ಪಕ್ಷಾತೀತದ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ: ಸಚಿವ ಮಲ್ಲಿಕಾರ್ಜುನ

KannadaprabhaNewsNetwork | Published : Nov 10, 2024 1:36 AM

ಸಾರಾಂಶ

Development is possible with non-partisan unity: Minister Mallikarjuna

-ಕೋಟೆಆಂಜನೇಯ ದೇವಸ್ಥಾನದ ಉದ್ಘಾಟನೆ । ಶಿಲಾಮೂರ್ತಿ, ನವಗ್ರಹ, ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ, ದಾವಣಗೆರೆ

ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸೇವೆಗಳನ್ನು ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ದೊಡ್ಡಬಾತಿ ಗ್ರಾಮದಲ್ಲಿ ಶ್ರೀಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ನವಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.

ಪುರಾತನ ಕಾಲದ ಬಾತಿ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಜೀರ್ಣೋದ್ಧಾರ ಮಾಡಿರುವುದು ಉತ್ತಮ ಸಂಗತಿ. ಇಲ್ಲಿನ ಗ್ರಾಮಸ್ಥರ ಒಗ್ಗಟ್ಟಿನ ಕಾರ್ಯವು ಮೆಚ್ಚುವಂತದ್ದು, ಒಗ್ಗಟ್ಟಿನಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ದೊಡ್ಡ ಬಾತಿ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಎಲ್ಲಾ ಗ್ರಾಮಗಳಲ್ಲಿಯು ಒಗ್ಗಟ್ಟು ಪಕ್ಷಾತೀತ ಪ್ರದರ್ಶನವಾಗಬೇಕು ಎಂದರು.

ಸರ್ಕಾರದಿಂದ ದೇವಸ್ಥಾನ ಅಭಿವೃದ್ಧಿಗೆ 8 ಲಕ್ಷ ರು.ನೀಡಲಾಗಿದೆ. 2001ರಲ್ಲಿ ನಾನು ಮೊದಲು ಮಂತ್ರಿಯಾದಗ ಬೇತೂರು ಗ್ರಾಮದಲ್ಲಿ ಮಹಿಳೆಯರು ಶೌಚಾಲಯ ಸಮಸ್ಯೆ ತೋಡಿಕೊಂಡಿದ್ದರು. ಹಲವರು ಸಾರ್ವಜನಿಕ ಶೌಚಾಲಯ ಬೇಕು ಎಂದರು.

ಪ್ರತಿ ಬೀದಿಯಲ್ಲಿ ಅಂಡರ್ ಗ್ರೌಂಡ್ ನಿರ್ಮಿಸಿ ಮಣ್ಣಿನ ಪೈಪ್ ಅಳವಡಿಸಲಾಯಿತು. 20 ವರ್ಷದ ಮಣ್ಣಿನ ಪೈಪ್ ಬದಲಾವಣೆಗೆ ಮುಂದಾಗಿದ್ದು ಪ್ಲಾಸ್ಟಿಕ್ ಪೈಪ್ ಅಳವಡಿಸುವ ಕಾರ್ಯದ ಜತೆಗೆ ಸಿವೆ ಸಿಸ್ಟಂ ಯೋಜನೆ ಮಾಡಲಾಗಿದೆ. ಯುಜಿಡಿ ಮೂಲಕ ನೇರವಾಗಿ ನೀರು ಅಂಡರ್ ಗ್ರೌಂಡ್ ತಲುಪುವುದು. ಪಂಚಾಯಿತಿಯಿಂದ ಉತ್ತಮ ರಸ್ತೆ, ಗ್ರಾಮಗಳ ಅಭಿವೃದ್ಧಿಗೆ ಅನುದಾನ ತರುವ ಕಾರ್ಯಗಳಾಗಬೇಕು ಕಾರ್ಯಗಳಾಗಬೇಕು ಎಂದರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ಬಾತಿ ಗ್ರಾಮದಲ್ಲಿ ಕ್ಯಾಂಪ್ ನಡೆಸಿದರು. ಅರಸಾಪುರ ಗ್ರಾಮಗಳಲ್ಲಿ ತಾಯಂದಿರುವ ಹಾಗೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. ಆರೋಗ್ಯಕ್ಕಾಗಿ ಕ್ಯಾಂಪ್ ಮುಂದವರೆಸಲು ಸಚಿವರು ಸಲಹೆ ನೀಡಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಈ ಹಿಂದೆ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಈ ಭಾಗದಲ್ಲಿ ಆರೋಗ್ಯ ಕ್ಯಾಂಪ್ ಹಾಕಲಾಗಿತ್ತು. ಆಗ ಗ್ರಾಮಸ್ಥರು ಕೈ ಜೋಡಿಸಿ ಕ್ಯಾಪ್ ಯಶಸ್ವಿಗೊಳಿಸಿದ್ದರು. ಗ್ರಾಮಸ್ಥರ ಒಗ್ಗಟ್ಟು ಹಾಗೂ ದಾನಿಗಳು ನೀಡಿದ ದೇಣಿಗೆಯಿಂದ ದೇಗುಲ ನಿರ್ಮಾಣ ಉತ್ತಮವಾಗಿದೆ ಎಂದರು.

