ಸಂಘದ ಸರ್ವಸದಸ್ಯರ ಸಹಕಾರದಿಂದ ಅಭಿವೃದ್ಧಿ ಸಾಧ್ಯ

KannadaprabhaNewsNetwork |  
Published : Sep 23, 2024, 01:20 AM IST
ಪೊಟೊ-22 ಕೆ ಎನ್ ಎಲ್ ಎಮ್ 1-ನೆಲಮಂಗಲ ನಗರದ ಶ್ರೀಜಯದೇವ ವೀರಶೈವ ಭವನದಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ  103 ನೇ ವಾರ್ಷಿಕ ಮಹಾಸಭೆಯಲ್ಲಿ ಸೊಸೈಟಿಯಲ್ಲಿ 37 ವರ್ಷ ಸೇವೆಸಲ್ಲಿಸಿ ವಯೋ ನಿವೃತ್ತಿಹೊಂದಿದ ಸಿಬ್ಬಂಧಿ ಲೊಕೇಶ್ ಅವರನ್ನುಅಧ್ಯಕ್ಷ ಎನ್.ಚನ್ನಬಸವರಾಜುಮಾಜಿಅಧ್ಯಕ್ಷ ಎನ್.ಹೆಚ್.ಜಯದೇವಯ್ಯ ಸೊಸೈಟಿ ಉಪಾಧ್ಯಕ್ಷೆ  ರಾಧಾಬಾಯಿಗಂಗಾಧರ್‌ರಾವ್, ನಿರ್ದೇಶಕರಾದ ಎನ್.ಪಿ.ರಘುನಾಥ್, ಎನ್.ಕೃಷ್ಣಪ್ಪ, ಹೆಚ್.ಜಿ.ರಾಜು, ನಾರಾಯಣಗುಪ್ತ, ಎಸ್.ಎನ್.ಕಾರ್ತಿಕ್, ಕೇಶವಮೂರ್ತಿ, ಎಂ.ಎಸ್.ಗೋಪಾಲ್, ಭಾಗ್ಯಜ್ಯೋತಿ, ಕೆ.ಓ.ಮಹೇಶ್, ಎನ್.ಜಿ.ನಾಗರಾಜ್, ಕಾರ್ಯದರ್ಶಿ ಕವಿತಾಮೋಹನ್, ಸಲಹಾಸಮಿತಿ ಸದಸ್ಯರಾದ ಎನ್.ರಾಜಶೇಖರ್, ಎಂ.ಜಿ.ಲೊಕೇಶ್, ಮಂಜುನಾಥ್ ರವರು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು | Kannada Prabha

ಸಾರಾಂಶ

ನೆಲಮಂಗಲ: ಸರ್ವ ಸದಸ್ಯರ ಸಹಕಾರ ಹಾಗೂ ಸಲಹೆಗಳಿಂದಾಗಿ ಇಂದು ಟೌನ್ ಕೋ ಆಪರೇಟಿವ್ ಸೊಸೈಟಿ 103 ವಸಂತಗಳನ್ನು ತುಂಬಿ ಸಾವಿರಾರು ಮಂದಿಗೆ ಆರ್ಥಿಕವಾಗಿ ಸಹಕರಿಸಿರುವುದು ಹೆಮ್ಮೆಯ ವಿಚಾರ ಎಂದು ಟೌನ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಎನ್.ಎಚ್.ಜಯದೇವಯ್ಯ ಅಭಿಪ್ರಾಯಪಟ್ಟರು.

ನೆಲಮಂಗಲ: ಸರ್ವ ಸದಸ್ಯರ ಸಹಕಾರ ಹಾಗೂ ಸಲಹೆಗಳಿಂದಾಗಿ ಇಂದು ಟೌನ್ ಕೋ ಆಪರೇಟಿವ್ ಸೊಸೈಟಿ 103 ವಸಂತಗಳನ್ನು ತುಂಬಿ ಸಾವಿರಾರು ಮಂದಿಗೆ ಆರ್ಥಿಕವಾಗಿ ಸಹಕರಿಸಿರುವುದು ಹೆಮ್ಮೆಯ ವಿಚಾರ ಎಂದು ಟೌನ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಎನ್.ಎಚ್.ಜಯದೇವಯ್ಯ ಅಭಿಪ್ರಾಯಪಟ್ಟರು.

