದ ಸಿ.ಕೆ. ಜಯಶ್ರೀ, ಅಧ್ಯಕ್ಷ ಎನ್. ಸತೀಶ್, ಉಪಾಧ್ಯಕ್ಷ ಶೇಖರ್, ಕಾರ್ಯದರ್ಶಿ ಸಿ.ವಿ. ರಾಘವೇಂದ್ರ, ಶ್ರೀನಿವಾಸಶೆಟ್ಟಿ, ಎಸ್‌ಆರ್‌ಎಸ್ ಶ್ರೀನಿವಾಸ್, ಶಂಕರಶೆಟ್ಟಿ, ಪದ್ಮ ಪುರುಷೋತ್ತಮ್, ಸುಬ್ರಮಣ್ಯ, ಮೊದಲಾದವರು ಇದ್ದರು.