ಮಹಿಳೆಯರು ಕುಟುಂಬ ನಿರ್ವಾಹಣೆಯ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಮುಂದಾಗಬೇಕು ಎಂದರು. ಸಮಸ್ಯೆಗಳೇನೇ ಇದ್ದರೂ ಸಹಕಾರ ಇದೆ ಎಂದರು.

ಉಚ್ಚಂಗಿದುರ್ಗ ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯ ಸ್ವಾಮಿ ವಹಿಸಿದ್ದರು. ಮಂಜುಳಾ ಜೆಸಿಬಿ ಹನುಮಂತಪ್ಪ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಜೆಸಿಬಿ ಹನುಮಂತಪ್ಪ, ಕೆ.ಜಿ ಉಮೇಶ್, ಬಾತಿ ಬಸವರಾಜ, ರೇಖಾ ಸತ್ಯನಾರಾಯಣ, ಮಾಗನಹಳ್ಳಿ ಪರಶುರಾಮ್, ಬೂದಾಳ್ ಬಾಬು, ಬಾತಿ ಶಿವಕುಮಾರ್, ಹುಲ್ಮನಿ ಗಣೇಶ್ ಮುಂತಾದವರು ಇದ್ದರು.

.......

ಬಾತಿ ಕೆರೆಗೆ ಹೈಟೆಕ್ ಸ್ಪರ್ಶ: ಬಾತಿಕೆರೆಗೆ ಯುಜಿಡಿ ನೀರು ಹರಿವುದನ್ನು ತಡೆಯಲು ಯೋಜನೆ ರೂಪಿಸಲಾಗಿದೆ. ಕೆರೆಯ ಅಭಿವೃದ್ಧಿ ಪಡಿಸಲು 12 ಕೋಟಿ ಮೀಸಲಿಡಲಾಗಿದ್ದು, ಯುಜಿಡಿ ಲೈನ್ ತಪ್ಪಿಸಲು ಗ್ರಾಮಸ್ಥರು ಮುಂದಾಗಬೇಕು. ದೊಡ್ಡ ಬಾತಿ, ಹಳೇಬಾತಿ, ಬೇತೂರು ಕಲ್ಪನಹಳ್ಳಿ, ಕಕ್ಕರಗೊಳ್ಳ ಹಾಗೂ ದೊಡ್ಡ ಗ್ರಾಮಗಳಿಗೆ ಯುಜಿಡಿ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೇ ಉತ್ತರ ಭಾಗದಲ್ಲಿ ಆಶ್ರಯ ಯೋಜನೆಯಡಿಯ ಕಾರ್ಯಗಳು ಜಾರಿಯಾಗುವುವು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

......

ಜಟ್ಟಿಂಗ್ ಮಿಷನ್: ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯಬೇಕು. ಈ ಹಿನ್ನಲೆ ಬೇತೂರು ಪಂಚಾಯ್ತಿಗೆ ರೂ. 35 ಲಕ್ಷ ವೆಚ್ಚದಲ್ಲಿ ಜಟ್ಟಿಂಗ್ ಮಿಷನ್ ನೀಡಲಾಗಿದೆ. ಮುಂದೆ ಎರಡೇರಡು ಪಂಚಾಯ್ತಿಗೆ ಒಂದು ಜಟ್ಟಿಂಗ್ ಮಿಷನ್ ನೀಡುವ ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಬೇಕು ಎಂದು ಸಚಿವರು ತಿಳಿಸಿದರು.

....

ಸಚಿವರ ಸ್ಪಂದನೆ: ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಪೂರೈಸಿದ ಗ್ರಾಮದ ಮಹಿಳೆಯೊಬ್ಬರು ತಮ್ಮೂರಿಗೆ ಜಿಲ್ಲಾಡಳಿತದಿಂದ ಬಾತಿಗೆ, ಬಾತಿಯಿಂದ ಹರಿಹರಕ್ಕೆ ಬಸ್ ಸೌಲಭ್ಯದ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಸಚಿವರು ತಕ್ಷಣ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಪೋನ್ ಮಹಿಳೆಗೆ ನೀಡಿದರು. ಈ ಮೂಲಕ ಮಹಿಳೆಯ ಬೇಡಿಕೆಗೆ ಸಚಿವರು ಸ್ಪಂದಿಸಿದ್ದು ಗ್ರಾಮಸ್ಥರಿಂದ ಮೆಚ್ಚುಗೆಗೆ ವ್ಯಕ್ತವಾಯಿತು.

......

ಫೋಟೊ: 9ಕೆಡಿವಿಜಿ41ದಾವಣಗೆರೆಯ ದೊಡ್ಡಬಾತಿಯ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಚಿವ ಎಸ್ಸೆಸ್ಸೆಂ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.......

ಕ್ಯಾಪ್ಷನ 9ಕೆಡಿವಿಜಿ42 ದಾವಣಗೆರೆಯ ದೊಡ್ಡಬಾತಿಯ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು.

.......

ಕ್ಯಾಪ್ಷನ 9ಕೆಡಿವಿಜಿ43 ದಾವಣಗೆರೆಯ ದೊಡ್ಡಬಾತಿಯ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು.

.......

ಕ್ಯಾಪ್ಷನ 9ಕೆಡಿವಿಜಿ44 ದಾವಣಗೆರೆಯ ದೊಡ್ಡಬಾತಿಯ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಸನ್ಮಾನಿಸಿದರು.

Share this article