ನಗರದ ಶ್ರೀಜಯದೇವ ವೀರಶೈವ ಭವನದಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ 103ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ದೂರದೃಷ್ಟಿಯಿಂದ ಟೌನ್ ಕೋ ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿದ್ದು, ಇಂದು 103 ವರ್ಷಗಳನ್ನು ಪೂರೈಸಿ ಶತಮಾನಕಂಡ ನಗರದ ಏಕೈಕ ಸೊಸೈಟಿಯಾಗಿದೆ, ಸಂಘದ ಸರ್ವಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ಹೆಚ್ಚುಹೆಚ್ಚು ಠೇವಣಿಗಳನ್ನಿಟ್ಟಾಗ ಸಂಘ ಮತ್ತಷ್ಟು ಆರ್ಥಿಕವಾಗಿ ಸಬಲಾಗುವುದರೊಂದಿಗೆ ಸರ್ವ ಸದಸ್ಯರ ಆಷೋತ್ತರಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತದೆ, ಯಾವುದೇ ಒಂದು ಸಂಘದ ಸರ್ವಾಂಗೀಣ ಅಭಿವೃದ್ಧಿ ಸರ್ವ ಸದಸ್ಯರ ಸಹಕಾರದಿಂದ ಮಾತ್ರ ಸಾದ್ಯ, ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರಿಗೆ ಶೇ.30ರಷ್ಟು ಲಾಭಾಂಶವನ್ನು ಹಂಚಿಕೆ ಮಾಡಬೇಕು ಎಂದು ತಿಳಿಸಿದರು .

ಟೌನ್ ಸೊಸೈಟಿ ಅಧ್ಯಕ್ಷ ಎನ್.ಚನ್ನಬಸವರಾಜು ಮಾತನಾಡಿ, ನಗರದಲ್ಲಿ ಶತಮಾನ ಕಂಡ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಸೊಸೈಟಿ ಸರ್ವ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿರುವುದು ಸಂತಸವನ್ನುಂಟುಮಾಡಿದೆ. ಸಂಘವು ಆರ್ಥಿಕ ಚಟುವಟಿಕೆಗಳಿಂದಾಗಿ ಲಕ್ಷಾಂತರ ರುಪಾಯಿಗಳ ಲಾಭಾಂಶವನ್ನು ಹೊಂದಿದೆ, ಸಂಘದ ಸರ್ವಸದಸ್ಯರಿಗೆ ಲಾಭಾಂಶ ವಿಲೇವಾರಿಯನ್ನು ಮಾಡಲಾಗುತ್ತಿದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಸಂಘದ ಸದಸ್ಯರು ಠೇವಣಿಯನ್ನು ಇಡುವುದರ ಜೊತೆಗೆ ಆರ್ಥಿಕ ಚಟುವಟಿಕೆಯನ್ನು ಸಂಘದಲ್ಲಿಯೇ ನಡೆಸಿದಾಗ ಸಂಘದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸೊಸೈಟಿಯಲ್ಲಿ 37 ವರ್ಷ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸಿಬ್ಬಂದಿ ಲೋಕೇಶ್ ಅವರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು. 2024 ನೇ ಸಾಲಿನ ದಿನದರ್ಶಿಕೆಯನ್ನು ಸೊಸೈಟಿ ಸದಸ್ಯರಿಗೆ ಕೊಡುಗೆಯಾಗಿ ನೀಡಿದ ಶ್ರೀಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎನ್.ಎಸ್.ಶ್ರೀಗಣೇಶ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಸೊಸೈಟಿ ಉಪಾಧ್ಯಕ್ಷೆ ರಾಧಾಬಾಯಿಗಂಗಾಧರ್‌ರಾವ್, ನಿರ್ದೇಶಕರಾದ ಎನ್.ಪಿ.ರಘುನಾಥ್, ಎನ್.ಕೃಷ್ಣಪ್ಪ, ಎಚ್.ಜಿ.ರಾಜು, ನಾರಾಯಣಗುಪ್ತ, ಎಸ್.ಎನ್.ಕಾರ್ತಿಕ್, ಕೇಶವಮೂರ್ತಿ, ಎಂ.ಎಸ್.ಗೋಪಾಲ್, ಭಾಗ್ಯಜ್ಯೋತಿ, ಕೆ.ಒ.ಮಹೇಶ್, ಎನ್.ಜಿ.ನಾಗರಾಜ್, ಕಾರ್ಯದರ್ಶಿ ಕವಿತಾಮೋಹನ್, ಸಲಹಾಸಮಿತಿ ಸದಸ್ಯರಾದ ಎನ್.ರಾಜಶೇಖರ್, ಎಂ.ಜಿ.ಲೊಕೇಶ್, ಮಂಜುನಾಥ್,ನಗರಸಭೆ ಸದಸ್ಯರಾದ ಸುನಿಲ್‌ ಮೂಡ್, ಶಿವಕುಮಾರ್, ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ನಗರದಲ್ಲಿ ಬೀದಿ ನಾಯಿಗೆ ಶೆಲ್ಟರ್‌ : ಸರ್ಕಾರದೊಂದಿಗೆ ಚರ್ಚಿಸಿ ಕ್ರಮ
ಒಳಮೀಸಲಡಿ 101 ಜಾತಿಗೂ ನ್ಯಾಯ : ತಂಗಡಗಿ