ಕುರುಗೋಡು: ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸದೇ ಸಮಾನ ಮನಸ್ಕರು ಸೇರಿ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗರಿಹಳ್ಳಿ ಚಂದ್ರಶೇಖರ್ ಚಲಹೆ ನೀಡಿದರು.ಸಮೀಪದ ಸಾದಾಪುರ ಗ್ರಾಮದಲ್ಲಿ ಸಿರಿಗೇರಿ ಅನ್ನಪೂರ್ಣ ಕ್ರಿಯೇಷನ್ಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಿನೆಮಾ ಮಾಧ್ಯಮಗಳ ಸಂಬಂಧ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರನ್ನೂ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮರೆಯಬಾರದು ಎಂದ ಅವರು, ಮಹಿಳೆಯರಲ್ಲಿ ಕುಟುಂಬದ ಜವಾಬ್ದಾರಿಯ ಜತೆಗೆ ಗ್ರಾಮದ ಅಭಿವೃದ್ಧಿಪರ ಚಿಂತನೆಗಳು ಇರುತ್ತವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷ ನಂತರ ಅವರನ್ನು ನಂಬದಿರಿ. ಅವರು ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿ ಒಡೆದು ಹಾಳುವ ನೀತಿ ಅನುಸರಿಸುತ್ತಾರೆ. ಅದಕ್ಕೆ ಅವಕಾಶ ಕೊಡದೇ ಜನರಲ್ಲಿ ಗ್ರಾಮದ ಅಭಿವೃದ್ಧಿ ಮಂತ್ರ ಮಾತ್ರ ಜಪಿಸಬೇಕು ಎಂದು ಸಲಹೆ ನೀಡಿದರು.ನಿಜವಾದ ಕನ್ನಡ ಸೊಗಡು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಅಲ್ಲಿ ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಆಯೋಜಿಸಬೇಕು. ಮೌನವಾಗಿರುವ ಜನರನ್ನು ಎಚ್ಚರಿಸಬೇಕು ಎಂದರು.
ಜನರ ಜೀವನಕ್ಕೆ ಅತ್ತುರವಾದ ಸಾಹಿತ್ಯ ರಚಿಸವ ಅಗತ್ಯವಿದೆ. ಬದಲಾದ ಪರಿಸ್ಥಿತಿಯಲ್ಲಿ ಸಾಹಿತ್ಯ ಗಿರಾಕಿಗಳಿಗಾಗಿ ಬರೆಯುವ ವಸ್ತುವಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇದ ವ್ಯಕ್ತಪಡಿಸಿದರು.
ಅನ್ನಪೂರ್ಣ ಕ್ರಿಯೆಷನ್ಸ್ ಅಧ್ಯಕ್ಷ ಸಿರಿಗೇರಿ ರ್ರಿಸ್ವಾಮಿ ಕಾರ್ಯಕ್ರಮ ಕುರಿತು ಪ್ತಾಸ್ತಾವಿಕವಾಗಿ ಮಾತನಾಡಿ, ಸಿನೆಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಗಾದ ಹೆಸರು ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು ಒಂದು ಪುಟ್ಟ ಗ್ರಾಮದಲ್ಲಿ ಜನಿನಿಸಿ ನಾಡಿನಲ್ಲಿ ಹೆಸರು ಮಾಡಿದವರು. ಅವರು ಹುಟ್ಟಿದ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿಯಲ್ಲಿ ಐದು ದಿನಗಳ ಕಾರ್ಯಕ್ರಮ ಆಯೋಜಿಸಿ ಗ್ರಾಮದ ಜನರಿಗೆ ಬೇಕಾಗುವ ಆರೋಗ್ಯ, ಕೃಷಿ, ಸಾಹಿತ್ಯ ಶಿಬಿರಗಳನ್ನು ಆಯೋಜಿಸುತ್ತಾರೆ. ನಾಡಿನಲ್ಲಿ ಹೆಸರು ಮಾಡಿದ ಎಂದರು.
ಕುರುಗೋಡು೩ ಸಮೀಪದ ದಾಸಾಪುರ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ಆಯೋಜಿಸಿದ್ದ ಸಾಹಿತ್ಯ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದರು.